ಮಾರಕಾಸ್ತ್ರಗಳಿಂದ ಹಲ್ಲೆಗೈದು, ಕಲ್ಲು ಎತ್ತಿಹಾಕಿ ಯುವಕನ ಹತ್ಯೆ: ಬೆಂಗಳೂರಿನಲ್ಲೊಂದು ಬರ್ಬರ ಕೊಲೆ
ಅನೈತಿಕ ಸಂಬಂಧಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಸತೀಶ್ ಲಾಡ್ಜ್ನಲ್ಲಿ ನಡೆದಿದೆ.
ಬೆಂಗಳೂರು: ಮಾರಕಾಸ್ತ್ರಗಳಿಂದ ಹಲ್ಲೆಗೈದು, ಕಲ್ಲು ಎತ್ತಿಹಾಕಿ ಯುವಕನ ಹತ್ಯೆ (Murder) ಮಾಡಿರುವಂತಹ ಘಟನೆ ನಗರದ ಕೆಂಗೇರಿ ಬಳಿಯ ಕೋನಸಂದ್ರದಲ್ಲಿ ಬರ್ಬರ ಕೊಲೆಯಾಗಿದೆ. ಹೆಚ್.ಗೊಲ್ಲಹಳ್ಳಿಯ ನಿವಾಸಿ ಹೇಮಂತ್(27) ಬರ್ಬರ ಕೊಲೆಯಾದ ಯುವಕ. ಹುಟ್ಟುಹಬ್ಬದ ದಿನವೇ ಹೇಮಂತ್ನನ್ನ ದುರುಳರು ಹತ್ಯೆಗೈದಿದ್ದಾರೆ. ರಾತ್ರಿ ಸ್ನೇಹಿತನೊಂದಿಗೆ ಮನೆಯಿಂದ ಹೊರಹೋಗಿದ್ದ ಹೇಮಂತ್, ಪರಿಚಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನೂ ಬೆಸ್ಕಾಂ ನಿರ್ಲಕ್ಷ್ಯದಿಂದ ಬಾಲಕ ಸಾವು ಕೇಸ್ ಹಿನ್ನೆಲೆ ಮೃತನ ಕುಟುಂಬಸ್ಥರು, ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಬೆಸ್ಕಾಂ ಸಿಬ್ಬಂದಿ ಸರಿಯಾಗಿ ವೈರಿಂಗ್ ಮಾಡದ ಆರೋಪ ವಿದ್ಯುತ್ ತಂತಿ ತುಂಡಾಗಿಬಿದ್ದು ಸ್ಥಳದಲ್ಲೇ ಲುಕ್ಮಾನ್(12) ಸಾವನ್ನಪ್ಪಿರುವಂತ ಘಟನೆ ಯಶವಂತಪುರದ ಷರೀಫ್ನಗರದಲ್ಲಿ ನಿನ್ನೆ (ಜುಲೈ 16ರಂದು) ನಡೆದಿತ್ತು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ವೃದ್ಧೆಯ ರಕ್ಷಣೆ:
ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ಸೋಮೇಶ್ವರ ರೈಲ್ವೆ ಹಳಿ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ವೃದ್ಧೆಯನ್ನ ಪೊಲೀಸರು ರಕ್ಷಿಸಿರುವಂತಹ ಘಟನೆ ನಡೆದಿದೆ. ನಾರಸಿಂಹನಹಳ್ಳಿಯ ಪಾರ್ವತಮ್ಮರನ್ನ ರಕ್ಷಿಸಿ ಅನಾಥಾಶ್ರಮಕ್ಕೆ ಸಿಬ್ಬಂದಿ ಕಳುಹಿಸಿದ್ದಾರೆ. ನಾಲ್ವರು ಮಕ್ಕಳಿದ್ರೂ ತಾಯಿಯನ್ನ ನೋಡಿಕೊಳ್ಳದ ಹಿನ್ನೆಲೆ ಆತ್ಮಹತ್ಯೆಗೆ ವೃದ್ಧೆ ನಿರ್ಧರಿಸಿದ್ದಳು. ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅನೈತಿಕ ಸಂಬಂಧಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ
ನೆಲಮಂಗಲ: ಅನೈತಿಕ ಸಂಬಂಧಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಸತೀಶ್ ಲಾಡ್ಜ್ನಲ್ಲಿ ನಡೆದಿದೆ. ಬೆಂಗಳೂರಿನ ಕುರಬರಹಳ್ಳಿಯ ಅರುಣ್(33) ಮೃತ ದುರ್ದೈವಿ. ಮದುವೆಯಾಗದೆ ಮಾಜಿ ಪ್ರಿಯಕರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಪ್ರಿಯಕರ ಪತಿಗೆ ವಿಷಯ ತಿಳಿದು ವಾರ್ನಿಂಗ್ ಮಾಡಲಾಗಿತ್ತು. ಇದೇ ವಿಷಯವಾಗಿ ಮಾನಸಿಕವಾಗಿ ನೊಂದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರೈತರ ಸಾವು
ಬೆಳಗಾವಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ಹಿರೂರು ಬಳಿ ನಡೆದಿದೆ. ಫಕೀರಪ್ಪ ಚಂದರಗಿ(54), ಮಹದೇವ ಮೇತ್ರಿ(40) ಮೃತ ರೈತರು. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.