AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದಲ್ಲಿ ನಡೆಯುತ್ತಿದೆ ಇಂಡೋ-ಅಮೆರಿಕನ್ ಉದ್ಯಮಿಗಳ ಅದ್ದೂರಿ ವಿವಾಹ, ಟ್ರಂಪ್​​​​​​ ಮಗ ಸೇರಿದಂತೆ 40 ದೇಶಗಳ ವಿಐಪಿಗಳು ಭಾಗಿ

ರಾಜಸ್ಥಾನದ ಉದಯಪುರದಲ್ಲಿ ಇಂಡೋ-ಅಮೆರಿಕನ್ ಬಿಲಿಯನೇರ್​​ಗಳ ವಿವಾಹ ನಡೆಯುತ್ತಿದೆ. ರಾಮರಾಜು ಮಂಟೇನಾ ಪುತ್ರಿ ನೇತ್ರಾ ಮಂಟೇನಾ ವಿವಾಹ ಅದ್ಧೂರಿ ವಿವಾಹವನ್ನು ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದೆ. ಅಂಬಾನಿ ಮಗನ ಮದುವೆ ನಂತರ ಭಾರತದ ಅತ್ಯಂತ ದುಬಾರಿ ವಿವಾಹ ಇದಾಗಿದ್ದು, ಈ ಮದುವೆ ಸಮಾರಂಭದಲ್ಲಿ ಟ್ರಂಪ್ ಪುತ್ರ, 40 ದೇಶಗಳ ವಿಐಪಿಗಳು ಹಾಗೂ ಜೆನ್ನಿಫರ್ ಲೋಪೆಜ್, ಹೃತಿಕ್ ರೋಷನ್ ಸೇರಿದಂತೆ ಬಾಲಿವುಡ್ ಸ್ಟಾರ್‌ಗಳು ಭಾಗವಹಿಸುತ್ತಿದ್ದಾರೆ.

ರಾಜಸ್ಥಾನದಲ್ಲಿ ನಡೆಯುತ್ತಿದೆ ಇಂಡೋ-ಅಮೆರಿಕನ್ ಉದ್ಯಮಿಗಳ ಅದ್ದೂರಿ ವಿವಾಹ, ಟ್ರಂಪ್​​​​​​ ಮಗ ಸೇರಿದಂತೆ 40 ದೇಶಗಳ ವಿಐಪಿಗಳು ಭಾಗಿ
ಇಂಡೋ-ಅಮೆರಿಕನ್ ಉದ್ಯಮಿಗಳ ಮದುವೆ
ಅಕ್ಷಯ್​ ಪಲ್ಲಮಜಲು​​
|

Updated on:Nov 22, 2025 | 12:05 PM

Share

ರಾಜಸ್ಥಾನದ ಉದಯಪುರದಲ್ಲಿ ಇಂಡೋ-ಅಮೆರಿಕನ್ ಉದ್ಯಮಿಗಳ (Udaipur billionaire wedding) ಅದ್ದೂರಿ ವಿವಾಹ ಇಂದು (ನ.22)ನಡೆಯಲಿದೆ. ಅಂಬಾನಿಯವರ ಮಗನ ವಿವಾಹದ ನಂತರ ಭಾರತದಲ್ಲಿ ನಡೆಯುತ್ತಿರುವ ಅತ್ಯಂತ ದುಬಾರಿ ಹಾಗೂ ಅದ್ಧೂರಿ ವಿವಾಹ ಇದಾಗಿದೆ. ಈ ವಿವಾಹಕ್ಕೆ ಟ್ರಂಪ್ ಅವರ ಪುತ್ರ ಸೇರಿದಂತೆ 40 ದೇಶಗಳ ವಿಐಪಿಗಳು ಆಗಮಿಸುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ವಧುವಿನ ತಂದೆ, ಭಾರತ ಮೂಲದ ಬಿಲಿಯನೇರ್ ರಾಮರಾಜು ಮಂಟೇನಾ ಅವರು ತಮ್ಮ ಮಗಳಾದ ನೇತ್ರಾ ಮಂಟೇನಾ ಅವರನ್ನು ಅಮೆರಿಕದ ಸಾಫ್ಟ್‌ವೇರ್ ಕಂಪನಿಯ ಸಿಇಒ ವಂಶಿ ಗಡಿರಾಜು ಅವರೊಂದಿಗೆ ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್‌ನಲ್ಲಿ ಮದುವೆ ಸಮಾರಂಭ ನಡೆಸುತ್ತಿದ್ದಾರೆ.

ಈ ವಿವಾಹದಲ್ಲಿ ಅಮೆರಿಕದ ಪ್ರಮುಖ ಉದ್ಯಮಿಗಳು, ರಾಜಕೀಯ ಮುಖಂಡರು ಮತ್ತು ದೊಡ್ಡ ದೊಡ್ಡ ವಿಐವಿಗಳು ಭಾಗಿಯಾಗುತ್ತಿದ್ದಾರೆ. ಪಾಪ್ ಗಾಯಕಿ ಜೆನ್ನಿಫರ್ ಲೋಪೆಜ್, ಹೃತಿಕ್ ರೋಷನ್, ರಣಬೀರ್ ಕಪೂರ್ ಮತ್ತು ಶಾಹಿದ್ ಕಪೂರ್ ಸೇರಿದಂತೆ ಬಾಲಿವುಡ್‌ನ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಬರಲಿದ್ದು, ಇದು ಅಂಬಾನಿಯವರ ಮಗನ ವಿವಾಹದ ನಂತರ ಭಾರತದಲ್ಲಿ ನಡೆದ ಅತ್ಯಂತ ದುಬಾರಿ ವಿವಾಹ ಎಂದು ಹೇಳಲಾಗಿದೆ. ಉದಯಪುರದ ಬೀದಿ ಬೀದಿಗಳು ಈಗಾಗಲೇ ವಿದ್ಯುತ್ ದೀಪಗಳ ಬೆಳಕಿನಿಂದ ಹೊಳೆಯುತ್ತಿದೆ. ಅರಮನೆಯ ಜೊತೆಗೆ ನಗರವನ್ನು ಸುಂದರವಾಗಿ ಅಲಂಕರಿಸಲಾಗಿದೆ.

ಇದನ್ನೂ ಓದಿ: 1 ರೂ. ನೋಟು ಕೊಟ್ಟರೆ ಅರ್ಧ ಕೆಜಿ ಚಿಕನ್!

ಇಲ್ಲಿದೆ ನೋಡಿ ವಿಡಿಯೋ:

ಇನ್ನು ಈ ಮದುವೆಗೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಅಮೆರಿಕದ ಅಧ್ಯಕ್ಷ ಟ್ರಂಪ್​​​ ಅವರ ಮಗ, ತಮ್ಮ ಸ್ನೇಹಿತ ಅನಂತ್ ಅಂಬಾನಿ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ಗುಜರಾತ್‌ನ ಜಾಮ್‌ನಗರದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ದೇವಾಲಯದ ಮುಂದೆ ದಾಂಡಿಯಾ ಪ್ರರ್ದಶನ ಕೂಡ ನೀಡಲಾಗಿತ್ತು. ಅಲ್ಲಿಂದ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿ, ನಂತರ ಅನಂತ್ ಅಂಬಾನಿ ಅವರ ವಂತರಕ್ಕೂ ಭೇಟಿ ನೀಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:04 pm, Sat, 22 November 25