ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ವೀಕೆಂಡ್ ಕರ್ಫ್ಯೂ (Weekend Curfew) ಮತ್ತು ನೈಟ್ ಕರ್ಫ್ಯೂ (Night Curfew) ತೆರವುಗೊಳಿಸುವಂತೆ ಹಲವರು ಮನವಿ ಮಾಡುತ್ತಿದ್ದಾರೆ. ಅಲ್ಲದೇ ಕರ್ಫ್ಯೂಗಳ ಬಗ್ಗೆ ತಜ್ಞರಲ್ಲೇ ಭಿನ್ನಾಭಿಪ್ರಾಯವಿದೆ ಎಂದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ತಜ್ಞರ ದ್ವಂದ ಅಭಿಪ್ರಾಯಗಳ ಹಿನ್ನೆಲೆ, ಶುಕ್ರವಾರ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ. ತಜ್ಞರು ಶುಕ್ರವಾರ ನೀಡುವ ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.
ತಜ್ಞರ ಸಮಿತಿಯ ಕೆಲ ತಜ್ಞರು ನೈಟ್ ಕರ್ಫ್ಯೂ ಹಾಗೂ ವಿಕೇಂಡ್ ಕರ್ಫ್ಯೂ ಅವಶ್ಯಕತೆ ಇಲ್ಲ. ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ ಕಡಿಮೆಯಿದೆ. ಪ್ರತಿಯೊಂದು ಮನೆಯಲ್ಲೂ ಶೀತ, ತಲೆನೋವು, ಜ್ವರ ಇರುವ ರೋಗಗಳು ಇದ್ದಾರೆ. ಹೀಗಾಗಿ ಕರ್ಫ್ಯೂ ಮಾಡುವ ಅಗತ್ಯವಿಲ್ಲ ಅಂತ ಹೇಳುತ್ತಿದ್ದಾರೆ. ಇನ್ನೂ ಕೆಲ ತಜ್ಞರು ವಿಕೇಂಡ್ ಕರ್ಫ್ಯೂ ಜೊತೆ ಜೊತೆಗೆ ಹತ್ತು ದಿನ ಲಾಕ್ಡೌನ್ ಮಾಡಬೇಕು ಅಂತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಫೆಬ್ರವರಿಯಲ್ಲಿ ಕೊರೊನಾ ಭಾರೀ ತೀವ್ರ ಸ್ವರೂಪ ಪಡೆಯಲಿದ್ದು, ಕಠಿಣ ರೂಲ್ಸ್ ಬೇಕು ಅಂತ ಮತ್ತೊಂದು ತಜ್ಞರ ತಂಡ ತಿಳಿಸಿದೆ. ಹೀಗಾಗಿ ಶುಕ್ರವಾರ ಈ ಬಗ್ಗೆ ಚರ್ಚೆ ನಡೆಸಿ ಕರ್ಫ್ಯೂ ಬಗ್ಗೆ ನಿರ್ಧರಿಸಲಾಗುತ್ತದೆ.
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಹೀಗಾಗಿ ನೋಡಿಕೊಂಡು ಸರ್ಕಾರ ತೀರ್ಮಾನಿಸಬೇಕು. ಸಿಎಂ ಬೊಮ್ಮಾಯಿಗೆ ವೈಯಕ್ತಿಕವಾಗಿ ಸಲಹೆ ನೀಡುತ್ತಿದ್ದೇನೆ ಅಂತ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವೀಕೆಂಡ್ ಕರ್ಫ್ಯೂ ಸಡಿಲಿಕೆ ಮಾಡಿ ಎಂದು ತಿಳಿಸಿದ್ದಾರೆ.
ವಿಕೇಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮುಂದುವರಿಸುವ ವಿಚಾರಕ್ಕೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಈಗಿರುವ ರೂಲ್ಸ್ ವಾರ ಮುಂದುವರಿಸಿದರೆ ಸಾಕು ಎಂದಿದ್ದಾರೆ.
ಇದನ್ನೂ ಓದಿ
ಹೆತ್ತಮ್ಮ ಕೊರೊನಾದಿಂದ ಮೃತಪಟ್ಟ ಸುದ್ದಿ ತಿಳಿಸಿದರೂ ಬಾರದ ಮಗಳು, ವಿಶ್ವ ಹಿಂದುಪರಿಷತ್ ಕಾರ್ಯಕರ್ತರಿಂದಲೇ ಶವ ಸಂಸ್ಕಾರ
ಗೂಗಲ್ ಮೀಟ್ನಲ್ಲಿ ಸಂಬಂಧಿಗಳಿಗೆ ಆಹ್ವಾನ; ಜೊಮಾಟೋ ಮೂಲಕ ಊಟ: ಇದು ಕೊರೋನಾ ಕಾಲದ ವಿಭಿನ್ನ ಮದುವೆ