ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿದು ವಾವ್ಹ್​​​​​ ವಂಡರ್‌ಫುಲ್‌ ಎಂದ ಜಪಾನಿನ ವ್ಯಕ್ತಿ!

ಬೆಂಗಳೂರಿನ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಜಪಾನಿ ಕಂಟೆಂಟ್ ಕ್ರಿಯೇಟರ್ ಶೋ ಟೇಕಿ ಮೆಚ್ಚಿಕೊಂಡಿದ್ದಾರೆ. ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ ಅವರು, ತಮ್ಮ ದೇಶದ ಆಹಾರದ ಬದಲು ಕರ್ನಾಟಕ ಶೈಲಿಯ ರಾಗಿ ಮುದ್ದೆ ಊಟವನ್ನು ಕೇಳಿ ಆರ್ಡರ್ ಮಾಡಿದರು. ರುಚಿಕರವಾದ ಸಾಂಪ್ರದಾಯಿಕ ಊಟ ಕೇವಲ 200 ರೂ.ಕ್ಕೆ ಸಿಕ್ಕಿರುವುದು ಅವರನ್ನು ಅಚ್ಚರಿಗೊಳಿಸಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಊಟ ಸವಿದು ವಾವ್ಹ್​​​​​ ವಂಡರ್‌ಫುಲ್‌ ಎಂದ ಜಪಾನಿನ ವ್ಯಕ್ತಿ!
ವೈರಲ್​​ ವಿಡಿಯೋ

Updated on: Jan 20, 2026 | 5:44 PM

ಬೆಂಗಳೂರು, ಜ.20: ಬೆಂಗಳೂರಿನ ಬಗ್ಗೆ ಕೆಲವರು ದೂರುತ್ತಾರೆ, ಇನ್ನು ಕೆಲವರು ಮೆಚ್ಚಿಕೊಳ್ಳುತ್ತಾರೆ.  ಸಿಲಿಕಾನ್​​​​​ ಸಿಟಿಯಲ್ಲಿ ಎಲ್ಲವೂ ಸಿಗುತ್ತದೆ. ಎಲ್ಲದಕ್ಕೂ ಅವಕಾಶ ಇದೆ. ಅದಕ್ಕೆ ಅನೇಕರಿಗೆ ಇಷ್ಟು, ಇನ್ನು ಕೆಲವೊಮ್ಮೆ ಕೊಲೆ, ದರೋಡೆ, ಅತ್ಯಾಚಾರ, ಕೆಲವೊಂದು ಬೆಚ್ಚಿ ಬೀಳಿಸುವ ಘಟನೆಗಳು, ಜತೆಗೆ ಹೆಚ್ಚಿನ ಜನರಿಗೆ ತೊಂದರೆ ಆಗಿರುವುದು ಇಲ್ಲಿನ ಟ್ರಾಪಿಕ್, ಈ ಕಾರಣಗಳಿಂದ ಬೆಂಗಳೂರು ಅಪಾಯ ಎಂದು ಕೆಲವರಿಗೆ ಅನ್ನಿಸುತ್ತದೆ. ಉಳಿದಂತೆ ಬೆಂಗಳೂರಿನಲ್ಲಿ ಎಲ್ಲವೂ ಉತ್ತಮವಾಗಿದೆ. ಅದರಲ್ಲೂ ಆಹಾರ ವಿಚಾರದಲ್ಲಿ (Bangalore food)  ಒಂದು ಕೈ ಹೆಚ್ಚು, ಇಲ್ಲಿ ಎಲ್ಲ ಊರಿನ, ಎಲ್ಲ ಬಗೆಯ ಆಹಾರಗಳು ಸಿಗುತ್ತದೆ. ಇದೀಗ ಜಪಾನ್​​​​​ನ ವ್ಯಕ್ತಿಗೆ ಆಹಾರದಿಂದ ಬೆಂಗಳೂರು ತುಂಬಾ ಇಷ್ಟವಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಜಪಾನಿನ ಕಂಟೆಂಟ್ ಕ್ರಿಯೇಟರ್ ಒಬ್ಬರು ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಇವರು ತಮಗೆ ಇಷ್ಟವಾದ ಆಹಾರವನ್ನು ಖರೀದಿಸುವ ಬದಲು, ತಪ್ಪಿ ದಕ್ಷಿಣ ಭಾರತದ ಆಹಾರವನ್ನು ಆರ್ಡರ್​​ ಮಾಡಿದ್ದಾರೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಶೋ ಟೇಕಿ ಎಂಬ ಕಂಟೆಂಟ್ ಕ್ರಿಯೇಟರ್ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಸ್ಯಾಹಾರಿ ಉಪಾಹಾರ ಗೃಹಕ್ಕೆ ನಾನು ಮೊದಲ ಬಾರಿಗೆ ಭೇಟಿ ನೀಡಿದ್ದೇನೆ. ಇಲ್ಲಿ ನಾನು ನನಗೆ ಇಷ್ಟವಾದ ಆಹಾರ ಆರ್ಡರ್​ ಮಾಡುವ ಬದಲು, ಹೊಸದಾಗಿ ಏನಿದೆ ಎಂದು ಅಲ್ಲಿನ ಸಿಬ್ಬಂದಿಯನ್ನು ಕೇಳಿದ್ದೇನೆ. ಅದಕ್ಕೆ ಅವರು ಕರ್ನಾಟಕ ಶೈಲಿಯ ಮುದ್ದೆ ಊಟ ಕೊಟ್ಟಿದ್ದಾರೆ. ವರ್ಣರಂಜಿತ, ಸಾಂಪ್ರದಾಯಿಕ ಖಾದ್ಯಗಳಾದ, ಸಾದಾ ಅನ್ನ, ರಾಗಿ ಮುದ್ದೆ, ಮಸಾಲೆ ವಡೆ, ಪರಿಮಳಯುಕ್ತ ಸಾಂಬಾರ್, ಮೆಣಸಿನಕಾಯಿ ರಸಂ, ಕೋಸಂಬರಿ, ಉಪ್ಪಿನಕಾಯಿ, ಮೊಸರು ಮತ್ತು ಮೆಣಸಿನಕಾಯಿ ನೀಡಿದರು. ಕೊನೆಗೆ ಒಂದು ಕಪ್ ಫಿಲ್ಟರ್ ಕಾಫಿ ಕುಡಿದು ಊಟದ ಗಮ್ಮತ್​​​ ಮುಗಿಸಿದ್ದೇನೆ ಎಂದು ಹೇಳಿದ್ದಾರೆ. ಊಟ ಎಲ್ಲ ಮುಗಿಸಿದ ನಂತರ ಬಿಲ್​ ನೋಡಿ ಅಚ್ಚರಿಗೊಂಡಿದ್ದಾರೆ. ಕೇವಲ 200 ರೂ. ಆಗಿದೆ ಎಂದು ಹೇಳಿದ್ದಾರೆ. ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಸಸ್ಯಾಹಾರಿ ಆಹಾರವನ್ನು ಕಡಿಮೆ ಸೇವನೆ ಮಾಡುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಗ್ರಾಮೀಣ ಮಹಿಳೆಯರಿಗೆ ಬಿಗ್​​ ಶಾಕ್: ಹೆಚ್ಚುತ್ತಿದೆ ಗರ್ಭಕಂಠದ ಕ್ಯಾನ್ಸರ್

ಇಲ್ಲಿದೆ ನೋಡಿ ವೈರಲ್​ ಪೋಸ್ಟ್​:


ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ನೀವು ಸಾಂಪ್ರದಾಯಿಕ ತಿಂಡಿ ಕೇಳಿದ್ದೀರಿ, ಅದಕ್ಕೆ ಈ ಆಹಾರವನ್ನು ನೀಡಿದ್ದಾರೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ತುಂಬಾ ಯೋಗ್ಯ ಸ್ಥಳದಲ್ಲಿ ಊಟ ಮಾಡಿದ್ದೀರಾ ಎಂದು ಕಮೆಂಟ್​ ಮಾಡಿದ್ದಾರೆ. ಇಲ್ಲಿ ಎಲ್ಲರೂ ಅಕ್ಷರಶಃ ಇಂಗ್ಲಿಷ್ ಮಾತನಾಡುತ್ತಾರೆ. ಅವರಿಗೆ ಏನು ಬೇಕಾದರೂ ಕೇಳಿ ನಿರಾಳರಾಗಿರಿ. ಅವರು ಕೇಳಲು ಮತ್ತು ಸಹಾಯ ಮಾಡಲು ಸಿದ್ಧ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ಇನ್ನೊಮ್ಮೆ ಮೇಘನಾ ಬಿರಿಯಾನಿ ಪ್ರಯತ್ನಿಸಿ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ