Viral: ಕೆನಡಾದಿಂದ ಭಾರತಕ್ಕೆ ಮರಳಿದ ಬಳಿಕ ಜೀವನವೇ ಬದಲಾಯ್ತು ಎಂದ ಅನಿವಾಸಿ ಭಾರತೀಯ ಮಹಿಳೆ
ಹಲವು ವರ್ಷಗಳ ಕಾಲ ವಿದೇಶದಲ್ಲಿ ನೆಲೆಸಿ, ತಮ್ಮ ತಾಯ್ನಾಡಿಗೆ ಮರಳಿದಾಗ ಇಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳುವುದು ಕಷ್ಟ. ಇತ್ತೀಚೆಗಷ್ಟೇ ಕೆನಡಾದಿಂದ ಭಾರತಕ್ಕೆ ಮರಳಿದ ಅನಿವಾಸಿ ಭಾರತೀಯ ಮಹಿಳೆ ತಮ್ಮ ಜೀವನದಲ್ಲಾದ ಬದಲಾವಣೆ ಹಾಗೂ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಜೀವನದಲ್ಲಿ ಬದಲಾವಣೆ ಸಹಜ. ಆದರೆ ಎಲ್ಲವನ್ನೂ ಸಲೀಸಾಗಿ ಸ್ವೀಕರಿಸುವ ಮನಸ್ಸು ಇರಬೇಕು. ಜೀವನದ ಅನುಭವಗಳು ಬದುಕಿಗೆ ಪಾಠವಾಗುತ್ತದೆ. ಕೆನಡಾದಿಂದ (Canada) ಭಾರತಕ್ಕೆ ಮರಳಿದ ಅನಿವಾಸಿ ಭಾರತೀಯ ಮಹಿಳೆ (NRI Women) ತಮ್ಮ ಜೀವನ ಅನುಭವವನ್ನು ತೆರೆದಿಟ್ಟಿದ್ದಾರೆ. ಪ್ರಸ್ತುತ ಗುಜರಾತ್‌ನ ಸೂರತ್‌ನಲ್ಲಿ ವಾಸಿಸುತ್ತಿದ್ದು ತನ್ನ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಯಿತು ಎಂದು ಬಹಿರಂಗ ಪಡಿಸಿದ್ದಾರೆ. ಈ ಕುರಿತಾದ ಪೋಸ್ಟ್ ಸದ್ಯ ವೈರಲ್ ಆಗಿದೆ.
reellifeofzeel ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಅನಿವಾಸಿ ಭಾರತೀಯ ಮಹಿಳೆಯೊಬ್ಬರು ದಿನನಿತ್ಯ ಜೀವನದ ಫೋಟೋಗಳನ್ನು ಹಂಚಿಕೊಂಡಿದ್ದು ತಮ್ಮ ಅನುಭವವನ್ನು ತೆರೆದಿಟ್ಟಿದ್ದಾರೆ. ಈ ಪೋಸ್ಟ್‌ಗೆ ಭಾರತಕ್ಕೆ ಹಿಂತಿರುಗಿದ ಬಳಿಕ ಬದುಕು ಸದ್ದಿಲ್ಲದೆ ಬದಲಾಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದು ನನ್ನ ಬದುಕಿನ ರೀತಿಯನ್ನೇ ನಿಧಾನವಾಗಿ ಬದಲಿಸಿಬಿಡುತ್ತದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಇಲ್ಲಿ ದಿನಗಳು ನನ್ನನ್ನು ಗಾಳಿಯಂತೆ ವೇಗವಾಗಿ ಓಡಿಸುವುದಿಲ್ಲ. ಅವು ಶಬ್ದ, ಮಾತುಕತೆಗಳುಹಾಗೂ ಚಹಾ ವಿರಾಮಗಳೊಂದಿಗೆ, ವಿಶ್ರಾಂತಿ ಪಡೆಯುತ್ತಾ ಮನಸ್ಸನ್ನು ಉಲ್ಲಾಸದಾಯಕವಾಗಿರುತ್ತದೆ. ಇಲ್ಲಿ ಜೀವನವನ್ನು ಅನುಭವಿಸಬಹುದು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಈ ಬದಲಾವಣೆ ಕೇವಲ ಸ್ಥಳಾಂತರದ್ದಲ್ಲ; ಮಾನಸಿಕ ಬದಲಾವಣೆ. ಭಾರತದಲ್ಲಿ ಜೀವನವು ಅಷ್ಟೇನು ಉತ್ತಮವಾಗಿಲ್ಲ. ಆದರೆ ಇಲ್ಲಿ ಜೀವಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ. ದಿನನಿತ್ಯದ ಜೀವನವು ಅನೇಕ ಅಡಚಣೆಗಳು, ಮಾತುಕತೆಗಳು ಹಾಗೂ ಮಾನವೀಯ ಸಂಪರ್ಕಗಳಿಂದ ಕೂಡಿರುತ್ತದೆ. ಹೀಗಾಗಿ ನಂಬಿಕೆಯೇ ಹಿಂದಿನ ಸವಾಲು ಎದುರಾಗುತ್ತದೆ. ಈ ಸಣ್ಣ ಬದಲಾವಣೆಯು ಬದುಕಿಗೆ ಬೇಕಾದ ಮೌಲ್ಯ ಹಾಗೂ ಜೀವನವನ್ನು ಸ್ವೀಕರಿಸುವುದನ್ನು ಕಲಿಸುತ್ತದೆ. ಶಿಸ್ತು, ಬದ್ಧತೆಯೂ ಜೀವನವನ್ನು ಇನ್ನಷ್ಟು ಪೂರ್ಣವಾಗಿಸುತ್ತದೆ. ಪರಿಪೂರ್ಣ ಜೀವನಶೈಲಿಯನ್ನು ರೂಪಿಸಲುಕಾರಣವಾದದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಭಾರತದಲ್ಲಿ ಬೆಳಗಾಗುವುದನ್ನು ಅಲಾರಾಂನ ಧ್ವನಿಯಿಂದ ತಿಳಿಯುವುದಲ್ಲ. ಸುತ್ತಮುತ್ತಲಿನ ಬದುಕಿನ ಸಹಜ ಶಬ್ದಗಳಿಂದ ತಿಳಿಯುತ್ತದೆ. ಊಟ ಮಾಡುವಾಗ ಯಾವುದೇ ಆತುರವಿಲ್ಲದೆ ನಿಧಾನವಾಗಿ ಕುಳಿತು ಮಾಡುತ್ತೇನೆ. ಆಹಾರವನ್ನು ಜಾಗರೂಕತೆ ಹಾಗೂ ಅಚ್ಚುಕಟ್ಟಾಗಿ ತಯಾರಿಸುವುದು ಅಭ್ಯಾಸವಾಗಿಬಿಟ್ಟಿದೆ. ವಿಷ್ಯಗಳನ್ನು ಗೌಪ್ಯವಾಗಿ ಇಟ್ಟು ಕೊಳ್ಳುವುದು ಕಡಿಮೆಯಾದ್ರೂ, ಇತರರೊಂದಿಗೆ ಇರುವ ಸಂಪರ್ಕದ ಭಾವನೆ ಇನ್ನಷ್ಟು ಗಟ್ಟಿಯಾಗಿದೆ. ಎಲ್ಲದಕ್ಕೂ ಹೊಂದಿಕೊಂಡು ಹೋಗುವುದು ಅಭ್ಯಾಸವಾಗಿದೆ ಎಂದು ಕಲಿತ ಬದುಕಿನ ಪಾಠಗಳನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ರೆಸ್ಟೋರೆಂಟ್ ಬಿಲ್ ನೋಡಿ ಶಾಕ್ ಆದ ಅನಿವಾಸಿ ಭಾರತೀಯ ಬಾಲಕ, ಕಾರಣ ಇದೇ ನೋಡಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜೀವನ ಅನುಭವ ಪಡೆದುಕೊಳ್ಳುತ್ತಾ ಎಲ್ಲದ್ದಕ್ಕೂ ಹೊಂದಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿಮಗೆ ಒಳ್ಳೆಯದಾಗಲಿ, ನೀವು ನಮಗೆ ಮಾದರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಮ್ಮ ದೇಶದಲ್ಲಿ ಜೀವನ ನಡೆಸೋ ಖುಷಿಯೇ ಬೇರೆ, ಒಳ್ಳೆಯದಾಗಲಿ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




