ಕೋಲಾರದಲ್ಲಿ ನಿಯಮ ಮೀರಿ ಮದ್ಯ ಮಾರಾಟ! ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ

ಕೋಲಾರ ಜಿಲ್ಲೆಯಲ್ಲಿ ನಿಮಗೆ ಹಗಲು ರಾತ್ರಿ ಊಟ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಎಣ್ಣೆ ಹೆಚ್ಚು ಕಡಿಮೆ ದಿನದ 24 ಗಂಟೆಯೂ ಸಿಗುತ್ತದೆ. ನೀವು ಈ ಜಿಲ್ಲೆಯ ಗಡಿಯೊಳಗೆ ಬಂದರೆ ಸಾಕು ನಿಮಗೆ ಯಾವ ಹಳ್ಳಿಯಾದರೂ ಸರಿ, ಯಾವ ಪಟ್ಟಣವಾದರೂ ಸರಿ ಊಟ, ತಿಂಡಿ, ಕಾಫಿ ಸಿಗಲಿಲ್ಲ ಅಂದರೂ ಎಣ್ಣೆ ಮಾತ್ರ ಸಿಕ್ಕೇ ಸಿಗುತ್ತದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಕೋಲಾರದಲ್ಲಿ ನಿಯಮ ಮೀರಿ ಮದ್ಯ ಮಾರಾಟ! ಕಣ್ಮುಚ್ಚಿ ಕುಳಿತ ಅಬಕಾರಿ ಇಲಾಖೆ
ಕೋಲಾರದಲ್ಲಿ ನಿಯಮ ಮೀರಿ ಮದ್ಯ ಮಾರಾಟ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on:May 15, 2024 | 8:49 PM

ಕೋಲಾರ, ಮೇ.15: ಕೋಲಾರ(Kolar) ನಗರ ಅಥವಾ ಆಂಧ್ರ, ತಮಿಳುನಾಡಿನ ಗಡಿಯಲ್ಲೇ ಇರಲಿ ಯಾವ ಸಮಯದಲ್ಲಾದರೂ ಮದ್ಯ ಸಿಗುತ್ತದೆ. ಕೋಲಾರದಲ್ಲಿ ಸದ್ಯ ಅಬಕಾರಿ ಇಲಾಖೆ(Excise department) ಇದ್ದು ಇಲ್ಲದಂತಾಗಿದ್ದು, ಹಾಗಾಗಿ ಜಿಲ್ಲೆಯಲ್ಲಿ ಬಾರ್​ಗಳ ಅಬ್ಬರ ಜೊರಾಗಿದೆ. ಬಾರ್​ಗಳನ್ನು ಯಾವಾಗ ಬೇಕಾದರೂ ತೆಗೆಯಬಹುದು, ಮುಚ್ಚಬಹುದು. ಇಲ್ಲಿ ಯಾರೂ ಹೇಳುವವರಿಲ್ಲ. ಕೋಲಾರ ಜಿಲ್ಲೆಯ ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಬಾರ್​ಗಳು ತೆರೆದಿರುತ್ತವೆ. ಅಷ್ಟೇ ಅಲ್ಲ, ಜಿಲ್ಲೆಯ ಆಂಧ್ರ ಮತ್ತು ತಮಿಳುನಾಡಿನ ಗಡಿಯಲ್ಲೂ ಕೂಡ ಬಾರ್​ಗಳು ದಿನದ 24 ಗಂಟೆಯೂ ಕೆಲಸ ಮಾಡುತ್ತವೆ.

ಇನ್ನು ಕೋಲಾರದಲ್ಲಿ ಬಾರ್​ಗಳು, ಅದರಲ್ಲೂ ಸಿಎಲ್​-7 ಗಳು ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಕಳೆದೊಂದು ವರ್ಷದಲ್ಲಿ ನಿರೀಕ್ಷೆಗೂ ಮೀರಿದ ಬಾರ್​ಗಳು ತೆರೆಯಲಾಗಿವೆ. ಅದರಲ್ಲೂ ಆಂಧ್ರದಲ್ಲಿ ಮದ್ಯದ ಬೆಲೆ ಹೆಚ್ಚಳ ಮಾಡಿದ ಹಿನ್ನೆಲೆ ಹಾಗೂ ಮದ್ಯದ ಗುಣಮಟ್ಟ ಸರಿ ಇಲ್ಲ ಎನ್ನುವ ಕಾರಣಕ್ಕೆ ಆಂಧ್ರದ ಮದ್ಯ ಪ್ರಿಯರು ಕರ್ನಾಟಕದ ಗಡಿಯ ಬಾರ್​ಗಳಿಗೆ ಕುಡಿಯಲು ಬರುತ್ತಾರೆ ಎನ್ನುವ ಕಾರಣಕ್ಕೆ ನಗರ ಪ್ರದೇಶದ ಬಾರ್​ಗಳನ್ನು ಗಡಿಗೆ ಸ್ಥಳಾಂತರ ಮಾಡಿದ್ದಾರೆ. ಅಲ್ಲದೆ ಹೊಸದಾಗಿ ಬಾರ್​ಗಳನ್ನು ತೆರೆಯಲಾಗಿದೆ. ಹಾಗಾಗಿ ಅಬಕಾರಿ ಇಲಾಖೆ ನಮಗೆ ವ್ಯಾಪಾರ ಆದರೆ ಸಾಕು ಎಂದು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಇದನ್ನೂ ಓದಿ:ಮದ್ಯಪ್ರಿಯರಿಗೆ ಗುಡ್​ನ್ಯೂಸ್ ; ಮದ್ಯ ಮಾರಾಟ ನಿಷೇಧ ಅವಧಿ ಇಳಿಕೆ!

ಯಾರಾದರೂ ದೂರು ಕೊಟ್ಟರೂ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಬಾರ್​ ಮಾಲೀಕರು ಹಾಗೂ ಮದ್ಯ ಪ್ರಿಯರಿಗೆ ಕಡಿವಾಣ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಕುಡಿದ ಮತ್ತಿನಲ್ಲಿರುವ ಅಬಕಾರಿ ಇಲಾಖೆಯನ್ನು ಬಡಿದೆಚ್ಚರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಒಟ್ಟಾರೆ ಕೋಲಾರದಲ್ಲಿ ಏನು ಸಿಗುತ್ತದೇಯೋ, ಇಲ್ಲವೋ ಗೊತ್ತಿಲ್ಲ. ಆದರೆ, ಹೆಜ್ಜೆ ಹೆಜ್ಜೆಗೂ ಎಣ್ಣೆಯಂತೂ ಸಿಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಮದ್ಯ ಪ್ರಿಯರ ಸಂಖ್ಯೆ ಕೂಡ ಖುಷಿಯಾಗಿ ಎಲ್ಲೆಂದರಲ್ಲಿ ಕುಡಿದು ಮಲಗಿರುತ್ತಾರೆ. ಒಂದು ಕಾಲದಲ್ಲಿ ಚಿನ್ನದ ನಾಡು ಎಂದು ಹೆಸರು ಪಡೆದಿದ್ದ ಜಿಲ್ಲೆ, ಸದ್ಯ ಈಗ ಕುಡುಕರ ಸ್ವರ್ಗ ಎನ್ನುವ ಹೆಸರು ಪಡೆಯುವಂತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:42 pm, Wed, 15 May 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ