Video: ಗೋಲ್ಗಪ್ಪಾ ಸವಿದು ಮುದ್ದಾಗಿ ರಿಯಾಕ್ಷನ್ ಕೊಟ್ಟ ವಿದೇಶಿ ಮಹಿಳೆ
ಭಾರತೀಯ ಬೀದಿ ಬದಿ ಆಹಾರಗಳಿಗೆ ಫಿದಾ ಆಗದವರು ಯಾರಿದ್ದಾರೆ ಹೇಳಿ. ವಿದೇಶಿಗರು ಬೀದಿ ಬದಿ ಚಾಟ್ಸ್‌ಗಳನ್ನು ಬಾಯಿ ಚಪ್ಪರಿಸಿಕೊಂಡು ಸವಿಯುವುದನ್ನು ನೀವು ನೋಡಿರುತ್ತೀರಿ.ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಹೌದು, ವಿದೇಶಿ ಮಹಿಳೆಯೊಬ್ಬರು ಗೋಲ್ಗಪ್ಪಾ ಸವಿದು ಮುದ್ದಾಗಿ ರಿಯಾಕ್ಷನ್ ಕೊಟ್ಟ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಚಾಟ್ಸ್ (Chats) ಅಂತ ಬಂದಾಗ ಪಾನಿಪುರಿ, ಮಸಾಲ್‌ಪುರಿ, ಸೇವ್ ಪುರಿ, ದೈ ಪುರಿ ಹೀಗೆ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಆದರೆ ಬಹುತೇಕರ ನೆಚ್ಚಿನ ಬೀದಿಬದಿ ಆಹಾರಗಳಲ್ಲಿ ಗೋಲ್ಗಪ್ಪಾ ಕೂಡ ಒಂದು. ಈ ಚಾಟ್ಸ್ ಇದೀಗ ವಿದೇಶಿಗರ ಹೃದಯ ಗೆಲ್ಲಲು ಪ್ರಾರಂಭಿಸಿದೆ. ವಿದೇಶಿ ಮಹಿಳೆಯೂ (Foreign woman) ಗರಿಗರಿಯಾದ, ಮಸಾಲೆಯುಕ್ತ ಗೋಲ್ಗಪ್ಪಾ ಸವಿದು, ಇದರ ರುಚಿಗೆ ಫಿದಾ ಆಗಿದ್ದಾರೆ. ವಿದೇಶಿ ಮಹಿಳೆಯೂ ಗೋಲ್ಗಪ್ಪಾ ಸವಿದ ಬಳಿಕ ಕೊಟ್ಟ ರಿಯಾಕ್ಷನ್ ನೆಟ್ಟಿಗರ ಗಮನ ಸೆಳೆದಿದೆ.
@vera__india ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿದೇಶಿ ಮಹಿಳೆ ಮದುವೆ ಅಥವಾ ಇನ್ಯಾವುದೋ ಸಮಾರಂಭದಲ್ಲಿ ಭಾಗಿಯಾದಂತೆ ಕಾಣುತ್ತಿದೆ. ನೀಲಿ ಬಣ್ಣದ ಸೀರೆ ಉಟ್ಟಿದ್ದು, ಅದಕ್ಕೆ ಸರಿಹೊಂದುವ ಜ್ಯುವೆಲ್ಲರಿ ಧರಿಸಿರುವುದನ್ನು ಕಾಣಬಹುದು. ಕೈಯಲ್ಲಿ ತಟ್ಟೆಯನ್ನು ಹಿಡಿದುಕೊಂಡು ಇದೇನು ಎಂದು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಳಿ ಕೇಳುತ್ತಾನೆ. ಈ ವ್ಯಕ್ತಿ ಗೋಲ್ಗಪ್ಪಾ ಎಂದು ಹೇಳುವುದನ್ನು ಕಾಣಬಹುದು. ತದನಂತರದಲ್ಲಿ ಈ ವಿದೇಶಿ ಮಹಿಳೆ ಗೋಲ್ಗಪ್ಪಾ ಸವಿದು ನೃತ್ಯ ಮಾಡುವ ಮೂಲಕ ಮುದ್ದಾಗಿ ರಿಯಾಕ್ಷನ್ ನೀಡಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಬಾಯಿ ಚಪ್ಪರಿಸಿಕೊಂಡು ಪಾನಿ ಪುರಿ ಸವಿದ ಕೊರಿಯನ್ ಪುಟಾಣಿಗಳು
ಈ ವಿಡಿಯೋ ಹದಿನಾಲ್ಕು ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಮಹಿಳೆ ಒಂದು ಕ್ಷಣ ನಿದ್ದೆ ಮಾಡಿದ್ದಂತೆ ಕಂಡಳು ಎಂದಿದ್ದಾರೆ. ಇನ್ನೊಬ್ಬರು, ಗೋಲ್ಗಪ್ಪಾ ರುಚಿಗೆ ವಿದೇಶಿಗರು ಫುಲ್ ಫಿದಾ ಆಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ಹುಡುಗಿಯರು ಊಟ ಮಾಡುವಾಗ ತಲೆ ಅಲ್ಲಾಡಿಸಿದರೆ ಊಟ ಚೆನ್ನಾಗಿದೆ ಎಂದರ್ಥ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:27 pm, Mon, 15 December 25




