ಬೆಂಗಳೂರು: ಮಾಜಿ ಶಾಸಕರ, ಮಾಜಿ ಪರಿಷತ್ ಸದಸ್ಯರ ಪಿಂಚಣಿ(Pension) ನಿಲ್ಲಿಸಿ ಎಂದು ವಿಧಾನಸಭಾ ಸ್ಪೀಕರ್ ಮತ್ತು ಸಭಾಪತಿಗೆ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಪತ್ರ ಬರೆದಿದ್ದಾರೆ. ಮಾಜಿ ಶಾಸಕರ ಪಿಂಚಣಿಗೆಂದೇ ಕೋಟಿ ಕೋಟಿ ಹಣ ವೆಚ್ಚವಾಗುತ್ತಿದೆ. ಕೋಟಿ ಕೋಟಿ ಆಸ್ತಿಯ ಒಡೆಯರೂ ಪಿಂಚಣಿ ಪಡೆಯುತ್ತಿದ್ದಾರೆ. ಹೀಗಾಗಿ ಮಾಜಿ ಶಾಸಕರ, ಮಾಜಿ ಪರಿಷತ್ ಸದಸ್ಯರ ಪಿಂಚಣಿ ನಿಲ್ಲಿಸಿ ಎಂದು ಪತ್ರ ಬರೆದು ಆಗ್ರಹಿಸಿದ್ದಾರೆ.
ಮಾಜಿ ಶಾಸಕರ ಪಿಂಚಣಿಗೆಂದೇ ಕೋಟಿ ಕೋಟಿ ಹಣ ವೆಚ್ಚವಾಗುತ್ತಿದೆ. ನೂರಾರು ಕೋಟಿ ಆಸ್ತಿಯ ಒಡೆಯರೂ ಕೂಡ ಸರ್ಕಾರದ ಪಿಂಚಣಿ ಪಡೆಯುತ್ತಿದ್ದಾರೆ. ಸರ್ಕಾರದ ಮೇಲಿನ ಹೊರೆ ತಗ್ಗಿಸಲು ಮಾಜಿ ಶಾಸಕರ, ಮಾಜಿ ಪರಿಷತ್ ಸದಸ್ಯರ ಪಿಂಚಣಿ ನಿಲ್ಲಿಸಿ. ಪ್ರತಿ ತಿಂಗಳು 440 ಮಾಜಿ ಶಾಸಕರಿಗೆ 2.8 ಕೋಟಿ ಪಿಂಚಣಿ ನೀಡಲಾಗುತ್ತಿದೆ. 105 ಮಾಜಿ ಪರಿಷತ್ ಸದಸ್ಯರಿಗೆ ವರ್ಷಕ್ಕೆ 8 ಕೋಟಿ ಪಿಂಚಣಿ ನೀಡಲಾಗುತ್ತಿದೆ. ಮಾಜಿ ಶಾಸಕರ ಪಿಂಚಣಿ ಮೊತ್ತ ವರ್ಷಕ್ಕೆ 26 ಕೋಟಿ. ಸಾವಿರಾರು ಕೋಟಿ ಒಡೆಯರಿಗೂ ಸರ್ಕಾರದ ಪೆನ್ಶನ್ ನೀಡುವ ಅಗತ್ಯವೇನಿದೆ ಎಂದು ಸಭಾಧ್ಯಕ್ಷರು ಹಾಗೂ ಸಭಾಪತಿಗಳಿಗೆ ಪ್ರಶ್ನೆ ಮಾಡಿ ಸಾಮಾಜಿಕ ಹೋರಾಟಗಾರ ಹೆಚ್.ಎಂ.ವೆಂಕಟೇಶ್ ಪತ್ರ ಬರೆದಿದ್ದಾರೆ.
ಈ ಕೊರೊನಾ ಸಾಂಕ್ರಾಮಿಕ ರೋಗ ದೇಶದ ನಾಗರಿಕರನ್ನು ಇನ್ನಿಲ್ಲದಂತೆ ಮಾಡುತ್ತಿವೆ. ಇಂತಹ ಕಷ್ಟಕರ ಸನ್ನಿವೇಶದಲ್ಲಿ ರಾಜ್ಯ ಸರ್ಕಾರವು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ನಾದ ಬಲೆಯಲ್ಲಿ ಸಿಲುಕಿಕೊಂಡಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಉಲ್ಲೇಖ ಎರಡರನ್ವಯ ಜಾರಿಯಾಗುತ್ತಿರುವ ಸದಲ ಕಾನೂನುಗಳನ್ನು ತಕ್ಷಣಕ್ಕೆ ರದ್ದುಪಡಿಸಿ ಜನಸಾಮಾನ್ಯರ ತೆರಿಗೆ ಹಣವನ್ನು ಸದ್ವಿನಿಯೋಗವಾಗುವಂತೆ ಜನಸಾಮಾನ್ಯರ ವೈದ್ಯಕೀಯ ಚಿಕಿತ್ಸೆಗೆ ಅಥವಾ ದಿನಮರ್ಬಲರ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ನಾನು ಈ ಮೂಲಕ ತಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Published On - 2:53 pm, Sun, 17 July 22