AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಭಾರತಕ್ಕೆ ಬರುವ ಮುಂಚೆ ಈ ವಿಷ್ಯಗಳನ್ನು ತಿಳಿದುಕೊಳ್ಳಲು ಬಯಸ್ತೇನೆ ಎಂದ ರಷ್ಯನ್ ಮಹಿಳೆ

ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ರಷ್ಯನ್ ಮಹಿಳೆಯೂ ಈಬಗ್ಗೆ ಹೇಳಿಕೊಂಡಿದ್ದಾರೆ. ಭಾರತಕ್ಕೆ ತೆರಳುವ ಮೊದಲು ತಾನು ತಿಳಿದುಕೊಳ್ಳಬೇಕೆಂದು ಬಯಸಿದ್ದ ವಿಷಯಗಳ ಪಟ್ಟಿ ಮಾಡಿದ್ದಾರೆ. ಹಿಂದಿ ಭಾಷೆಯ ಪ್ರಾಮುಖ್ಯತೆ, ಯುಪಿಐ ಪಾವತಿಗಳ ಸುಲಭತೆ ಮತ್ತು ದಿನಸಿ ವಸ್ತುಗಳ ತ್ವರಿತ ವಿತರಣೆಯನ್ನು ವಿದೇಶಿ ಮಹಿಳೆ ಎತ್ತಿ ತೋರಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಭಾರತಕ್ಕೆ ಬರುವ ಮುಂಚೆ ಈ ವಿಷ್ಯಗಳನ್ನು ತಿಳಿದುಕೊಳ್ಳಲು ಬಯಸ್ತೇನೆ ಎಂದ ರಷ್ಯನ್ ಮಹಿಳೆ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Dec 22, 2025 | 3:36 PM

Share

ಯಾರೇ ಆಗಲಿ, ಯಾವುದೇ ಊರು, ದೇಶಕ್ಕೆ ತೆರಳಲಿ ಅಲ್ಲಿನ ಆಚಾರ ವಿಚಾರ, ಆಹಾರ ಪದ್ಧತಿ ಹಾಗೂ ಜೀವನ ಶೈಲಿಯ ಬಗ್ಗೆ ತೆರಳುವ ಮುನ್ನ ತಿಳಿದುಕೊಳ್ಳಲು ಮುಂದಾಗುತ್ತಾರೆ. ರಷ್ಯನ್ ಮಹಿಳೆ (Russian woman) ಕೂಡ ಭಾರತಕ್ಕೆ ಬರುವ ಮೊದಲು ನಾನು ಈ ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಭಾರತದಲ್ಲಿ ನೆಲೆಸುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದು, ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅನಸ್ತಾಸಿಯಾ ಶರೋವಾ (Anastasia Sharov) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹಿಂದಿ ಭಾಷೆಯ ಪ್ರಾಮುಖ್ಯತೆ, ಯುಪಿಐ ಪಾವತಿಗಳ ಸುಲಭತೆ ಮತ್ತು ದಿನಸಿ ವಸ್ತುಗಳ ತ್ವರಿತ ವಿತರಣೆಯ ಬಗ್ಗೆ ಉಲ್ಲೇಖಿಸಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ನನ್ನ ಸುತ್ತಲಿನ ಜನರು ಎಂದಿಗೂ ನೇರವಾಗಿ ಇಲ್ಲ ಎಂದು ಹೇಳುವುದಿಲ್ಲ. ಈ ಸಿಗ್ನಲ್‌ಗಳ ಬಗ್ಗೆ ತಿಳಿದುಕೊಳ್ಳಬೇಕು. ಕಡಿಮೆ ದೂರಕ್ಕೂ ವಾಹನದ ಅಗತ್ಯವಿದೆ ಎಂದು ತಿಳಿಸಿದ್ದಾರೆ. ರಾತ್ರಿಯಲ್ಲಿ ಫ್ಯಾನ್‌ನ ಶಬ್ದಕ್ಕೆ ತಾನು ಒಗ್ಗಿಕೊಂಡಿದ್ದೇನೆ, ಫ್ಯಾನ್ ಇಲ್ಲದೆ ಮಲಗಲು ಸಾಧ್ಯವಿಲ್ಲ ಎಂದು ಹೀಗೆ ಹತ್ತಾರು ವಿಷಯಗಳನ್ನು ಪಟ್ಟಿ ಮಾಡಿರುವುದನ್ನು ನೋಡಬಹುದು.

ಇದನ್ನೂ ಓದಿ:ಗೋಲ್ಗಪ್ಪಾ ಸವಿದು ಮುದ್ದಾಗಿ ರಿಯಾಕ್ಷನ್ ಕೊಟ್ಟ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇದು ಯಾವುದೇ ಅಪಪ್ರಚಾರವಲ್ಲ, ದ್ವೇಷವಿಲ್ಲದೆ ಭಾರತದ ಬಗ್ಗೆ ಅತ್ಯಂತ ನಿಖರವಾದ ಸಂಗತಿಗಳು ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಮುಂಬೈ, ಕೇರಳ, ಅಸ್ಸಾಂ ಮುಂತಾದ ಭಾರತದ ಕರಾವಳಿ ಪ್ರದೇಶಗಳಿಗೆ ಹೋದರೆ, ನೀವು ಮಾನ್ಸೂನ್ ಅನ್ನು ಅನುಭವಿಸುವಿರಿ ಎಂದಿದ್ದಾರೆ. ಇನ್ನೊಬ್ಬರು, ಬದುಕಿನಲ್ಲಿ ಎಲ್ಲಾ ಅನುಭವಗಳಿಗೆ ತೆರೆದುಕೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ