AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲಾಟ್ ಕಟ್, ಜಟ್ಕಾ ಕಟ್ ಎಂದರೇನು? ಇವುಗಳ ನಡುವಿನ ವ್ಯತ್ಯಾಸ ಇಲ್ಲಿದೆ

ಹಿಜಾಬ್​ನಿಂದ ಆರಂಭವಾದ ಗಲಾಟೆ ಹಲಾಲ್ ವರಗೆ ಬಂದು ನಿಂತಿದೆ. ಸದ್ಯ ರಾಜ್ಯದಲ್ಲಿ ಹಲಾಲ್ ಮಾಂಸ ಖರೀದಿ ಮಾಡದಂತೆ ಹಿಂದೂ ಸಂಘಟನೆಗಳು ಮನವಿ ಮಾಡುತ್ತಿವೆ.

ಹಲಾಟ್ ಕಟ್, ಜಟ್ಕಾ ಕಟ್ ಎಂದರೇನು? ಇವುಗಳ ನಡುವಿನ ವ್ಯತ್ಯಾಸ ಇಲ್ಲಿದೆ
ಮಾಂಸ ( ಸಾಂದರ್ಭಿಕ ಚಿತ್ರ)
TV9 Web
| Updated By: sandhya thejappa|

Updated on:Mar 30, 2022 | 10:57 AM

Share

ಬೆಂಗಳೂರು: ಹಿಜಾಬ್ (Hijab) ಧರಿಸಿ ಶಾಲೆ- ಕಾಲೇಜುಗಳಿಗೆ ಪ್ರವೇಶ ನೀಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ತೀರ್ಪು ನೀಡಿದೆ. ಆದರೆ ಕೋರ್ಟ್ ತೀರ್ಪು ವಿರೋಧಿಸಿ ಮುಸ್ಲಿಂ ಸಮುದಾಯ ಕರ್ನಾಟಕ ಬಂದ್​ಗೆ ಕರೆ ನೀಡಿತ್ತು. ಇದರ ಬೆನ್ನಲ್ಲೆ ರಾಜ್ಯದಲ್ಲಿ ಒಂದೊಂದು ಗಲಾಟೆ ಶುರುವಾಗಿದೆ. ಹಿಜಾಬ್​ನಿಂದ ಆರಂಭವಾದ ಗಲಾಟೆ ಹಲಾಲ್ ವರಗೆ ಬಂದು ನಿಂತಿದೆ. ಸದ್ಯ ರಾಜ್ಯದಲ್ಲಿ ಹಲಾಲ್ ಮಾಂಸ ಖರೀದಿ ಮಾಡದಂತೆ ಹಿಂದೂ ಸಂಘಟನೆಗಳು ಮನವಿ ಮಾಡುತ್ತಿವೆ. ಹಲಾಲ್ ಕಟ್ (Halal Cut) ಮತ್ತು ಜಕ್ಕಾ ಕಟ್ (Jatka Cut) ಎಂದರೇನು ಅಂತ ಹಲವರಿಗೆ ತಿಳಿದಿಲ್ಲ. ಇವೆರಡರ ನಡುವಿನ ವ್ಯತ್ಯಾಸವನ್ನು ಇಲ್ಲಿ ತಿಳಿಸಲಾಗಿದೆ.

ಹಲಾಲ್ ಕಟ್ ಎಂದರೇನು?: ಮುಸ್ಲಿಂ ಧರ್ಮದ ಆಹಾರ ಕ್ರಮಕ್ಕೆ ಹಲಾಲ್ ಎಂದು ಹೇಳಲಾಗುತ್ತದೆ. ಬಲಿ ಕೊಡುವ ಪ್ರಾಣಿಯ ರಕ್ತ ನಾಳವನ್ನು ಕುಯ್ಯಲಾಗುತ್ತದೆ. ಇದರಿಂದ ರಕ್ತ ಪೂರ್ತಿ ಹೊರಬರುತ್ತದೆ. ಈ ಮೂಲಕ ರಕ್ತದಲ್ಲಿರುವ ಬ್ಯಾಕ್ಟೀರಿಯಾಗಳು ಹೊರಗೆ ಬರುತ್ತವೆ. ನಂತರ ಶುದ್ಧ ಮಾಂಸ ಸಿಗುತ್ತದೆ. ಇನ್ನು ಮೆಕ್ಕಾ ಕಡೆ ಮುಖ ಮಾಡಿ ಪ್ರಾಣಿಗಳನ್ನ ಕುಯ್ಯುತ್ತಾರೆ. ಇದನ್ನು ಹಲಾಲ್ ಕಟ್ ಎಂದು ಕರೆಯುತ್ತಾರೆ. ಶುದ್ಧವಿಲ್ಲದ ಆಹಾರ ಇಸ್ಲಾಂ ಧರ್ಮದಲ್ಲಿ ನಿಷಿದ್ಧವಾಗಿದೆ.

ಜಟ್ಕಾ ಕಟ್ ಎಂದರೇನು?: ಒಂದು ಪ್ರಾಣಿಯ ವಧೆ ಒಂದೇ ಬಾರಿಗೆ ನಡೆಯುತ್ತದೆ. ಸಾವಿನಲ್ಲೂ ಸಹ ನೋವು ನೀಡದೆ ಪ್ರಾಣಿಯ ಬಲಿ ಕೊಡುವುದಕ್ಕೆ ಜಟ್ಕಾ ಕಟ್ ಎನ್ನುತ್ತಾರೆ. ಹಿರಿಯರು ಪಾಲನೇ ಮಾಡುತಿದ್ದ ಪದ್ಧತಿ. ಜಟ್ಕಾ ಕಟ್ ಅಂದರೆ ದೈವ ಬಲಿ ಎಂದು ಕರೆಯುತ್ತಾರೆ. ಒಂದೇ ಏಟಿಗೆ ಪ್ರಾಣಿ ರುಂಡ, ಮುಂಡವನ್ನು ಬೇರ್ಪಡಿಸಲಾಗುತ್ತದೆ. ಯಾವುದೇ ಆಹಾರವನ್ನು ಸೇವಿಸುವ ಮೂದಲು ದೇವರಿಗೆ ನೈವೇದ್ಯ ಅರ್ಪಿಸಿ ತಿನ್ನುವುದನ್ನು ಪೂರ್ವಜರು ಕಲಿಸಿಕೊಟ್ಟ ಕ್ರಿಯ್ರೆಗೆ ಜಟ್ಕಾ ಕಟ್ ಎನ್ನುತ್ತಾರೆ.

BoyCott Halal ಅಭಿಯಾನ: ನೆಲಮಂಗಲದಲ್ಲಿ BoyCott Halal ಅಭಿಯಾನ ಮುಂದುವರೆದಿದೆ. ನಿನ್ನೆಯಿಂದ ಭಜರಂಗದಳ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುಮಾಡಿದ್ದಾರೆ. ಇಂದು ಯುಗಾದಿ ಹಬ್ಬದ ಹೊಸತಡಕು ವಿಚಾರದಲ್ಲಿ ಪೋಸ್ಟ್ ಮಾಡಿದ್ದಾರೆ. ಹಲಾಲ್ ಎಂಬುದು ಅಲ್ಲಾಹುವಿಗೆ ಆ ಮಾಂಸವನ್ನ ಅರ್ಪಣೆ ಮಾಡುವ ವಿಧಾನ. ಪ್ರಾಣಿ ವಧೆ ಮಾಡುವ ಕ್ರಿಯೆಯಲ್ಲಿ ಮಿದುಳಿನಿಂದ ಕೆಲ ವಿಷಕಾರಿ ರಾಸಾಯನಿಕಗಳು ಪ್ರಾಣಿಯ ದೇಹಕ್ಕೆ ಹರಿಯುತ್ತವೆ. ಅದನ್ನ ಸೇವಿಸಿದ ಮನುಷ್ಯ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತದೆ. ಈಗಾಗಿ ಹಲಾಲ್ ಮಾಂಸವನ್ನ ನಿಷೇಧಿಸಿ ಎಂದು ಅಭಿಯಾನ ಮುಂದುವರಿಸಿದ್ದಾರೆ.

ಇದನ್ನೂ ಓದಿ

ಹಿಜಾಬ್ ವಿವಾದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗದಂತೆ ಸಾಮಾಜಿಕ ಜಾಲತಾಣದಲ್ಲಿ ತಿಳುವಳಿಕೆ ಅಭಿಯಾನ ಆರಂಭ

100ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ವಿಷ ಉಣಿಸಿ ಹತ್ಯೆ; ತನಿಖೆ ಪ್ರಾರಂಭಿಸಿದ ಪೊಲೀಸರು

Published On - 10:53 am, Wed, 30 March 22