1 ರೂ. ನೋಟು ಕೊಟ್ಟರೆ ಅರ್ಧ ಕೆಜಿ ಚಿಕನ್!
ಕೋಳಿ ದರ ಏರುತ್ತಿದ್ದರೂ, ವಿಜಯನಗರಂನ ರಾಜಂನಲ್ಲಿರುವ ಚಿಕನ್ ಅಂಗಡಿಯ ಮಾಲೀಕ ನವೀನ್, 1 ರೂಪಾಯಿ ನೋಟಿಗೆ ಅರ್ಧ ಕೆಜಿ ಕೋಳಿ ನೀಡುವ ವೈರಲ್ ಆಫರ್ ನೀಡಿದ್ದಾರೆ. ಹಳೆಯ ನೋಟುಗಳನ್ನು ಸಂಗ್ರಹಿಸಿ ಕಲಾ ಕರಕುಶಲ ವಸ್ತುಗಳನ್ನು ತಯಾರಿಸಲು ಅವರು ಈ ವಿನೂತನ ಉಪಾಯ ಮಾಡಿದ್ದಾರೆ. ಈ ಆಫರ್ ಜನರನ್ನು ಆಕರ್ಷಿಸಿ, ವ್ಯಾಪಾರ ಭರ್ಜರಿಯಾಗಿದೆ.

ಮಾರುಕಟ್ಟೆಯಲ್ಲಿ ಕೋಳಿ ದರ ಹೆಚ್ಚುತ್ತಲೇ ಇದೆ. 1 ಕೆಜಿ ಕೋಳಿಗೆ 180 ರೂ. ಆಗಿದೆ. ಇದರ ನಡುವೆ ಚಿಕನ್ ಶಾಪ್ ಮಾಲೀಕರೊಬ್ಬರು 1 ರೂ. ಕೊಟ್ಟರೆ ಅರ್ಧ ಕೆಜಿ ಕೋಳಿ (1 Rupee chicken offer) ಸಿಗುತ್ತದೆ ಎಂದು ಬಂಪರ್ ಆಫರ್ ನೀಡಿದ್ದಾರೆ. ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಜಮ್ ಪಟ್ಟಣದ ಎಮ್ಆರ್ ಚಿಕನ್ ಸೆಂಟರ್ನ ಮಾಲೀಕ ನವೀನ ಅವರ ಈ ಕಲ್ಪನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೆಲವೊಂದು ಚಿಕನ್ ಶಾಪ್ನಲ್ಲಿ ಹೆಚ್ಚು ಕೋಳಿ ತೆಗೆದುಕೊಂಡರೆ, ರಿಯಾಯಿತಿ ದರದಲ್ಲಿ ಹೆಚ್ಚುವರಿ ಕೋಳಿ ಅಥವಾ ಕಡಿಮೆ ದರದಲ್ಲಿ ಕೋಳಿ ನೀಡುತ್ತೇವೆ ಎಂಬುದನ್ನು ಕೇಳಿರಬಹುದು, ಆದರೆ ನವೀನ ಅವರ ಚಿಕನ್ ಶಾಪ್ನಲ್ಲಿ 1 ರೂ. ಕೊಟ್ಟರೆ ಅರ್ಧ ಕೆಜಿ ಕೋಳಿ ಉಚಿತವಾಗಿ ಸಿಗುತ್ತದೆ. ಒಂದು ರೂಪಾಯಿ ನೋಟು ಕೊಟ್ಟರೆ ಅರ್ಧ ಕಿಲೋ ಕೋಳಿ ನೀಡಲಾಗುತ್ತದೆ ಎಂಬ ಆಫರ್ ಆಂಧ್ರದ ಇತರ ಜಿಲ್ಲೆಗಳಲ್ಲೂ ಚರ್ಚೆಯಾಗಿದೆ. ಇದೀಗ ಇದಕ್ಕಾಗಿ ಚಿಕನ್ ಶಾಪ್ ಮುಂದೆ ಜನರು ಕ್ಯೂ ನಿಂತಿದ್ದಾರೆ.
ಒಂದು ರೂಪಾಯಿ ನೋಟು ನೀಡಿದ್ರೆ, ಅರ್ಧ ಕೆಜಿ ಉಚಿತ ಚಿಕನ್ ನೀಡುಲಾಗುತ್ತದೆ ಎಂಬ ಆಪರ್ ನೋಡಿ ಅಂಗಡಿಯ ಮುಂದೆ ಮಹಿಳೆಯರು, ಮಕ್ಕಳು ಸರತಿ ಸಾಲಿನಲ್ಲಿ ನಿಂತಿದ್ದಾರೆ. ನವೀನ್ ಅವರು ಈ ಆಫರ್ ನೀಡುವ ಮೂಲಕ ಸ್ಥಳೀಯವಾಗಿ ಎಲ್ಲರನ್ನೂ ಆಕರ್ಷಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲೂ ಪ್ರಸಾರವಾದ ಕಾರಣ, ಜನ ಅಂಗಡಿಯತ್ತ ಧಾವಿಸಿದ್ದಾರೆ. ನವೀನ್ ಅವರು ವ್ಯಾಪಾರ ಚೆನ್ನಾಗಿ ಆಗಲಿ ಎಂದು ಈ ಆಫರ್ ನೀಡಿದ್ದರು. ಆದರೆ ಮೊದಮೊದಲು ಅವರಿಗೂ ಈ ಬಗ್ಗೆ ಭಯವಿತ್ತು. 1 ರೂಪಾಯಿ ನೋಟು ಹೆಚ್ಚಿನ ಜನರಲ್ಲಿ ಇರಲ್ಲ, ಹಾಗಾಗಿ ಈ ಆಫರ್ ಸಕಸ್ಸ್ ಆಗಲ್ಲ ಎಂದುಕೊಂಡಿದ್ದರು. ಆದರೆ ಅವರ ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ.
ಇದನ್ನೂ ಓದಿ: ನೀವು ಎಲ್ಲಾದರೂ ನಾಲ್ಕು ಕಾಲಿನ ಕೋಳಿ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ
ಇಲ್ಲಿದೆ ನೋಡಿ ವಿಡಿಯೋ:
ತಲಾ 6 ರಿಂದ 10 ಹಳೆಯ ರೂಪಾಯಿ ನೋಟುಗಳನ್ನು ತಂದು ಅರ್ಧ ಕಿಲೋ ಚಿಕನ್ ಪಡೆದುಕೊಂಡಿದ್ದಾರೆ. “ಒಂದೇ ದಿನದಲ್ಲಿ 100 ಕ್ಕೂ ಹೆಚ್ಚು ಹಳೆಯ ಒಂದು ರೂಪಾಯಿ ನೋಟುಗಳನ್ನು ಪಡೆದಿದ್ದೇನೆ. ಈ ನೋಟಿನ್ನು ಪ್ರದರ್ಶನ ಹಾಗೂ ಕಲಾ ಕರಕುಶಲಕ್ಕಾಗಿ ಬಳಸುತ್ತೇನೆ . ಅದಕ್ಕಾಗಿ ನಾನು ಈ ಆಪರ್ ನೀಡಿದ್ದೇನೆ” ಎಂದು ನವೀನ್ ಹೇಳಿದ್ದಾರೆ. ಈ ಹಿಂದೆ ಕೂಡ ಇಂತಹ ಒಂದು ಸುದ್ದಿ ವೈರಲ್ ಆಗಿತ್ತು. ಆಂಧ್ರದ ರಾಜಂನಲ್ಲಿ ಕಾರ್ತಿಕಮಾಸದ ಸಮಯದಲ್ಲಿ ತಯಾಕಾರಿ ಅಂಗಡಿಯವರು ಕೂಡ ಇಂತಹ ಆಫರ್ ನೀಡಿದ್ದರು. ಇದರಿಂದ ಅವರಿಗೆ ಹೆಚ್ಚಿನ ಲಾಭ ಕೂಡ ಆಗಿತ್ತು. ಹೀಗಾಗಿ ಕೆಲವೊಂದು ವ್ಯಾಪಾರಿಗಳು ಈ ರೀತಿಯ ವ್ಯವಹಾರ ಟ್ರಿಕ್ಸ್ಗಳನ್ನು ಉಪಯೋಗಿಸುತ್ತಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Fri, 21 November 25




