ನೀವು ಎಲ್ಲಾದರೂ ನಾಲ್ಕು ಕಾಲಿನ ಕೋಳಿ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ
ಮಹಾರಾಷ್ಟ್ರದ ಶಿಕ್ರಾಪುರ ಗ್ರಾಮದಲ್ಲಿ ನಾಲ್ಕು ಕಾಲಿನ ವಿಚಿತ್ರ ಕೋಳಿ ಪತ್ತೆಯಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಇದನ್ನು ನೋಡಲು ಬರುತ್ತಿದ್ದಾರೆ. ಇದು ಪಾಲಿಮೆಲಿಯಾ ಎಂಬ ಅಪರೂಪದ ಅನುವಂಶಿಕ ದೋಷದಿಂದ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ. ಈ ವಿಚಿತ್ರ ಘಟನೆ ಗ್ರಾಮಕ್ಕೆ ಪ್ರಸಿದ್ಧಿ ತಂದಿದೆ.

ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಶಿರೂರು ತಾಲೂಕಿನ ಶಿಕ್ರಾಪುರ ಗ್ರಾಮದಲ್ಲಿ ನಾಲ್ಕು ಕಾಲಿನ ಕೋಳಿ (four legged chicken) ಪತ್ತೆಯಾಗಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೂರಾರು ಜನ ಈ ಹಳ್ಳಿಯತ್ತ ಬಂದಿದ್ದಾರೆ. ನಾಲ್ಕು ಕಾಲಿನ ಕೋಳಿಯ ದೃಶ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಪ್ರತಿ ಮನೆಯಲ್ಲೂ ಈ ಕೋಳಿಯ ಬಗ್ಗೆ ಚರ್ಚೆಯಾಗುತ್ತಿದೆ. ಬೇರೆ ಊರಿನಿಂದಲ್ಲೂ ಈ ಕೋಳಿಯನ್ನು ನೋಡಲು ಬರುತ್ತಿದ್ದಾರೆ. ಇದೀಗ ಈ ವಿಚಿತ್ರ ಘಟನೆಯಿಂದ ಶಿಕ್ರಾಪುರ ಗ್ರಾಮ ಕೂಡ ಜನಪ್ರಿಯತೆ ಪಡೆದುಕೊಂಡಿದೆ.
ಇದೀಗ ಈ ಕೋಳಿಗೆ ನಾಲ್ಕು ಕಾಲು ಬರಲು ಕಾರಣವೇನು? ಇದು ಇಲ್ಲಿಗೆ ಹೇಗೆ ಬಂತು ಎಂಬೆಲ್ಲ ಚರ್ಚೆಗಳು ನಡೆಯುತ್ತಿದೆ. ಮಾಹಿತಿಯ ಪ್ರಕಾರ, ಶಿಕ್ರಾಪುರದ ಸಿಕಂದರ್ ಶೇಖ್ ಎಂಬುವವರ ಕೋಳಿ ಅಂಗಡಿಯಲ್ಲಿ ಈ ಕೋಳಿ ಪತ್ತೆಯಾಗಿದೆ. ಪ್ರತಿದಿನ ಬೆಳಿಗ್ಗೆ ಬಾಯ್ಲರ್ ತಳಿಯ ಕೋಳಿಗಳು ಅವರ ಅಂಗಡಿಗೆ ಮಾರಾಟಕ್ಕೆ ಬರುತ್ತವೆ. ಆದರೆ ಈ ಬಾರಿ ಬಂದಿರುವ ಈ ನಾಲ್ಕು ಕಾಲಿನ ಕೋಳಿಯಿಂದ ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕರ ಗಮನ ಸೆಳೆದಿದೆ.
ಇದನ್ನೂ ಓದಿ: 8 ಪ್ಯಾಕ್ ಬೆಳಸಿಕೊಳ್ಳಲು 5 ಕೋಟಿಯ ಇಂಜೆಕ್ಷನ್ ಪಡೆದ ಯುವಕ, ಕೊನೆಗೆ ಏನಾಯ್ತು ಗೊತ್ತಾ?
ವೈರಲ್ ಪೋಸ್ಟ್ ಇಲ್ಲಿದೆ ನೋಡಿ;
ಈ ಕೋಳಿಯಿಂದ ಸಿಕಂದರ್ ಶೇಖ್ ಅವರ ವ್ಯಾಪಾರ ಕೂಡ ಹೆಚ್ಚಾಗಿದೆ. ಇದೀಗ ಇವರ ಅಂಗಡಿಯ ಮುಂದೆ ಜನಸಂದಣಿ ಉಂಟಾಗಿದೆ. ಇನ್ನು ಈ ಬಗ್ಗೆ ಮಾತನಾಡಿದ ಸಿಕಂದರ್ ಶೇಖ್, ನಾನು ಇದೇ ಮೊದಲು ನಾಲ್ಕು ಕಾಲಿನ ಕೋಳಿಯನ್ನು ನೋಡುತ್ತಿರುವುದು. ಈ ಕೋಳಿ ಸಂಪೂರ್ಣವಾಗಿ ಬೆಳೆದಿದೆ. ನಾಲ್ಕು ಕಾಲುಗಳು ಪ್ರತ್ಯೇಕವಾಗಿದ್ದು, ಪ್ರತ್ಯೇಕ ಉಗುರುಗಳನ್ನು ಹೊಂದಿವೆ ಎಂದು ಹೇಳಿದ್ದಾರೆ. ಇದು ಪಾಲಿಮೆಲಿಯಾ ಎಂಬ ಅಪರೂಪದ ಅನುವಂಶಿಕ ದೋಷದಿಂದ ಉಂಟಾಗಿದೆ. ಪಾಲಿಮೆಲಿಯಾ ಎಂದರೆ ಜನ್ಮಜಾತ ದೋಷ, ಈ ದೋಷದಿಂದ ಒಂದು ಪ್ರಾಣಿ ಅಥವಾ ಮನುಷ್ಯ ಎರಡಕ್ಕಿಂತ ಹೆಚ್ಚಿನ ಕೈಕಾಲುಗಳನ್ನು ಹೊಂದಿರುತ್ತದೆ. ಈ ಕಾಲುಗಳು ಯಾವುದೇ ಚಲನವಲನಗಳನ್ನು ಹೊಂದಿರುವುದಿಲ್ಲ ಎಂದು ನಿವೃತ್ತ ಸಹಾಯಕ ಪಶುವೈದ್ಯಕೀಯ ಆಯುಕ್ತ ರಾಜೇಂದ್ರ ತ್ರಿಂಬಕ್ ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




