Viral: ಪ್ರಯಾಣದ ವೇಳೆ ಪತ್ನಿಯ ಮುಖಕ್ಕೆ ಸೂರ್ಯನ ಕಿರಣ ಸೋಕದಂತೆ ಪರದೆ ಹಿಡಿದು ಕುಳಿತ ಪತಿ
ಮಗುವಿನಂತೆ ನೋಡಿಕೊಳ್ಳುವ ಗಂಡ ಸಿಕ್ಕರೆ ಹೆಣ್ಣಿಗೆ ಅದಕ್ಕಿಂತ ಅದೃಷ್ಟ ಏನಿದೆ. ಇದಕ್ಕೆ ಸಾಕ್ಷಿಯಂತಿದೆ ಈ ದೃಶ್ಯ. ಬಸ್ಸಿನಲ್ಲಿ ಕಿಟಕಿ ಪಕ್ಕದಲ್ಲಿ ಕುಳಿತು ನಿದ್ರಿಸುತ್ತಿರುವ ಪತ್ನಿಗೆ ಸೂರ್ಯನ ಬೆಳಕು ಸೋಕದಂತೆ ಪತಿ ನೋಡಿಕೊಂಡಿದ್ದಾನೆ. ಪ್ರಯಾಣಿಕನೊಬ್ಬ ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಈ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಗಂಡನು (Husband) ಮಡದಿಯ ನೋವು ನಲಿವಿನಲ್ಲಿ ಜೊತೆಯಾಗಬೇಕು. ಕಷ್ಟದ ಸಂದರ್ಭದಲ್ಲಿ ಆಕೆಯ ಕಣ್ಣಲ್ಲಿ ನೀರು ಬರದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬ ಹೆಣ್ಣು ಕೂಡ ಪತಿಯಾದವನು ತನ್ನ ಬಗ್ಗೆ ಪ್ರೀತಿ, ಕಾಳಜಿ ವಹಿಸಬೇಕು ಎಂದು ಬಯಸುತ್ತಾಳೆ. ಈ ವ್ಯಕ್ತಿಗೆ ತನ್ನ ಪತ್ನಿ ಮೇಲೆ ಎಷ್ಟು ಕಾಳಜಿ ಇದೆ ಎನ್ನುವುದನ್ನು ಈ ಫೋಟೋವೇ ಹೇಳುತ್ತಿದೆ. ಹೌದು, ಬಸ್ಸಿನಲ್ಲಿ ಕಿಟಕಿ ಪಕ್ಕದಲ್ಲಿ ಮಲಗಿರುವ ಹೆಂಡ್ತಿಯ ಮುಖಕ್ಕೆ ಸೂರ್ಯನ ಕಿರಣ ಬೀಳದಂತೆ ತಡೆಯಲು ಪರದೆಗಳನ್ನು ಎಳೆದು ಹಿಡಿದು ವ್ಯಕ್ತಿಯೊಬ್ಬ ಕುಳಿತಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪತ್ನಿಯ ಮೇಲೆ ಈ ವ್ಯಕ್ತಿಗಿರುವ ಅತೀವ ಪ್ರೀತಿ ಕಂಡು ಬೆರಗಾಗಿದ್ದಾರೆ.
r/Twentiesindia ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಪೋಸ್ಟ್ ಹಂಚಿಕೊಂಡಿದ್ದು, ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಸೆರೆ ಹಿಡಿದ ಫೋಟೋವನ್ನು ಅಪ್ಲೋಡ್ ಮಾಡಲಾಗಿದೆ. ಈ ಪೋಸ್ಟ್‌ಗೆ ಪ್ರಯತ್ನಗಳು ನಿಜವಾಗಿಯೂ ಭಾರತೀಯ ಪುರುಷರಿಗೆ ತಮಾಷೆಯೇ? ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಜನದಟ್ಟಣೆಯಿಂದ ತುಂಬಿದ್ದ ಬಸ್ಸಿನಲ್ಲಿ ಒಬ್ಬ ವ್ಯಕ್ತಿ ನಿದ್ರಿಸುತ್ತಿರುವ ಹೆಂಡತಿಯ ಮುಖದ ಮೇಲೆ ಸೂರ್ಯನ ಬೆಳಕು ಬೀಳದಂತೆ 40 ನಿಮಿಷಗಳ ಕಾಲ ಕಿಟಕಿ ಪರದೆಗಳನ್ನು ಹಿಡಿದಿದ್ದ ಎಂದು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Efforts really a joke for Indian Men? byu/GiggityGlenn69 inTwentiesIndia
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ದೂರಾಗುವ ದಂಪತಿಗಳ ನಡುವೆ ಕಷ್ಟ ಸುಖದಲ್ಲಿ ಜತೆಯಾಗಿ ನಿಲ್ಲುವ ಇಂತಹ ದಂಪತಿಯನ್ನು ನೋಡಿದಾಗ ಖುಷಿಯಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಇದಕ್ಕಿಂತ ಹೆಣ್ಣಿಗೆ ಇನ್ನೇನು ಬೇಕು ಎಂದರೆ, ಮತ್ತೊಬ್ಬರು ಶುದ್ಧ ಪ್ರೀತಿಯನ್ನು ಸಾರ್ವಜನಿಕವಾಗಿ ನೋಡುವುದು ಅಪರೂಪ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:47 am, Sun, 30 November 25




