AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಬಂಡೆಗಳಿಂದ ಆವೃತ್ತವಾದ ಈ ಬೆಟ್ಟದಲ್ಲಿ ಅಡಗಿ ಕುಳಿತಿರುವ ಕುರಿಯನ್ನು ಹುಡುಕಬಲ್ಲಿರಾ

ಸೋಶಿಯಲ್ ಮೀಡಿಯಾದಲ್ಲಿ ಕಣ್ಣು ಹಾಗೂ ಮೆದುಳಿಗೆ ಸವಾಲೊಡ್ದುವ ಕುತೂಹಲಕಾರಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದ್ದು, ಬಂಡೆಗಳಿಂದ ಆವೃತವಾದ ಬೆಟ್ಟದಲ್ಲಿ ಅಡಗಿ ಕುಳಿತಿರುವ ದೊಡ್ಡ ಕೊಂಬಿನ ಕುರಿಯನ್ನು ಹುಡುಕಬೇಕು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ನೋಡಿ.

Optical Illusion: ಬಂಡೆಗಳಿಂದ ಆವೃತ್ತವಾದ ಈ ಬೆಟ್ಟದಲ್ಲಿ ಅಡಗಿ ಕುಳಿತಿರುವ ಕುರಿಯನ್ನು ಹುಡುಕಬಲ್ಲಿರಾ
ಆಪ್ಟಿಕಲ್‌ ಇಲ್ಯೂಷನ್‌ Image Credit source: Reddit
ಸಾಯಿನಂದಾ
|

Updated on: Dec 01, 2025 | 10:08 AM

Share

ಆಪ್ಟಿಕಲ್‌ ಇಲ್ಯೂಷನ್‌ (optical illusion) ಹಾಗೂ ಬ್ರೈನ್ ಟೀಸರ್‌ನಂತಹ (brain teaser) ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಖುಷಿನೇ ಬೇರೆ. ಆದರೆ ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಇಲ್ಲೊಂದು ಕಠಿಣ ಸವಾಲು ಇದೆ. ಬಂಡೆಗಳೇ ತುಂಬಿ ಕೊಂಡಿರುವ ಈ ಬೆಟ್ಟದ ಮೇಲೆ ಕುರಿಯೊಂದು ಅಡಗಿ ಕುಳಿತಿದೆ. ನೀವು ಒಗಟು ಬಿಡಿಸೋದ್ರಲ್ಲಿ ಪಂಟಾರಾಗಿದ್ರೆ ಕೇವಲ ಹತ್ತರಿಂದ ಮೂವತ್ತು ಸೆಕೆಂಡುಗಳ ಒಳಗೆ ಈ ಪ್ರಾಣಿಯನ್ನು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.

ಈ ಚಿತ್ರದಲ್ಲಿ ಏನಿದೆ ಎಂದು ಒಮ್ಮೆ ನೋಡಿ

Optical Illusion Photo

ಫೈಂಡ್ ದಿ ಸ್ನೈಪರ್ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವು ತುಂಬಾನೇ ಟ್ರಿಕ್ಕಿಯಾಗಿದೆ. ಈ ಚಿತ್ರದಲ್ಲಿ ದೊಡ್ಡದಾದ ಕಲ್ಲು ಬಂಡೆಗಳಿಂದ ಆವೃತ್ತವಾದ ಬೆಟ್ಟದ ಇಳಿಜಾರನ್ನು ನೋಡಬಹುದು. ಆದರೆ ಈ ಬೆಟ್ಟದಲ್ಲಿ ದೊಡ್ಡ ಕೊಂಬಿನ ಕುರಿಯೊಂದು ಅಡಗಿದೆ. ಅದನ್ನು ಗುರುತಿಸುವ ಸವಾಲು ಇದೆ ನಿಮ್ಮ ಮುಂದಿದೆ. 10 ರಿಂದ 30 ಸೆಕೆಂಡುಗಳಲ್ಲಿ ನೀವು ಕುರಿಯನ್ನು ಗುರುತಿಸಿದರೆ ನಿಮ್ಮ ಮೆದುಳು ಚುರುಕಾಗಿದೆ ಎಂದರ್ಥ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Find the Bighorn Sheep byu/chalon9 inFindTheSniper

ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಬಲ್ಲಿರಾ

ಕುರಿಯನ್ನು ಹುಡುಕಲು ಸಾಧ್ಯವಾಯಿತೇ?

ಬಂಡೆ ಕಲ್ಲಿನಿಂದ ಆವೃತ್ತವಾದ ಈ ಭೂಪ್ರದೇಶದಲ್ಲಿ ಜಾಣತನದಿಂದ ಅಡಗಿರುವ ದೊಡ್ಡ ಕೊಂಬಿನ ಕುರಿಯನ್ನು ಗುರುತಿಸುವುದು ಕಷ್ಟಕರ. ಈ ಕುರಿಯ ಮೈ ಬಣ್ಣವು ಈ ಪ್ರದೇಶದಲ್ಲಿ ಬೆರೆತು ಹೋಗಿದೆ. ಕಣ್ಣು ಅಗಲಿಸಿ ಎಷ್ಟೇ ಹುಡುಕಿದರೂ ಕುರಿ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಅಡಗಿರುವ ಕುರಿಯನ್ನು ನಾವು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿ ನಿಮಗೆ ಈ ಪ್ರಾಣಿ ಕಾಣುವಂತೆ ಮಾಡಿದ್ದೇವೆ.

Optical Illusion Answer

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ