ಹೆತ್ತಮ್ಮ ಕೊರೊನಾದಿಂದ ಮೃತಪಟ್ಟ ಸುದ್ದಿ ತಿಳಿಸಿದರೂ ಬಾರದ ಮಗಳು, ವಿಶ್ವ ಹಿಂದುಪರಿಷತ್ ಕಾರ್ಯಕರ್ತರಿಂದಲೇ ಶವ ಸಂಸ್ಕಾರ

ಮಹಾಮಾರಿ ಕೊರೊನಾ ಮೂರನೇ ಅಲೆ ರಾಜ್ಯದಲ್ಲಿ ಶುರುವಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಕೊವೀಡ್ ನಿಂದ ಮೃತಪಟ್ಟ ತಾಯಿಯನ್ನ ನೋಡಲು ಮಗಳು ಬಂದಿಲ್ಲ.

ಹೆತ್ತಮ್ಮ ಕೊರೊನಾದಿಂದ ಮೃತಪಟ್ಟ ಸುದ್ದಿ ತಿಳಿಸಿದರೂ ಬಾರದ ಮಗಳು, ವಿಶ್ವ ಹಿಂದುಪರಿಷತ್ ಕಾರ್ಯಕರ್ತರಿಂದಲೇ ಶವ ಸಂಸ್ಕಾರ
ಕೊರೊನಾದಿಂದ ಮೃತಪಟ್ಟ ಮಹಿಳೆ ಭಾಗ್ಯಲಕ್ಷ್ಮೀ
Follow us
TV9 Web
| Updated By: ಆಯೇಷಾ ಬಾನು

Updated on:Jan 18, 2022 | 2:22 PM

ಬೆಂಗಳೂರು: ಕಳೆದ ಎರಡೂವರೆ ವರ್ಷಗಳಿಂದ ಕಾಡುತ್ತಿರುವ ಕೊರೊನಾ ಜನರಲ್ಲಿ ಪ್ರೀತಿ, ವಿಶ್ವಾಸ, ಕರುಣೆಯನ್ನೇ ಮರೆ ಮಾಚಿದೆ. ಕೊರೊನಾದಿಂದ ಮೃತಪಟ್ಟ ಪೋಷಕರನ್ನು ನೋಡಲು ಮಕ್ಕಳು ಬರುತ್ತಿಲ್ಲ. ಪೋಷಕರಿಗೆ ಕೊರೊನಾ ತಗುಲಿದೆ ಎಂದು ತಿಳಿಯುತ್ತಿದ್ದಂತೆ ಅವರಿಂದ ದೂರ ಉಳಿಯುತ್ತಿದ್ದಾರೆ. ಇದೇ ರಿತಿ ಇಲ್ಲೊಂದು ಘಟನೆ ನಡೆದಿದೆ.

ಮಹಾಮಾರಿ ಕೊರೊನಾ ಮೂರನೇ ಅಲೆ ರಾಜ್ಯದಲ್ಲಿ ಶುರುವಾಗಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಕೊವೀಡ್ ನಿಂದ ಮೃತಪಟ್ಟ ತಾಯಿಯನ್ನ ನೋಡಲು ಮಗಳು ಬಂದಿಲ್ಲ. ಒಂದೂವರೆ ದಿನ ಕಳೆದ್ರು ತಾಯಿಯ ಅಂತಿಮ ದರ್ಶನಕ್ಕೆ ಮೃತ ತಾಯಿಯ ಮಗಳು ಬಂದಿದ್ದ. ಮಾನವೀಯ ಸಂಬಂಧಗಳನ್ನೂ ಕೊರೊನಾ ಕಿತ್ತುಕೊಂಡಿದೆ.

ಮೂಲತಃ ಮಂಡ್ಯದವರಾಗಿದ್ದ ಭಾಗ್ಯಲಕ್ಷ್ಮೀ (52) ಕೋವಿಡ್ ನಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ತಾಯಿ ಮೃತಪಟ್ಟಿರುವ ವಿಷಯವನ್ನು ಅಧಿಕಾರಿಗಳು ಫೋನ್ ಮೂಲಕ ತಿಳಿಸಿದ್ದಾರೆ. ಆದ್ರೆ ಮಗಳು ಇನ್ನೂ ಬರದ ಕಾರಣ ವಿಶ್ವ ಹಿಂದುಪರಿಷತ್ ಕಾರ್ಯಕರ್ತರು ಶವ ಸಂಸ್ಕಾರ ಮಾಡಲು ಮುಂದಾಗಿದ್ದು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಈಗ ಹೆಬ್ಬಾಳ ಚಿರಶಾಂತಿ ಧಾಮದಲ್ಲಿ ಭಾಗ್ಯಲಕ್ಷ್ಮೀ ಶವ ಇರಿಸಲಾಗಿದೆ.

ಚಿರಶಾಂತಿಧಾಮಕ್ಕೆ ಬಂದ ಮಗಳು ಅಳಿಯ ಇನ್ನು ಈ ಸುದ್ದಿ ಬಿತ್ತಾರವಾದ ಬಳಿಕ ಚಿರಶಾಂತಿಧಾಮಕ್ಕೆ ಮೃತ ಭಾಗ್ಯಲಕ್ಷ್ಮೀ ಅವರ ಮಗಳು ಅಳಿಯ ಇಬ್ಬರೂ ಬಂದಿದ್ದಾರೆ. ಆ್ಯಂಬುಲೆನ್ಸ್​ನಲ್ಲಿ ಭಾಗ್ಯಲಕ್ಷ್ಮೀ ಮೃತದೇಹ ಇದ್ದರೂ ಈಗಲೂ ಮಗಳು ತಾಯಿ ಮುಖ ನೋಡಲಿಲ್ಲ. ಸೀದಾ ಚಿರಶಾಂತಿಧಾಮದ ಕಚೇರಿಗೆ ಭೇಟಿ ನೀಡಿದ್ರು. ಕೈಯಲ್ಲಿ ಹೂವಿನ ಹಾರ ಹಿಡಿದು ಫೋನ್​ನಲ್ಲಿ ಬಿಜಿಯಾಗಿದ್ದಾರೆ.

ರಾಜ್ಯದಲ್ಲಿ ನಿನ್ನೆ 27 ಸಾವಿರ ಕೇಸ್​ಗಳು ಪತ್ತೆ ರಾಜ್ಯದಲ್ಲಿ ನಿನ್ನೆ 27 ಸಾವಿರದ 156 ಮಂದಿಗೆ ವೈರಸ್ ವಕ್ಕರಿಸಿದೆ. ಕೊರೊನಾ ಹಾಟ್ಸ್ಪಾಟ್ ಆಗಿರೋ ಬೆಂಗಳೂರಿನಲ್ಲಿ ಇಂದು 15 ಸಾವಿರದ 947 ಮಂದಿಗೆ ಪಾಸಿಟಿವ್ ಕನ್ಫರ್ಮ್ ಆಗಿದೆ. ಅಲ್ದೆ, ರಾಜ್ಯದಲ್ಲಿ ಕೊರೊನಾಗೆ 14 ಮಂದಿ ಬಲಿಯಾಗಿದ್ರೆ, ಮೃತರ ಪೈಕಿ ಐವರು ಬೆಂಗಳೂರಿನವರೇ ಆಗಿದ್ದಾರೆ.

ರಾಜ್ಯದಲ್ಲಿ ಕಳೆದ 13ರಂದು 38 ಸಾವಿರದ 397 ಜನರಿಗೆ ಕೊರೊನಾ ತಗುಲಿತ್ತು. ಆವತ್ತೇ ಬೆಂಗಳೂರಿನಲ್ಲಿ 18ಸಾವಿರದ 374 ಕೇಸ್ ಪತ್ತೆ ಆಗಿತ್ತು. ಬಳಿಕ ಮರುದಿನ ರಾಜ್ಯದಲ್ಲಿ ಕೊರೊನಾ ಅಬ್ಬರ ಕಡಿಮೆ ಆಗಿತ್ತು. ಅಂದ್ರೆ, ಜನವರಿ 14ರಂದು ರಾಜ್ಯದಲ್ಲಿ 28 ಸಾವಿರದ 723 ಕೇಸ್ ಪತ್ತೆ ಆಗಿದ್ರೆ, ಬೆಂಗಳೂರಿನಲ್ಲಿ 20ಸಾವಿರದ 121 ಜನರ ವರದಿ ಪಾಸಿಟಿವ್ ಬಂದಿತ್ತು. ಜನವರಿ 15ರಾಜ್ಯದಲ್ಲಿ ಸೋಂಕಿನ ಸ್ಫೋಟವಾಗಿದ್ದು, 32 ಸಾವಿರದ 793 ಜನರಿಗೆ ಕೊರೊನಾ ದೃಢಪಟ್ಟಿತ್ತು. ಇದೇ ರೀತಿ ಬೆಂಗಳೂರಿನಲ್ಲಿ 22 ಸಾವಿರದ 284 ಜನರಿಗೆ ಮಾರಿ ವಕ್ಕರಿಸಿತ್ತು. ಇನ್ನು, ಜನವರಿ 15ನೇ ತಾರೀಖು ರಾಜ್ಯದಲ್ಲಿ ಕೊರೊನಾ ಬ್ಲ್ಯಾಸ್ಟ್ ಆಗಿದ್ರೆ, ಬೆಂಗಳೂರಿನಲ್ಲಿ ಸೋಂಕಿನ ಸಂಖ್ಯೆ ಕಡಿಮೆ ಆಗಿತ್ತು. ಅಂದ್ರೆ, ಜನವರಿ 15ನೇ ರಂದು ರಾಜ್ಯದಲ್ಲಿ 34 ಸಾವಿರದ 47 ಕೇಸ್ ಪತ್ತೆ ಆಗಿದ್ರೆ, ಬೆಂಗಳೂರಿನಲ್ಲಿ 21 ಸಾವಿರದ 71 ಜನರಿಲ್ಲಿ ಪತ್ತೆಯಾಗಿತ್ತು.

ಇದನ್ನೂ ಓದಿ: ಮಾಜಿ ಸಚಿವ ಹೆಚ್ ಡಿ ರೇವಣ್ಣ ಏಕಾಂಗಿ ಪ್ರತಿಭಟನೆ! M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ ಸ್ನಾತಕೋತ್ತರ ಪದವಿ ಮಂಜೂರಿಗೆ ಒತ್ತಾಯ

Published On - 12:00 pm, Tue, 18 January 22