Optical Illusion: ಅಡುಗೆ ಮನೆಯಲ್ಲಿ ಅಡಗಿರುವ ಇಲಿಯನ್ನು ಹುಡುಕಬಲ್ಲಿರಾ
ಮೋಜಿನ ಆಟಗಳು ಎಲ್ಲರಿಗೂ ಇಷ್ಟನೇ. ಆದರೆ ಈ ಒಗಟುಗಳನ್ನು ಬಿಡಿಸುವುದು ಅಷ್ಟೇ ಕಷ್ಟ. ಇಂತಹ ಆಪ್ಟಿಕಲ್ ಇಲ್ಯೂಷನ್ ಸೇರಿದಂತೆ ಇನ್ನಿತ್ತರ ಒಗಟಿನ ಚಿತ್ರಗಳನ್ನು ಬಿಡಿಸುವಾಗ ಹತ್ತರಲ್ಲಿ ಒಬ್ಬರು ಮಾತ್ರ ಕ್ಷಣಾರ್ಧದಲ್ಲಿ ಉತ್ತರ ಹೇಳಲು ಸಾಧ್ಯ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದರೆ, ಈ ಚಿತ್ರದತ್ತ ಕಣ್ಣಾಯಿಸಿ.

ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್‌ನಂತಹ ಟ್ರಿಕ್ಕಿ ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಇದು ಮೆದುಳಿಗೆ ವ್ಯಾಯಾಮ ನೀಡುವುದಲ್ಲದೇ, ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಪರೀಕ್ಷಿಸಲು ಸಹಾಯ ಮಾಡುತ್ತದೆ. ಇಂತಹದ್ದೇ ಕಠಿಣ ಸವಾಲಿನ ಚಿತ್ರವೊಂದು ವೈರಲ್ ಆಗಿದೆ. ಅಡುಗೆ ಮನೆಯಲ್ಲಿ ಜಾಣತನದಿಂದ ಅಡಗಿ ಕುಳಿತಿರುವ ಇಲಿಯನ್ನು ನೀವು 25 ಸೆಕೆಂಡುಗಳಲ್ಲಿ ಹುಡುಕಬೇಕು.
ಈ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಗೊಂದಲಕ್ಕೀಡು ಮಾಡಿ ನಿಮ್ಮನ್ನು ಮೋಸಗೊಳಿಸುತ್ತದೆ. ಈ ಚಿತ್ರವು ಹಾಗೆಯೇ ಇದೆ. ಇದು ಅಡುಗೆ ಮನೆಯ ಚಿತ್ರಣವನ್ನೊಳಗೊಂಡಿದೆ. ಪಾತ್ರೆಗಳು, ಮಡಿಕೆ ಹಾಗೂ ದಿನನಿತ್ಯದ ಬಳಕೆಯ ವಸ್ತುಗಳು ಇಲ್ಲಿವೆ. ಅಡುಗೆ ಮನೆಯೂ ಅಸ್ತವ್ಯಸ್ತವಾಗಿದ್ದು, ಇಲ್ಲಿ ಇಲಿಯೊಂದು ಅಡಗಿ ಕುಳಿತಿದೆ. ಇದನ್ನೂ ನೀವು 25 ಸೆಕೆಂಡುಗಳ ಒಳಗೆ ಪತ್ತೆ ಹಚ್ಚಬೇಕು. ಈ ಕಠಿಣ ಸವಾಲನ್ನು ನಿಮಗೆ ನೀಡಲಾಗಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.
ಇದನ್ನೂ ಓದಿ:ಅಡುಗೆ ಮನೆಯಲ್ಲಿ ಅಡಗಿರುವ ಮರಿ ಬೆಕ್ಕನ್ನು ಕಂಡು ಹಿಡಿಯುವಿರಾ
ಇಲಿಯನ್ನು ಹುಡುಕಲು ಸಾಧ್ಯವಾಯಿತೇ?
ಈ ಒಗಟಿನ ಆಟಗಳು ಟೈಮ್ ಪಾಸ್ ಮಾಡುವ ಜೊತೆಗೆ ಮೆದುಳಿಗೆ ಕೆಲಸ ನೀಡುತ್ತದೆ. ಈ ಚಿತ್ರವು ಕೂಡ ನಿಮ್ಮ ಮೆದುಳಿಗೆ ವ್ಯಾಯಾಮ ನೀಡಿದ್ದು, ಎಷ್ಟೇ ಸೂಕ್ಷ್ಮವಾಗಿ ಗಮನಿಸಿದ್ರೂ ಇಲಿಯನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲವೇ. ಜಾಣತನದಿಂದ ಅಡಗಿ ಕುಳಿತಿರುವ ಇಲಿಯನ್ನು ಕಂಡುಹಿಡಿಯುವುದು ಎಲ್ಲರಿಗೂ ಕಷ್ಟನೇ. ಆದರೆ ಈ ಕೆಳಗಿನ ಚಿತ್ರದಲ್ಲಿ ಇಲಿ ಎಲ್ಲಿದೆ ಎಂದು ನೀವು ನೋಡಬಹುದಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
