Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಕಂಡುಹಿಡಿಯುವಿರಾ
ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ಎರಡು ಚಿತ್ರಗಳು ನೋಡಲು ಒಂದೇ ರೀತಿ ಇದ್ದು, ಇವುಗಳ ನಡುವಿನ ವ್ಯತ್ಯಾಸಗಳನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ ನಿಮ್ಮ ವೀಕ್ಷಣಾ ಸಾಮರ್ಥ್ಯ ಪರೀಕ್ಷಿಸಿಕೊಳ್ಳಿ.

ಬಿಡುವಿನ ಸಮಯದಲ್ಲಿ ಹೆಚ್ಚಿನವರು ಒಗಟಿನ ಆಟಗಳತ್ತ ಕಣ್ಣಾಯಿಸುತ್ತಾರೆ. ಈ ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಒಗಟಿನ ಆಟಗಳು ನೋಡುವುದಕ್ಕೆ ಸುಲಭವಾಗಿ ಕಂಡರೂ ಟ್ರಿಕ್ಕಿಯಾಗಿರುತ್ತದೆ. ಇದೀಗ ವೈರಲ್ ಆಗಿರುವ ಈ ಚಿತ್ರಗಳು ಅಂತಹದ್ದೇ ಆಗಿದೆ. ಈ ಎರಡು ಚಿತ್ರಗಳಲ್ಲಿರುವ ಮೂರು ವ್ಯತ್ಯಾಸಗಳನ್ನು ಐವತ್ತು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ಈ ಟ್ರಿಕ್ಕಿ ಒಗಟಿನ ಆಟವನ್ನು ಬಿಡಿಸಲು ನಿಮಗೆ ಸಾಧ್ಯವೇ.
ಈ ಚಿತ್ರ ನೋಡಿದಾಗ ಏನು ಕಾಣಿಸುತ್ತದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇಲ್ಯೂಷನ್ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಸರಳವಾಗಿ ಕಾಣುತ್ತದೆ. ಈ ಎರಡು ಚಿತ್ರಗಳಲ್ಲಿ ಒಂದೊಂದು ಕುರಿ ನಿಂತು ಕೊಂಡಿದೆ. ಇದರಲ್ಲಿ ಮೂರು ವ್ಯತ್ಯಾಸಗಳು ಅಡಗಿವೆ. ಈ ವ್ಯತ್ಯಾಸಗಳನ್ನು ಪತ್ತೆ ಹಚ್ಚಲು ಕೆಲವೇ ಐವತ್ತು ಸೆಕೆಂಡುಗಳು ಮಾತ್ರ ಇವೆ. ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಿ ಸೈ ಎನಿಸಿಕೊಳ್ಳಿ.
ಇದನ್ನೂ ಓದಿ:ನದಿ ದಡದಲ್ಲಿ ಅಡಗಿರುವ ನಾಯಿಮರಿಯನ್ನು ಹುಡುಕಬಲ್ಲಿರಾ
ಮೂರು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತೇ?
ಈ ಎರಡು ಚಿತ್ರಗಳತ್ತ ಎಷ್ಟೇ ಕಣ್ಣು ಹಾಯಿಸಿದರೂ ಮೂರು ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲವೇ. ನೂರರಲ್ಲಿ ಹತ್ತು ಜನರಿಗೆ ಮಾತ್ರ ಇಂತಹ ಒಗಟನ್ನು ಬಿಡಿಸಲು ಸಾಧ್ಯ. ವ್ಯತ್ಯಾಸಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದಲ್ಲಿ ಹೆಚ್ಚು ಚಿಂತಿಸಬೇಡಿ. ನಾವೇ ನಿಮಗೆ ಈ ಕೆಳಗಿನ ಚಿತ್ರದಲ್ಲಿ ಆ ವ್ಯತ್ಯಾಸಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




