ಬೆಂಗಳೂರು ವಿದೇಶಿಗರ ಶಾಶ್ವತ ಮನೆ: ಭಾರತದ ಸರಳ ಜೀವನಕ್ಕೆ ರಷ್ಯಾ ಮಹಿಳೆ ಫಿದಾ

ರಷ್ಯಾದ ಮಹಿಳೆಯೊಬ್ಬರು ಭಾರತದಲ್ಲಿ ತಮ್ಮ ಮಕ್ಕಳ ಜೀವನಕ್ಕಾಗಿ ಬೆಂಗಳೂರನ್ನು ಶಾಶ್ವತ ತಾಣವನ್ನಾಗಿ ಆರಿಸಿಕೊಂಡಿದ್ದಾರೆ. ಭಾರತದ ಸರಳ ಜೀವನಶೈಲಿ, ಬಹುಸಂಸ್ಕೃತಿಯ ವಾತಾವರಣ, ಮತ್ತು ಮುಕ್ತ ಮನಸ್ಸಿನ ಬೆಳವಣಣೆಗೆ ಇದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಾವು ಪ್ರವಾಸಿಗರಾಗಿ ಅಲ್ಲ, ಬದಲಿಗೆ ಇಲ್ಲಿಯೇ ಸಂಪೂರ್ಣ ಜೀವನ ನಡೆಸುವ ನಿರ್ಧಾರವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಜನರು ಮತ್ತು ಸಂಸ್ಕೃತಿಯನ್ನು ಇವರು ತುಂಬಾ ಇಷ್ಟಪಟ್ಟಿದ್ದಾರೆ.

ಬೆಂಗಳೂರು ವಿದೇಶಿಗರ ಶಾಶ್ವತ ಮನೆ: ಭಾರತದ ಸರಳ ಜೀವನಕ್ಕೆ ರಷ್ಯಾ ಮಹಿಳೆ ಫಿದಾ
ವಿಡಿಯೋ

Updated on: Dec 23, 2025 | 10:21 AM

ಬೆಂಗಳೂರು, ಡಿ.23: ಕಳೆದ ಎರಡು ವರ್ಷಗಳಿಂದ (foreigners living in Bengaluru) ವಿದೇಶಿಗರು ವಾಸಿಸಲು ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಹಲವು ವಿದೇಶಿಗರು ಬೆಂಗಳೂರಿನ ಆಹಾರ ಪದ್ಧತಿಗಳು ಹಾಗೂ ನಗರ ಬಗ್ಗೆ ಇಷ್ಟಪಟ್ಟು ಇಲ್ಲಿ ವಾಸಿಸಲು ಆರಂಭಿಸಿದ್ದಾರೆ. ಇತ್ತೀಚಿಗೆ ಇಟಲಿಯ ರಾಜತಾಂತ್ರಿಕ ಅಧಿಕಾರಿ ಜಿಯಾಂಡೊಮೆನಿಕೊ ಮಿಲಾನೊ ಕೂಡ ಬೆಂಗಳೂರು ಜೀವನವನ್ನು ಮೆಚ್ಚಿಕೊಂಡಿದ್ದರು. ಇದೀಗ ರಷ್ಯಾದ ಮಹಿಳೆಯೊಬ್ಬರು ಮಕ್ಕಳ ಜೀವನಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಭಾರತವನ್ನು ಕೇವಲ ಪ್ರವಾಸಿ ತಾಣವನ್ನಾಗಿ ಮಾಡಿಕೊಳ್ಳುವ ಬದಲು ಶಾಶ್ವತ ನೆಲೆಯನ್ನಾಗಿ ಮಾಡಿಕೊಳ್ಳಲು ಕಾರಣ ಏನು ಎಂಬ ಬಗ್ಗೆ ಒಂದು ವಿಡಿಯೋವನ್ನು ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಬೆಳೆಯುವುದರಿಂದ ತಮ್ಮ ಮಕ್ಕಳು ಎಲ್ಲದರಲ್ಲೂ ಹೊಂದಿಕೊಳ್ಳುತ್ತಾರೆ, ಎಲ್ಲವನ್ನು ಗಮನಿಸುತ್ತಾರೆ. ಮುಕ್ತ ಮನಸ್ಸಿನಿಂದ ಬದುಕುತ್ತಾರೆ ಎಂದು ಈ ಪೋಸ್ಟ್​​ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ ಇನ್ಸ್ಟಾಗ್ರಾಮ್​​ನಲ್ಲಿ ಹೀಗೆ ಹೇಳಿಕೊಂಡಿದ್ದಾರೆ. ” ನಾವು ಭಾರತದಲ್ಲಿ ವಾಸಿಸಲು ಆಯ್ಕೆ ಮಾಡಿಕೊಂಡದ್ದು, ಪ್ರವಾಸಿಗರಾಗಿ ಅಲ್ಲ ಅಥವಾ ಅಲ್ಪಾವಧಿ ಜೀವನಕ್ಕಲ್ಲ, ಜೀವನ ಪೂರ್ತಿ ಇಲ್ಲಿಯೇ ಇರಬೇಕು. ಮನೆ, ದೈನಂದಿನ ದಿನಚರಿ, ಮಾರುಕಟ್ಟೆಗಳು, ಶಾಲೆಗಳು ಎಲ್ಲ ಜೀವನ ಇಲ್ಲಿಯೇ ಮುಂದುವರಿಸಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಭಾರತವು ನಮಗೆ ಸರಳ ಜೀವನವನ್ನು ಕಲಿಸಿದೆ. ಇಲ್ಲಿನ ಜೀವನ ಆತುರದಿಂದ ಇರುವುದಿಲ್ಲ. ಇಲ್ಲಿನ ಸಮಯವು ಕೂಡ ವಿಭಿನ್ನವಾಗಿದೆ. ಇನ್ನು ಕ್ರಮೇಣ ನೀವು ನಿರಂತರ ಹೊರಗಿನ ಶಬ್ದದ ಬದಲು ನಿಮ್ಮ ಮಾತನ್ನು ಕೇಳಲು ಪ್ರಾರಂಭಿಸುತ್ತೀರಿ” ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಇಲ್ಲಿನ ಜನರನ್ನು ನಾವು ಪ್ರೀತಿಸಲು ಆರಂಭಿಸಿದ್ದೇವೆ. ಮುಕ್ತತೆ, ದಯೆ, ಸಹಾಯ ಮಾಡುವ ಇಚ್ಛಾಶಕ್ತಿಯನ್ನು ಇಲ್ಲಿಂದ ಕಲಿಯುತ್ತಿದ್ದೇವೆ. ನೆರೆಹೊರೆಯವರ ಬಗ್ಗೆಯೂ ನಾವು ಪರಸ್ಪರ ತಿಳಿದುಕೊಂಡಿದ್ದೇವೆ. ಇಲ್ಲಿ ಕಳೆಯುವ ಪ್ರತಿಯೊಂದು ಕ್ಷಣವನ್ನು ಕೂಡ ಅನುಭವಿಸುತ್ತೇವೆ. ಭಾಷೆ, ಆಚರಣೆ, ಎಲ್ಲವೂ ತುಂಬಾ ಇಷ್ಟ ಎಂದು ಯಾನಾ ಹೇಳುತ್ತಾರೆ. ಜತೆಗೆ ಮಕ್ಕಳ ಭವಿಷ್ಯ ಕೂಡ ಇಲ್ಲಿ ಉತ್ತಮವಾಗಿರುತ್ತದೆ. ಅವರು ಎಲ್ಲದರಲ್ಲೂ ಹೊಂದಿಕೊಳ್ಳುತ್ತಾರೆ, ಎಲ್ಲವನ್ನು ಗಮನಿಸುತ್ತಾರೆ. ಮುಕ್ತ ಮನಸ್ಸಿನಿಂದ ಬದುಕುತ್ತಾರೆ. ಬಹುಸಂಸ್ಕೃತಿ, ಬಹುಭಾಷಾ ಪರಿಸರದಲ್ಲಿ ಬದುಕುವುದು ಒಂದು ತರ ಖುಷಿ. ಈ ನಗರ ಗೌರವ ಮತ್ತು ಸರಳ ವಿಷಯಗಳಿಗೆ ಮೆಚ್ಚುಗೆ ಪಡೆದುಕೊಂಡಿದೆ.

ಇದನ್ನೂ ಓದಿ: ‘ಚಳಿಯ ವಿರುದ್ಧ Z+ ಭದ್ರತೆ’: ಹೊಸ ಆವಿಷ್ಕಾರ ಮಾಡಿದ ಆಟೋ ಚಾಲಕ

ಭಾರತದಲ್ಲಿ ದೈನಂದಿನ ಜೀವನದ ಸರಳತೆಯನ್ನು ನಮ್ಮ ಕುಟುಂಬ ಇಷ್ಟಪಡುತ್ತದೆ. ವರ್ಷಪೂರ್ತಿ ಬೆಚ್ಚಗಿನ ವಾತಾವರಣ, ತಾಜಾ ಹಣ್ಣುಗಳನ್ನು ಆನಂದಿಸುವುದು ಮತ್ತು ಕುಟುಂಬದ ಜತೆಗೆ ಹೆಚ್ಚು ಸಮಯ ಕಳೆಯಬಹುದು. ಆದರೆ ಭಾರತದಲ್ಲಿ ಜೀವನ ನಡೆಸುವುದು ಅಷ್ಟೊಂದು ಸುಲಭವಲ್ಲ. ಅಂದರೆ ಗದ್ದಲ, ಅಸ್ತವ್ಯಸ್ತ ಮತ್ತು ಅಪರಿಚಿತ ವಿಚಾರಗಳಿಂದ ಕೂಡಿದೆ. ಆದರೆ ಇಲ್ಲಿ ನಾವು ನಿಜವಾಗಿಯೂ ತುಂಬಾ ಸಂತೋಷದಿಂದ ಜೀವನ ನಡೆಸುತ್ತಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಅನೇಕರ ಮನಸ್ಸು ಗೆದ್ದಿದೆ. ಭಾರತವು ಉಳಿಯಲು ಮತ್ತು ಆನಂದಿಸಲು ಒಂದು ಸುಂದರವಾದ ಸ್ಥಳ ಎಂದು ಒಬ್ಬರು ಹೇಳಿದ್ದಾರೆ. ಭಾರತದಂತಹ ಸ್ಥಳ ಇನ್ನೊಂದಿಲ್ಲ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ