AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚಳಿಯ ವಿರುದ್ಧ Z+ ಭದ್ರತೆ’: ಹೊಸ ಆವಿಷ್ಕಾರ ಮಾಡಿದ ಆಟೋ ಚಾಲಕ

ಚಳಿಗಾಲದಲ್ಲಿ ಕಾರುಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನಿಸಿ, ಆಟೋ ಚಾಲಕನೊಬ್ಬ ತಮ್ಮ ರಿಕ್ಷಾವನ್ನು ವಿಶೇಷವಾಗಿ ಮಾರ್ಪಡಿಸಿದ್ದು, ಪ್ರಯಾಣಿಕರಿಗೆ ಚಳಿಯಿಂದ ರಕ್ಷಣೆ ನೀಡಲು ದಪ್ಪ ಪರದೆಗಳು ಮತ್ತು ಇತರ ಬದಲಾವಣೆಗಳನ್ನು ತಂದಿದ್ದಾನೆ. ಈ 'ಟಾಪ್ ಮಾಡೆಲ್' ಆಟೋದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಾಲಕನ ಆವಿಷ್ಕಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದು ಚಳಿಗಾಲದ ಆಟೋ ಸವಾರಿಯನ್ನು ಆಹ್ಲಾದಕರವಾಗಿಸಲು ಹೊಸ ಪರಿಹಾರವಾಗಿದೆ ಎಂದು ಹೇಳಲಾಗಿದೆ.

'ಚಳಿಯ ವಿರುದ್ಧ Z+ ಭದ್ರತೆ': ಹೊಸ ಆವಿಷ್ಕಾರ ಮಾಡಿದ ಆಟೋ ಚಾಲಕ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Dec 22, 2025 | 12:32 PM

Share

ಚಳಿಗಾಲದಲ್ಲಿ ಹೆಚ್ಚಿನ ಜನ ಆಟೋ, ಬೈಕ್​​ಗಿಂತ ಕಾರುಗಳನ್ನು ಬುಕ್​​​ ಮಾಡುತ್ತಾರೆ. ಕಾರಿನಲ್ಲಿ ಹೊರಗಿನ ಗಾಳಿ ಬರದಂತೆ ಗ್ಲಾಸ್​​​ ಹಾಕಿಕೊಂಡು ಪ್ರಯಣ ಮಾಡಬಹುದು, ಆದರೆ ಆಟೋ,  ಬೈಕ್​​ನಲ್ಲಿ ಎಲ್ಲವೂ ಓಪನ್​​ ಇರುತ್ತದೆ. ಇದರಿಂದ ಚಳಿ ಹೆಚ್ಚಾಗುತ್ತದೆ. ಅದಕ್ಕೆ ಹೆಚ್ಚಿನ ಜನ ಕಾರುಗಳನ್ನು ಉಪಯೋಗಿಸುತ್ತಾರೆ. ಇದರಿಂದ ಆಟೋ ಚಾಲಕರಿಗೆ ನಷ್ಟ ಆಗುತ್ತದೆ. ಅದಕ್ಕೆ ಇಲ್ಲೊಬ್ಬ ಆಟೋ ಚಾಲಕ (viral auto rickshaw) ತನ್ನ ಗ್ರಾಹಕರಿಗೆ ಚಳಿಗಾಲದಲ್ಲಿ ರಿಕ್ಷಾ ಸವಾರಿಯೂ ಉತ್ತಮವಾಗಿರಲಿ ಎಂದು ವಿಭಿನ್ನವಾಗಿ ಯೋಚನೆ ಮಾಡಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತನ್ನ ಆಟೋದಲ್ಲಿ ವಿಶೇಷ ಬದಲಾವಣೆಯನ್ನು ಮಾಡಿಕೊಂಡು ಹೊಸ ಲುಕ್​​​ ನೀಡಿದ್ದಾನೆ. ಇದನ್ನು ನೋಡಿ ನೆಟ್ಟಿಗರು ಅಚ್ಚರಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದಲ್ಲಿ ಚಾಲಕ ತನ್ನ ಆಟೋದ ಎರಡೂ ಬದಿಗಳಲ್ಲಿ ಗಾಳಿ ಬರದಂತೆ ಎರಡು ದಪ್ಪ ಪರದೆಗಳನ್ನು ಅಳವಡಿಸಿದ್ದಾನೆ. ಜೊತೆಗೆ, ಚಾಲಕನ ಬದಿ ಮತ್ತು ಪ್ರಯಾಣಿಕರ ನಡುವೆ ದಪ್ಪ ಹಾಳೆಯನ್ನು ಕೂಡ ಅಳವಳಡಿಸಿರುವುದನ್ನು ಕಾಣಬಹುದು. ಇದನ್ನು ಚಾಲಕ ಹಾಗೂ ಪ್ರಯಾಣಿಕರ ನಡುವೆ ಸುಗಮ ಸಂವಹನ ಇರಲಿದೆ ಎಂದು ಅಳವಡಿಸಿದ್ದಾನೆ. ಈ ವಿಡಿಯೋವನ್ನು @mukul0112_ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಆಟೋವನ್ನು ‘ಟಾಪ್ ಮಾಡೆಲ್’ ಎಂದು ಕರೆದಿದ್ದಾರೆ. ಈ ವಿಡಿಯೋವನ್ನು ಸುಮಾರು 1 ಮಿಲಿಯನ್ ಜನರು ನೋಡಿದ್ದಾರೆ.

ಇದನ್ನೂ ಓದಿ: ಇಂದಿರಾನಗರದ ಪಾದಚಾರಿ ಮಾರ್ಗ ಅಪಾಯದಲ್ಲಿ: ಕೆನಡಾ ವ್ಯಕ್ತಿಯ ಹೇಳಿದ್ದೇನು?

ವೈರಲ್​​ ವಿಡಿಯೋ ಇಲ್ಲಿ ನೋಡಿ:

View this post on Instagram

A post shared by Mukul Kaushik (@mukul0112_)

ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 40,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.ಆಟೋರಿಕ್ಷಾದ ವಿಶಿಷ್ಟ ಸೆಟಪ್ ಬಗ್ಗೆ ಆನ್‌ಲೈನ್‌ನಲ್ಲಿ ಭಾರೀ ಚರ್ಚೆ ನಡೆದಿದೆ. ಈ ಆಟೋದಲ್ಲಿ  ಸನ್‌ರೂಫ್ ಒಂದು ಕಾಣೆಯಾಗಿದೆ ಎಂದು ಹಾಸ್ಯವಾಗಿ ಒಬ್ಬರು ಹೇಳಿದ್ದಾರೆ. ಇದು ನಿಜವೇ? ನನಗೆ ಅಚ್ಚರಿಯಾಗಿ ಕಾಣುತ್ತಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದೊಂದು ನಿಜಕ್ಕೂ ಮಾದರಿಯ ವಿಚಾರ, ಹಾಗೂ ಇದು ಚಳಿಯ ವಿರುದ್ಧ Z+ ರಕ್ಷಣೆ ಎಂದು ಅನೇಕ ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
6 ತಿಂಗಳಿಂದ ಪಾವತಿಯಾಗಿಲ್ಲ ಸಂಬಳ! ಗುತ್ತಿಗೆ ವೈದ್ಯಾಧಿಕಾರಿ ರಾಜೀನಾಮೆ
ನ್ಯೂಝಿಲೆಂಡ್​ ತಂಡಕ್ಕೆ ಬರೋಬ್ಬರಿ 323 ರನ್​ಗಳ ಜಯ
ನ್ಯೂಝಿಲೆಂಡ್​ ತಂಡಕ್ಕೆ ಬರೋಬ್ಬರಿ 323 ರನ್​ಗಳ ಜಯ
ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ?
ಬಿಗ್ ಬಾಸ್ ಮನೆಗೆ ಹೋಗಿದ್ದು ಅಶ್ವಿನಿ, ಗಿಲ್ಲಿಗೆ ಠಕ್ಕರ್ ಕೊಡೋಕಾ?
ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ
ಪ್ರೊಪೋಸ್ ಮಾಡಲು ಉಂಗುರವಲ್ಲ, ಸಿಂಧೂರದೊಂದಿಗೆ ಬಂದ ಯುವಕ
ಭೀಕರ ಕೊಲೆ ಪ್ರಕರಣದಿಂದ ಪೊಲೀಸರಿಗೇ ಶಾಕ್! ಎಸ್​ಪಿ ಹೇಳಿದ್ದೇನು ನೋಡಿ
ಭೀಕರ ಕೊಲೆ ಪ್ರಕರಣದಿಂದ ಪೊಲೀಸರಿಗೇ ಶಾಕ್! ಎಸ್​ಪಿ ಹೇಳಿದ್ದೇನು ನೋಡಿ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್