Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಬಲ್ಲಿರಾ
ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ಎರಡು ಚಿತ್ರದಲ್ಲಿನ ವ್ಯತ್ಯಾಸಗಳನ್ನು ಗುರುತಿಸಬೇಕು. ಈ ಟ್ರಿಕ್ಕಿ ಈ ಸವಾಲುಗಳನ್ನು ಎದುರಿಸಲು ನಿಮ್ಮಿಂದ ಸಾಧ್ಯವೇ. ನಿಮ್ಮ ಮೆದುಳಿಗೆ ಕೆಲಸ ನೀಡುವ ಈ ಒಗಟನ್ನು ಬಿಡಿಸಲು ಒಮ್ಮೆ ಪ್ರಯತ್ನಿಸಿ ನೋಡಿ.

ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಒಗಟಿನ ಆಟಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ. ಹೀಗಾಗಿ ಕೆಲವರು ಬಿಡುವು ಸಿಕ್ಕಾಗ ಒಗಟನ್ನು ಬಿಡಿಸುತ್ತಾ ಕುಳಿತು ಕೊಳ್ಳುತ್ತಾರೆ. ಇದೀಗ ವೈರಲ್ ಆಗಿರುವ ಈ ಚಿತ್ರಗಳು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಎಸೆಯುವಂತಿದೆ. ಈ ಒಗಟಿನ ಎರಡು ಚಿತ್ರಗಳಿವೆ. ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬೇಕು. ಹತ್ತು ಸೆಕೆಂಡುಗಳಲ್ಲಿ ಮೂರು ವ್ಯತ್ಯಾಸವನ್ನು ಗುರುತಿಸಿ ಜಾಣರು ಎನಿಸಿಕೊಳ್ಳಿ. ಒಂದು ವೇಳೆ ಈ ಒಗಟು ಬಿಡಿಸಲು ಸಾಧ್ಯವಾದರೆ ನಿಮ್ಮ ವೀಕ್ಷಣಾ ಕೌಶಲ್ಯ ಅತ್ಯುತ್ತಮವಾಗಿದೆ ಎಂದರ್ಥ.
ಈ ಚಿತ್ರದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರವನ್ನು ನೋಡಿದಾಗ ಟ್ರಿಕ್ಕಿ ಒಗಟಿನಂತೆ ಕಾಣುವುದಿಲ್ಲ. ಈ ಗ್ಯಾರೇಜ್‌ವೊಂದರಲ್ಲಿ ಎರಡು ಕಾರುಗಳು ನಿಂತಿವೆ. ನೋಡಲು ಒಂದೇ ರೀತಿ ಕಂಡರೂ, ಅದರಲ್ಲಿ ಮೂರು ವ್ಯತ್ಯಾಸಗಳು ಅಡಗಿದೆ. ನೀವು ಆ ವ್ಯತ್ಯಾಸಗಳನ್ನು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನಿಮಗೆ ಇರುವುದು ಕೆಲವೇ ಹತ್ತೇ ಹತ್ತು ಸೆಕೆಂಡುಗಳು ಮಾತ್ರ. ಸೂಕ್ಷ್ಮವಾಗಿ ಗಮನಿಸಿ, ಈ ಒಗಟು ಬಿಡಿಸಲು ಪ್ರಯತ್ನಿಸಿ.
ಇದನ್ನೂ ಓದಿ:ಅಡುಗೆ ಮನೆಯಲ್ಲಿ ಅಡಗಿರುವ ಇಲಿಯನ್ನು ಹುಡುಕಬಲ್ಲಿರಾ
ಚಿತ್ರದಲ್ಲಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತೇ?
ಈ ಚಿತ್ರದತ್ತ ಕಣ್ಣುಹಾಯಿಸಿದರೂ ಗ್ಯಾರೇಜ್‌ನಲ್ಲಿ ನಿಲ್ಲಿಸಿರುವ ಎರಡು ಕಾರುಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲವೇ. ನೂರರಲ್ಲಿ ಹತ್ತು ಜನರಿಗೆ ಮಾತ್ರ ಇಂತಹ ವ್ಯತ್ಯಾಸಗಳನ್ನು ಕಂಡುಹಿಡಿಯಲು ಸಾಧ್ಯ. ಈ ಕೆಳಗಿನ ಚಿತ್ರಗಳಲ್ಲಿ ಮೂರು ವ್ಯತ್ಯಾಸಗಳನ್ನು ಹಳದಿ ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




