‘ಹೈಡ್ ಅಂಡ್ ಸೀಕ್ ಬೀಚ್’: ದಿನಕ್ಕೆ ಎರಡು ಬಾರಿ ಕಣ್ಮರೆಯಾಗುವ ಸಮುದ್ರದ ನೀರು
ಒಡಿಶಾದ ಚಂಡಿಪುರ ಬೀಚ್ 'ಹೈಡ್ ಅಂಡ್ ಸೀಕ್ ಬೀಚ್' ಎಂದು ಪ್ರಸಿದ್ಧವಾಗಿದೆ. ಇಲ್ಲಿ ಸಮುದ್ರದ ನೀರು ದಿನಕ್ಕೆ ಎರಡು ಬಾರಿ ಕಣ್ಮರೆಯಾಗಿ, ಮತ್ತೆ ಕಾಣಿಸಿಕೊಳ್ಳುತ್ತದೆ. ಅಲೆಗಳ ಏರಿಳಿತವೇ ಈ ಅದ್ಭುತ ವಿದ್ಯಮಾನಕ್ಕೆ ಕಾರಣ. ಬಾಲಸೋರ್ ಬಳಿ ಇರುವ ಈ ನಿಗೂಢ ಕಡಲತೀರವು ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದೊಂದು ಪ್ರಕೃತಿಯ ವಿಶಿಷ್ಟ ಅನ್ವೇಷಿಸಿ ಎಂದು ಹೇಳಲಾಗಿದೆ.

ಜಗತ್ತಿನಲ್ಲಿ ಕೆಲವೊಂದು ವಿಚಿತ್ರ ವಿಚಾರಗಳು ನಡೆಯುತ್ತದೆ. ಅದರಲ್ಲೂ ಈ ಪ್ರಕೃತಿಯ ಸೃಷ್ಟಿಯಲ್ಲಿ ಇನ್ನು ವಿಭಿನ್ನವಾಗಿರುತ್ತದೆ. ಇಲ್ಲೊಂದು ಬೀಚ್ನಲ್ಲಿ ಅದ್ಭುತವೊಂದು ನಡೆದಿದೆ. ಒಡಿಶಾದ ಚಂಡಿಪುರ ಬೀಚ್ನಲ್ಲಿ (Chandipur Beach) ಸಮುದ್ರದ ನೀರು ನೋಡು ನೋಡುತ್ತಿದ್ದಂತೆ ಮಾಯವಾಗುತ್ತದೆ. ಒಡಿಶಾದ ಬಾಲಸೋರ್ ಗ್ರಾಮದ ಬಳಿ ಇರುವ ಚಂಡಿಪುರ ಬೀಚ್ನಲ್ಲಿ ಇದೆ. ನೀರು ಕಡಿಮೆಯಾದಾಗ ಬೀಚ್ ನಿಗೂಢವಾಗಿರುತ್ತದೆ. ಸಮುದ್ರದ ಅಲೆಗಳು ಹೆಚ್ಚದಾಗ ಮತ್ತು ಕಡಿಮೆಯಾದಾಗ ಸಮುದ್ರ ವಿಚಿತ್ರ ಬದಲಾವಣೆಯನ್ನು ಪಡೆದುಕೊಳ್ಳುತ್ತದೆ. ಇಲ್ಲಿಗೆ ಈ ಕಾರಣಕ್ಕೆ ದೇಶ, ವಿದೇಶ ಜನ ಬರುತ್ತಾರೆ. ಇದು ವಿಶ್ವಾದ್ಯಂತ ಸಾಕಷ್ಟು ಪ್ರಸಿದ್ಧವಾಗಿದೆ ಮತ್ತು ಇದನ್ನು ‘ಹೈಡ್ ಅಂಡ್ ಸೀಕ್ ಬೀಚ್’ ಎಂದೂ ಕರೆಯುತ್ತಾರೆ.
ಬೀಚ್‌ನ ವಿಶಿಷ್ಟತೆ ಏನು?
ಒಡಿಶಾದ ಚಂಡಿಪುರ ಕಡಲತೀರದಲ್ಲಿ ಸಮುದ್ರದ ನೀರಿನ ಮಟ್ಟ ಕಡಿಮೆಯಾಗಲು ಅಲೆಗಳ ಏರಿಳಿತವೇ ಕಾರಣ, ಹಗಲಿನಲ್ಲಿ ಅಲೆಗಳು ಇಳಿಯುತ್ತದೆ. ಆದರೆ ಇದು ಯಾವ ಹೊತ್ತಿನಲ್ಲಿ ಇಳಿಯುತ್ತದೆ ಎಂಬುದಕ್ಕೆ ನಿಗದಿತ ಸಮಯವಿಲ್ಲ. ಚಂದ್ರನ ಬೆಳಕು ಸೇರಿದಂತೆ ಸಮುದ್ರದ ಕಣ್ಮರೆಗೆ ಸಹಾಯ ಮಾಡುವ ಅಥವಾ ಪ್ರಭಾವ ಬೀರುವ ಕೆಲವು ಅಂಶಗಳಿವೆ. ಈ ಬೀಚ್‌ನ ಹತ್ತಿರದಲ್ಲಿ ವಾಸಿಸುವ ಸ್ಥಳೀಯ ವ್ಯಕ್ತಿಗಳಿಗೆ ಈ ನಿಗೂಢ ಕಡಲತೀರದ ಬಗ್ಗೆ ಚೆನ್ನಾಗಿ ತಿಳಿದಿದೆ. ಇದು ವಿಶ್ವಾದ್ಯಂತ ಪ್ರಸಿದ್ಧವಾಗಿದೆ.
ಇದನ್ನೂ ಓದಿ: ಮೊಟ್ಟೆಯಿಂದ ಹೊರ ಬಂದ ನಾಲ್ಕು ಕಾಲಿನ ಕೋಳಿ ಮರಿ, ವೈರಲ್ ಆಯ್ತು ವಿಡಿಯೋ
ಇದು ಕಡಲತೀರವು ದೊಡ್ಡ ಕ್ಯಾಸುವಾರಿನಾ ಮರಗಳು, ಶುದ್ಧ ನೀರು ಮತ್ತು ಕರಾವಳಿ ಸಸ್ಯಗಳ ಸಮೃದ್ಧ ಸಸ್ಯವರ್ಗದಿಂದ ಆವೃತವಾಗಿದೆ. ಈ ಕಡಲತೀರಕ್ಕೆ ಒಂದು ನಿಗೂಢ ಮತ್ತು ವಿಶಿಷ್ಟ ವಿದ್ಯಮಾನವಿದೆ. ಈ ವಿದ್ಯಮಾನವು ಪ್ರತಿದಿನ ನಡೆಯುತ್ತದೆ. ಸಮುದ್ರ ಅಲೆಗಳು ಕಡಿಮೆಯಾದಾಗ ನೀರು ಕಡಿಮೆ ಆಗುತ್ತದೆ. ಸಮುದ್ರ ಅಲೆ ಹೆಚ್ಚಾದರೆ ನೀರು ಕೂಡ ಹೆಚ್ಚಾಗುತ್ತದೆ. ಇದು ದಿನಕ್ಕೆ ಸುಮಾರು ಎರಡು ಬಾರಿ ಸಂಭವಿಸುತ್ತದೆ.ಚಂಡಿಪುರ ಬೀಚ್ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿದೆ. ಇದು ಬಂಗಾಳಕೊಲ್ಲಿಯ ತೀರಕ್ಕೆ ಹತ್ತಿರವಾಗುತ್ತದೆ. 16 ಕಿಲೋಮೀಟರ್ ದೂರದಲ್ಲಿ ರೈಲು ನಿಲ್ದಾಣವು ಇದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




