AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮೂರು ಟ್ರೇ ಮೊಟ್ಟೆಗಳನ್ನು ತಂದಿಟ್ಟು ಟ್ರಿಪ್‌ಗೆ ಹೋಗಿದ್ದ ಫ್ಯಾಮಿಲಿ, ಮುಂದೆ ಆಗಿದ್ದೇ ಬೇರೆ

ಸಾಮಾನ್ಯವಾಗಿ ಕೆಲವರು ತಿಂಗಳಲ್ಲಿ ಒಂದು ಅಥವಾ ಎರಡು ಟ್ರೇ ಮೊಟ್ಟೆಗಳನ್ನು ತಂದು ಇಟ್ಟುಕೊಳ್ತಾರೆ. ಈ ಕುಟುಂಬವು ಕೂಡ ಮೂರು ಟ್ರೇ ಮೊಟ್ಟೆಗಳನ್ನು ಮನೆಯಲ್ಲಿ ತಂದು ಇಟ್ಟಿದೆ. ಆ ಬಳಿಕ ಒಂದಲ್ಲ ಬರೋಬ್ಬರಿ ಎರಡು ಟ್ರಿಪ್‌ಗೆಂದು ತೆರಳಿದೆ. ಪ್ರವಾಸ ಮುಗಿಸಿ ಮನೆಗೆ ಬಂದ ಸದಸ್ಯರು ಮನೆ ತುಂಬಾ ಓಡಾಡುತ್ತಿದ್ದ ಕೋಳಿ ಮರಿಗಳನ್ನು ಕಂಡು ಶಾಕ್ ಆಗಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ.

Video: ಮೂರು ಟ್ರೇ ಮೊಟ್ಟೆಗಳನ್ನು ತಂದಿಟ್ಟು ಟ್ರಿಪ್‌ಗೆ ಹೋಗಿದ್ದ ಫ್ಯಾಮಿಲಿ, ಮುಂದೆ ಆಗಿದ್ದೇ ಬೇರೆ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on: Dec 02, 2025 | 12:59 PM

Share

ಸೋಶಿಯಲ್ ಮೀಡಿಯಾದಲ್ಲಿ(social media) ವೈರಲ್ ಆಗುವ ಕೆಲ ವಿಡಿಯೋಗಳನ್ನು ಕಂಡಾಗ ಅಚ್ಚರಿಯಾಗುತ್ತದೆ. ಇದೇನಪ್ಪಾ ಹೀಗೆ ಎಂದೇನಿಸುತ್ತದೆ. ಈ ವಿಡಿಯೋ ನೋಡಿದ ಮೇಲೂ ನಿಮಗೂ ಹಾಗೆಯೇ ಅನಿಸದೇ ಇರದು. ಹೌದು, ಕುಟುಂಬವೊಂದು ಮೂರು ಟ್ರೇನಷ್ಟು ಮೊಟ್ಟೆಗಳನ್ನು ತಂದು ಮನೆಯಲ್ಲಿಟ್ಟಿದ್ದು, ಎರಡು ತಿಂಗಳ ಕಾಲ ಟ್ರಿಪ್‌ಗೆ (trip) ಹೋಗಿದೆ. ಮನೆಗೆ ಬಂದು ನೋಡಿದ್ರೆ ಅಚ್ಚರಿಯೊಂದು ಕಾದಿತ್ತು. ಅಷ್ಟಕ್ಕೂ ಆಗಿದ್ದೇನು, ಈ ಕುರಿತಾದ ಮಾಹಿತಿ ಇಲ್ಲಿದೆ.

ಟ್ರಿಪ್‌ಗೆ ಹೊರಡುವ ಮುನ್ನ ಮೂರು ಟ್ರೇ ಮೊಟ್ಟೆಗಳನ್ನು ತಂದಿಟ್ಟಿದ್ದರಂತೆ. ಈ ಮೊಟ್ಟೆಗಳಿಂದ ಮರಿಗಳು ಹೊರಬಂದಿವೆ. ಹೌದು, ಪ್ರವಾಸ ಮುಗಿಸಿ ಬರುವ ವೇಳೆಗೆ  ಮನೆ ತುಂಬಾ ಓಡಾಡುತ್ತಿದ್ದ ಕೋಳಿ ಮರಿಗಳನ್ನು ಕಂಡು ಮನೆ ಮಂದಿ ಶಾಕ್ ಆಗಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

@RanjanSingh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಮನೆ ತುಂಬಾ ಕೋಳಿ ಮರಿಗಳು ಓಡಾಡುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ:ಟಿಫಿನ್ ಬಾಕ್ಸ್ ಕಂಡೊಡನೆ ಓಡೋಡಿ ಬಂದ ಅಳಿಲು, ಮುಂದೇನಾಯ್ತು ನೋಡಿ

ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ನಿಜವೇ ಎಂದು ಕೇಳಿದ್ದಾರೆ. ಇನ್ನೊಬ್ಬರು, ತುಂಬಾ ದುಃಖಕರವಾದ ಸಂಗತಿ ಎಂದರೆ, ಮತ್ತೊಬ್ಬರು ಮನೆಯಲ್ಲಿ ಫ್ರಿಡ್ಜ್ ಇರಲಿಲ್ಲವೇ ಎಂದು ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ