ವಿಧಾನಪರಿಷತ್ ಚುನಾವಣೆ: ಮದ್ಯ ಮಾರಾಟ ಸಂಬಂಧ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

| Updated By: ರಮೇಶ್ ಬಿ. ಜವಳಗೇರಾ

Updated on: Feb 13, 2024 | 10:57 PM

ವಿಧಾನಪರಿಷತ್ ಚುನಾವಣೆಗೆ ಮದ್ಯ(Liquor)ಮಾರಾಟ ನಿರ್ಬಂಧ‌ ವಿಚಾರವಾಗಿ ‘ ಇಂದು 48 ಗಂಟೆಗಳ ಅವಧಿಗೆ ಮದ್ಯ ಮಾರಾಟ ನಿಷೇಧ ಅನಗತ್ಯವೆಂದು ವಾದ ಮಾಡಲಾಗಿದ್ದು, ಈ ಬಗ್ಗೆ Liquor ಸರ್ಕಾರದ ಪ್ರತಿಕ್ರಿಯೆಗೆ ಹೈಕೋರ್ಟ್ ಸೂಚನೆ ನೀಡಿದೆ. ಇನ್ನೊಂದೆಡೆ ಗುತ್ತಿಗೆದಾರರಿಂದ 40% ಕಮಿಷನ್ ಸಂಬಂಧ ತನಿಖೆಗೆ ಆಯೋಗ ವಿಚಾರ ಹಿನ್ನಲೆ ವಿಚಾರಣೆ ಪೂರ್ಣಗೊಳಿಸಲು 6 ವಾರಗಳ ಕಾಲಾವಕಾಶವನ್ನು ಹೈಕೋರ್ಟ್​ ನೀಡಿದೆ.

ವಿಧಾನಪರಿಷತ್ ಚುನಾವಣೆ: ಮದ್ಯ ಮಾರಾಟ ಸಂಬಂಧ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್
ಹೈಕೋರ್ಟ್​
Follow us on

ಬೆಂಗಳೂರು, ಫೆ.13: ವಿಧಾನಪರಿಷತ್ ಚುನಾವಣೆಗೆ ಮದ್ಯ(Liquor)ಮಾರಾಟ ನಿರ್ಬಂಧ‌ ವಿಚಾರವಾಗಿ ಜಿಲ್ಲಾಧಿಕಾರಿಗಳ ಕ್ರಮ ಪ್ರಶ್ನಿಸಿ ಹೋಟೆಲ್​ಗಳ ಸಂಘಟನೆ ಅರ್ಜಿ ಸಲ್ಲಿಸಿತ್ತು. ಕೇವಲ 16 ಸಾವಿರ ಶಿಕ್ಷಕ ಮತದಾರರು ಚುನಾವಣೆಯಲ್ಲಿ ಭಾಗಿಯಾಗಿದ್ದು, ಮದ್ಯ ನಿಷೇಧದಿಂದ ವರ್ತಕರು, ಹೋಟೆಲ್ ಉದ್ದಿಮೆಗೆ ಸಮಸ್ಯೆಯಾಗಿದೆ ಎನ್ನಲಾಗಿತ್ತು. 48 ಗಂಟೆಗಳ ಅವಧಿಗೆ ಮದ್ಯ ಮಾರಾಟ ನಿಷೇಧ ಅನಗತ್ಯವೆಂದು ವಾದ ಮಾಡಲಾಗಿದ್ದು, ಈ ಬಗ್ಗೆ Liquor ಸರ್ಕಾರದ ಪ್ರತಿಕ್ರಿಯೆಗೆ ಹೈಕೋರ್ಟ್(High Court) ಸೂಚನೆ ನೀಡಿದೆ.

ಗುತ್ತಿಗೆದಾರರಿಂದ 40% ಕಮಿಷನ್ ಸಂಬಂಧ ತನಿಖೆಗೆ ಆಯೋಗ; ವಿಚಾರಣೆ ಪೂರ್ಣಗೊಳಿಸಲು 6 ವಾರಗಳ ಕಾಲಾವಕಾಶ

ಬೆಂಗಳೂರು: ಗುತ್ತಿಗೆದಾರರಿಂದ 40% ಕಮಿಷನ್ ಸಂಬಂಧ ತನಿಖೆಗೆ ಆಯೋಗ ವಿಚಾರ ಹಿನ್ನಲೆ ತನಿಖೆಯ ನೆಪವೊಡ್ಡಿ ಬಿಲ್ ಪಾವತಿ‌ ವಿಳಂಬಕ್ಕೆ ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್​ನಲ್ಲಿ ಹಲವು ಗುತ್ತಿಗೆದಾರರು ರಿಟ್ ಅರ್ಜಿ ಸಲ್ಲಿಸಿದ್ದು, ಇದೀಗ ವಿಚಾರಣೆ ಮಾಡಿ, ಆಯೋಗದ ವಿಚಾರಣೆ ಪೂರ್ಣಗೊಳಿಸಲು 6 ವಾರಗಳ ಕಾಲಾವಕಾಶ ನೀಡಲಾಗಿದೆ. ಅಂದರೆ ಏಪ್ರೀಲ್​.2 ರೊಳಗೆ ವರದಿ‌ ಸಲ್ಲಿಸಲು ಹೈಕೋರ್ಟ್​ನಿಂದ ಅಂತಿಮ ಗಡುವು ನೀಡಿದ್ದು, ಇಲ್ಲವಾದರೆ ಬಾಕಿ ಬಿಲ್ ಪಾವತಿಗೆ ಆದೇಶ ಅನಿವಾರ್ಯವಾಗಿದೆ. ಬಳಿಕ ವಿಚಾರಣೆ ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರಕ್ಕೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಸೂಚನೆ ನೀಡಿದೆ.

ಇದನ್ನೂ ಓದಿ:ಕರ್ನಾಟಕ ಹೈಕೋರ್ಟ್​ಗೆ ನೂತನ ಮುಖ್ಯ ನ್ಯಾಯಾಮೂರ್ತಿ ಹೆಸರು ಶಿಫಾರಸು: ಯಾರು ಗೊತ್ತಾ?

ಬಿಲ್​ ಪಾವತಿ ಮಾಡಲು ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಪಡೆಯಲಾಗಿದೆ ಎಂಬ ಗುತ್ತಿಗೆದಾರರ ಆರೋಪಕ್ಕೆ ಸಂಬಂಧಿಸಿದಂತೆ, ಈ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಹೆಚ್​.ಎನ್​ ನಾಗಮೋಹನ್​ ದಾಸ್​ ಅವರ ಏಕ ವ್ಯಕ್ತಿ ಆಯೋಗದ ಮುಂದೆ ಏಕೆ ಒಂದೇ ಒಂದು ಪ್ರಕ್ರಿಯೆ ನಡೆದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ತಿಳಿಸಬೇಕು. ಇಲ್ಲವಾದಲ್ಲಿ ಸೂಕ್ತ ಆದೇಶ ಮಾಡಲಾಗುವುದು ಎಂದು ಹೈಕೋರ್ಟ್‌ ಎಚ್ಚರಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 pm, Tue, 13 February 24