Bengaluru Traffic Advisory: ವರ್ತೂರು ಜಾತ್ರೆ ಹಿನ್ನೆಲೆ 3 ದಿನ ಸಂಚಾರ ಬದಲಾವಣೆ; ಪರ್ಯಾಯ ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ

ವರ್ತೂರಿನಲ್ಲಿ ಮೂರು ದಿನ ಶ್ರೀ ಚನ್ನರಾಯಸ್ವಾಮಿ ಜಾತ್ರಾ ರಥೋತ್ಸವ ದೀಪೋತ್ಸವ ಮತ್ತು ಪಲ್ಲಕ್ಕಿ ಕರಗ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆ ಜನವರಿ 25ರಿಂದ 27ರ ವರೆಗೆ ಸಂಚಾರ ನಿರ್ಬಂಧ ಹೇರಲಾಗಿದೆ. ವಾಹನ ಸವಾರರು ಸಹಕರಿಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದು, ಸಂಚಾರದ ಪರ್ಯಾಯ ರಸ್ತೆಗಳ ವಿವರ ಇಲ್ಲಿದೆ.

Bengaluru Traffic Advisory: ವರ್ತೂರು ಜಾತ್ರೆ ಹಿನ್ನೆಲೆ 3 ದಿನ ಸಂಚಾರ ಬದಲಾವಣೆ; ಪರ್ಯಾಯ ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ
ವರ್ತೂರು ಜಾತ್ರೆ ಹಿನ್ನೆಲೆ 3 ದಿನ ಸಂಚಾರ ಬದಲಾವಣೆ; ಪರ್ಯಾಯ ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ

Updated on: Jan 25, 2026 | 8:48 AM

ಬೆಂಗಳೂರು, ಜನವರಿ 25: ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ  (Traffic Advisory) ವರ್ತೂರಿನಲ್ಲಿ ಮೂರು ದಿನ ಶ್ರೀ ಚನ್ನರಾಯಸ್ವಾಮಿ ಜಾತ್ರಾ ರಥೋತ್ಸವ ದೀಪೋತ್ಸವ ಮತ್ತು ಪಲ್ಲಕ್ಕಿ ಕರಗ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆ ಠಾಣಾ ವ್ಯಾಪ್ತಿಯಲ್ಲಿನ ಸಂಚಾರ ಮಾರ್ಗಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ವಾಹನ ಸವಾರರು ಸಹಕರಿಸುವಂತೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಸಂಚಾರದ ಪರ್ಯಾಯ ರಸ್ತೆಗಳ ವಿವರ ಇಲ್ಲಿದೆ.

ಜನವರಿ 25 ಭಾನುವಾರದಿಂದ ಜನವರಿ 27ರವರೆಗೆ ಮೂರು ದಿನ ನಡೆಯಲಿರುವ ಮಹೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಜಾತ್ರಾ ಸ್ಥಳದಲ್ಲಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಪಾರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ಬೆಂಗಳೂರು ನಗರ ಸಂಚಾರ ಪೂರ್ವ ವಿಭಾಗ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಎಕ್ಸ್ ಪೋಸ್ಟ್ ಇಲ್ಲಿದೆ

ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳು

ವೈಟ್‌ಫೀಲ್ಡ್‌ನಿಂದ ಗುಂಜೂರು ಕಡೆಗೆ ಬರುವ ಲಘು ವಾಹನಗಳು ಇಮ್ಮಡಿಹಳ್ಳಿ, ವಾಲೇಪುರ ಸೂರಹುಣಸೆ ರಸ್ತೆಯಿಂದ ಮಧುರನಗರದ ಮೂಲಕ ಹಲಸಹಳ್ಳಿ ಗುಂಜೂರು ಕಡೆಗೆ ಹಾಗೂ ವರ್ತೂರು ಪೊಲೀಸ್ ಠಾಣೆ ಕಡೆಯಿಂದ ಸಂಚರಿಸಬಹುದಾಗಿದೆ.

ಗುಂಜೂರಿನಿಂದ ವೈಟ್‌ ಫೀಲ್ಡ್ ಕಡೆಗೆ ಸಂಚರಿಸುವ ಲಘು ವಾಹನಗಳು ಗುಂಜೂರಿನ ಶ್ರೀರಾಮದೇವಾಲಯದ ಬಳಿ ಬಲ ತಿರುವು ಪಡೆದು ಹಲಸಹಳ್ಳಿ ರಸ್ತೆಯಿಂದ ಮಧುರನಗರದ ಮೂಲಕ ಸೂರಹುಣಸೆ ಮತ್ತು ವಾಲೇಪುರ ಮೂಲಕ ಹಾಗೂ ವರ್ತೂರು ಕಾಲೇಜು ಮೂಲಕ ವೈಟ್ ಫೀಲ್ಡ್ ಕಡೆಗೆ ಸಂಚರಿಸಬಹುದು.

ಗುಂಜೂರು ಕಡೆಯಿಂದ ಬರುವ ವಾಹನ ಸವಾರರು ಕುಂದಲಹಳ್ಳಿ ಮತ್ತು ಮಾರತ್ ಹಳ್ಳಿ ಕಡೆಗೆ ಸಂಚರಿಸುವ ಲಘು ವಾಹನಗಳು ಗುಂಜೂರು ಕೆ.ಎಫ್.ಸಿ ರಸ್ತೆ, ಪಣತ್ತೂರು ರೈಲ್ವೆ ಬ್ರಿಜ್ ಮೂಲಕ ಹಾಗೂ ವಿಬ್ ಗಯಾರ್ ಕಡೆಯಿಂದ ಸಂಚರಿಸವಂತೆ ಸಂಚಾರ ಪೊಲೀಸರು ಕೋರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.