Video: ಟಿಫಿನ್ ಬಾಕ್ಸ್ ಕಂಡೊಡನೆ ಓಡೋಡಿ ಬಂದ ಅಳಿಲು, ಮುಂದೇನಾಯ್ತು ನೋಡಿ
ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಮುದ್ದಾದ ಅಳಿಲೊಂದು ವ್ಯಕ್ತಿಯೊಬ್ಬನ ಕೈಯಲ್ಲಿನ ಟಿಫಿನ್ ಬಾಕ್ಸ್ ಕಂಡೊಡನೆ ಓಡೋಡಿ ಬಂದಿದೆ. ಮುಂದೆ ಆಗಿದ್ದು ನೋಡಿದ್ರೆ ನಿಮ್ಮ ಕಣ್ಣೇ ನಂಬಲ್ಲ. ಈ ವಿಡಿಯೋ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಸಾಮಾನ್ಯವಾಗಿ ಈ ಅಳಿಲುಗಳು ಮನುಷ್ಯರನ್ನು ಕಂಡರೆ ಓಡಿಹೋಗುತ್ತವೆ. ಆದರೆ ಇಲ್ಲೊಂದು ಅಳಿಲು (squirrel) ಉದ್ಯಾನವನದಲ್ಲಿ ವ್ಯಕ್ತಿಯೊಬ್ಬ ಟಿಫಿನ್ ಬಾಕ್ಸ್ (tiffin box) ತೆರೆಯುತ್ತಿದ್ದು ಅಳಿಲು ಆಹಾರ ತಿನ್ನಲು ಪ್ರಾರಂಭಿಸಿದೆ. ಈ ಅಪರೂಪದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
devanshbarua7 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಳ್ಳಲಾದ ಈ ವಿಡಿಯೋದಲ್ಲಿ ಉದ್ಯಾನವನದಲ್ಲಿ ಕುಳಿತು ವ್ಯಕ್ತಿಯೊಬ್ಬ ಟಿಫಿನ್ ಬಾಕ್ಸ್ ತೆರೆಯುವುದನ್ನು ಕಾಣಬಹುದು. ತನ್ನ ಟಿಫಿನ್ ಬಾಕ್ಸ್ ತೆರೆಯಲು ಸಿದ್ಧನಾಗುತ್ತಿದ್ದಂತೆ, ಒಂದು ಅಳಿಲು ಉತ್ಸಾಹದಿಂದ ಆ ವ್ಯಕ್ತಿಯ ಬಳಿಗೆ ಉತ್ಸಾಹದಿಂದ ಬರುವುದನ್ನು ಕಾಣಬಹುದು. ಪುಟಾಣಿ ಅಳಿಲನ್ನು ಕಂಡು ಆ ವ್ಯಕ್ತಿಯು ಮೊದಲು ಗಾಬರಿಗೊಳ್ಳುತ್ತಾನೆ, ನಂತರದಲ್ಲಿ ನಗುತ್ತಾನೆ. ಅಳಿಲು ತನಗೂ ಊಟ ಕೊಡು ಎನ್ನುವಂತೆ ಆತನ ಮೈ ಮೇಲೆ ಅತ್ತಿಂದ ಇತ್ತ ಓಡಾಡುತ್ತದೆ. ನೆಲದ ಮೇಲೆ ಅನ್ನ ಹಾಕುತ್ತಿದ್ದಂತೆ ಈ ಅಳಿಲು ತಿನ್ನುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ತಲೆ ಸವರಿ ಪ್ರೀತಿ ತೋರಿದ ವ್ಯಕ್ತಿಯನ್ನು ಕಂಡೊಡನೆ ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ
ಈ ವಿಡಿಯೋ ನಲವತ್ತಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಊಟದ ಬಾಕ್ಸ್ ನಲ್ಲಿ ಏನಿದೆ ಎಂದು ನೋಡಲು ಅಳಿಲು ತುಂಬಾ ಉತ್ಸುಕವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ನನ್ನನ್ನು ನೋಡಿದ್ರೆ ದೂರ ಓಡುತ್ತದೆ, ನಿಮ್ಮ ಹತ್ರ ಹೇಗೆ ಬಂತು ಎಂದು ಕೇಳಿದ್ದಾರೆ. ಮತ್ತೊಬ್ಬರು, ಊಟ ಮಾಡಲು ಒಳ್ಳೆಯ ಪಾರ್ಟ್ನರ್ ಸಿಕ್ಕಿದ್ದಂಗಾಯ್ತು ಎಂದು ತಮಾಷೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




