AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬಾಯಿ ಚಪ್ಪರಿಸಿಕೊಂಡು ಪಾನಿ ಪುರಿ ಸವಿದ ಕೊರಿಯನ್ ಪುಟಾಣಿಗಳು

ಪಾನಿ ಪುರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೀದಿ ಬದಿಯಲ್ಲಿ ಪಾನಿ ಪುರಿ ತಿನ್ನುವ ಖುಷಿನೇ ಬೇರೆ. ವಿದೇಶಿಗರು ಕೂಡ ಈ ಸ್ಟ್ರೀಟ್ ಫುಡ್ ರುಚಿಗೆ ಕಳೆದೇ ಹೋಗ್ತಾರೆ. ಇದೀಗ ಕೊರಿಯನ್ ಪುಟಾಣಿಗಳು ಪಾನಿಪುರಿ ಎಷ್ಟು ಇಷ್ಟ ಪಡ್ತಾರೆ ಅನ್ನೋದಕ್ಕೇ ಈ ವಿಡಿಯೋನೇ ಸಾಕ್ಷಿ. ಈ ಪುಟಾಣಿಗಳು ಪಾನಿ ಪುರಿಯನ್ನು ಬಾಯಿ ಚಪ್ಪರಿಸಿಕೊಂಡು ಸವಿದಿರುವ ವಿಡಿಯೋ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬಾಯಿ ಚಪ್ಪರಿಸಿಕೊಂಡು ಪಾನಿ ಪುರಿ ಸವಿದ ಕೊರಿಯನ್ ಪುಟಾಣಿಗಳು
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Dec 12, 2025 | 11:32 AM

Share

ಪಾನಿಪುರಿ, ಗೋಲ್ಗಪ್ಪ ಭಾರತದ ಅತ್ಯಂತ ಜನಪ್ರಿಯ ಬೀದಿಬದಿ ಆಹಾರಗಳಲ್ಲಿ ಒಂದು. ಅದ್ರಲ್ಲೂ ಈ ಪಾನಿಪುರಿ ಯುವತಿಯರ ಆಲ್ ಟೈಮ್ ಫೇವರೆಟ್ ಸ್ಟ್ರೀಟ್ ಫುಡ್ (street food) ಅಂತಾನೇ ಹೇಳ್ಬಹುದು. ಈಗಂತೂ ಮಕ್ಕಳು, ವೃದ್ಧರು ಕೂಡ ಬಾಯಿ ಚಪ್ಪರಿಸಿಕೊಂಡು ಪಾನಿ ಪುರಿ ತಿನ್ನುವುದನ್ನು ನೀವು ನೋಡಿರುತ್ತೀರಿ. ಆದರೆ ಈ ಕೊರಿಯನ್ ಮಕ್ಕಳಿಗೂ (korean children) ಪಾನಿ ಪುರಿ ಅಂದ್ರೆ ಇಷ್ಟ. ಹೌದು, ಮನೆಯಲ್ಲೇ ಪಾನಿ ಪುರಿ ತಯಾರಿಸಿ ರುಚಿ ಸವಿಯುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಈ ಪುಟಾಣಿಗಳ ಆಹಾರ ಅಭಿರುಚಿಗೆ ಫಿದಾ ಆಗಿದ್ದಾರೆ.

ವನ್ನಿ ಬ್ರದರ್ಸ್ (Wonny brothers) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಕೊರಿಯನ್ ಪುಟಾಣಿಗಳು ಪಾನಿ ಪುರಿ ಸವಿಯುವುದನ್ನು ನೋಡಬಹುದು. ಪುರಿಯನ್ನು ಮನೆಯಲ್ಲೇ ತಯಾರಿಸುತ್ತಿರುವುದನ್ನು ನೋಡಬಹುದು. ಅದಕ್ಕೆ ಆಲೂ ಸ್ಟಫಿಂಗ್ ಮಾಡಿ ಪುರಿ ಪಾನಿ ಹಾಕಿ ಪುಟಾಣಿಗಳು ಸವಿಯುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಅಜ್ಜಿಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಮುಗ್ಗರಿಸಿ ಬಿದ್ದ ಪುಟಾಣಿ

ಈ ವಿಡಿಯೋ ಒಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುದ್ದಾಗಿದೆ ಎಂದರೆ, ಮತ್ತೊಬ್ಬರು ನೀವು ರೆಸ್ಟೋರೆಂಟ್ ತೆರೆದರೆ ನಾವೇ ಫಸ್ಟ್ ಕಸ್ಟ್ಮರ್ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ