AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೊಟ್ಟೆಯಿಂದ ಹೊರ ಬಂದ ನಾಲ್ಕು ಕಾಲಿನ ಕೋಳಿ ಮರಿ, ವೈರಲ್‌ ಆಯ್ತು ವಿಡಿಯೋ

ಕೋಳಿ ಮರಿಗೆ ಎರಡು ಕಾಲುಗಳು ಇರುತ್ತದೆ. ಆದರೆ ಈ ಕೋಳಿ ಮರಿಗೆ ಎರಡಲ್ಲ ನಾಲ್ಕು ಕಾಲುಗಳಿವೆ. ಇಂತಹದೊಂದು ಘಟನೆಯೂ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿದೆ. ನಾಲ್ಕು ಕಾಲುಗಳನ್ನೊಳಗೊಂಡ ಕೋಳಿಮರಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಕುರತಾದ ಸ್ಟೋರಿ ಇಲ್ಲಿದೆ.

Video: ಮೊಟ್ಟೆಯಿಂದ ಹೊರ ಬಂದ ನಾಲ್ಕು ಕಾಲಿನ ಕೋಳಿ ಮರಿ, ವೈರಲ್‌ ಆಯ್ತು ವಿಡಿಯೋ
ನಾಲ್ಕು ಕಾಲಿನ ಕೋಳಿ ಮರಿImage Credit source: Social Media
ಸಾಯಿನಂದಾ
|

Updated on:Dec 15, 2025 | 3:43 PM

Share

ಆಂಧ್ರ ಪ್ರದೇಶ, ಡಿಸೆಂಬರ್ 15: ಪ್ರಕೃತಿ ವಿಸ್ಮಯವೇ ಹಾಗೆ, ಕೆಲವೊಮ್ಮೆ ನಮ್ಮ ಕಣ್ಣುಗಳು ಕೂಡ ನಂಬಲು ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ಈ ವಿಸ್ಮಯಗಳನ್ನು ಕಂಡಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಇಲ್ಲಿಯವರೆಗೆ ನೀವು ಕೇವಲ ಎರಡು ಕಾಲಿನ ಕೋಳಿಗಳನ್ನು ಮಾತ್ರ ನೋಡಿರುತ್ತೀರಿ. ಈ ಕೋಳಿ ಮರಿಗೆ (chicks) ನಾಲ್ಕು ಕಾಲುಗಳಿವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ (Alluri Sitarama Raju District of Andhra Pradesh) ಹುಕುಂಪೇಟ ಮಂಡಲದ ಪೆಧಾ ಬುರುಗುಪುಟ್ಟುವಿನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕಿಲೋ ಅಪ್ಪರಾವ್ ಎಂಬವರ ಮನೆಯಲ್ಲಿ ನಾಲ್ಕು ಕಾಲುಗಳಿರುವ ವಿಚಿತ್ರ ಕೋಳಿ ಮರಿಯೊಂದು ಜನಿಸಿದೆ.

ಮೊಟ್ಟೆಯೊಡೆದು ಹೊರಬಂದ ನಾಲ್ಕು ಮರಿಗಳಲ್ಲಿ ಒಂದು ಮರಿ ಮಾತ್ರ ವಿಚಿತ್ರವಾಗಿ ಕಾಣುತ್ತಿತ್ತು. ಅಪ್ಪರಾವ್ ಸೂಕ್ಷ್ಮವಾಗಿ ಗಮನಿಸಿದಾಗ ಕೋಳಿ ಮರಿಯೊಂದಕ್ಕೆ ನಾಲ್ಕು ಕಾಲುಗಳು ಇರುವುದು ತಿಳಿದು ಬಂದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಮೂರು ಟ್ರೇ ಮೊಟ್ಟೆಗಳನ್ನು ತಂದಿಟ್ಟು ಟ್ರಿಪ್‌ಗೆ ಹೋಗಿದ್ದ ಫ್ಯಾಮಿಲಿ, ಮುಂದೆ ಆಗಿದ್ದೇ ಬೇರೆ

ಆದರೆ ಇದೀಗ ಈ ನಾಲ್ಕು ಕಾಲುಗಳನ್ನು ಹೊಂದಿರುವ ಈ ವಿಚಿತ್ರ ಕೋಳಿ ಮರಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಮರಿಯನ್ನು ನೋಡಲು ಸುತ್ತಮುತ್ತಲಿನ ಹಳ್ಳಿಗಳ ಜನರು ಸೇರುತ್ತಿದ್ದಾರೆ. ಈ ವಿಚಿತ್ರ ಕೋಳಿ ಮರಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Mon, 15 December 25