8 ಪ್ಯಾಕ್ ಬೆಳಸಿಕೊಳ್ಳಲು 5 ಕೋಟಿಯ ಇಂಜೆಕ್ಷನ್ ಪಡೆದ ಯುವಕ, ಕೊನೆಗೆ ಏನಾಯ್ತು ಗೊತ್ತಾ?
ಚೀನಾದ ಯುವಕನೊಬ್ಬ 8 ಪ್ಯಾಕ್ ಆಬ್ಸ್ ಪಡೆಯಲು ಹೈಲುರಾನಿಕ್ ಆಸಿಡ್ ಇಂಜೆಕ್ಷನ್‌ಗಳಿಗಾಗಿ 5 ಕೋಟಿ ರೂ. ಖರ್ಚು ಮಾಡಿದ್ದಾನೆ. ಜಿಮ್ ಇಲ್ಲದೆ ಕೃತಕ ಸ್ನಾಯುಗಳನ್ನು ಬೆಳೆಸಿಕೊಳ್ಳಲು ಇದನ್ನು ಬಳಸಿದ್ದಾನೆ. ಆದರೆ, ವೈದ್ಯರ ಪ್ರಕಾರ ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಸೋಂಕು ಮತ್ತು ರಕ್ತ ಹೆಪ್ಪುಗಟ್ಟುವಿಕೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಅತಿಯಾದ ವರ್ಕೌಟ್, ಪ್ರೋಟೀನ್ ಸೇವನೆಯ ಬದಲು ಇಂತಹ ಅಡ್ಡದಾರಿ ಅಪಾಯಕಾರಿ.

ಜಿಮ್ಗೆ ಹೋಗುವುದು ಫಿಟ್ (Hyaluronic Acid) ಆಗಿರಬೇಕು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ. ಇನ್ನು ಕೆಲವರು ದೇಹವನ್ನು ಸಿಕ್ಸ್ ಪ್ಯಾಕ್ ಮಾಡಿಕೊಳ್ಳಬೇಕು ಎಂದು ಹೋಗುತ್ತಾರೆ. ಹೀಗೆ ವರ್ಷ ಪೂರ್ತಿ ವರ್ಕ್ಔಟ್ ಮಾಡಿ, ಬೆವರು ಸುರಿಸಿ ಒಂದು ಹಂತಕ್ಕೆ ಫಿಟ್ ಆಗಿರುವ ದೇಹವನ್ನು ಬೆಳೆಸಿಕೊಳ್ಳುತ್ತಾರೆ. ಇನ್ನು ಕೆಲವರು ಆಸೆಯಿಂದ ಅತಿಯಾದ ವರ್ಕ್ಔಟ್, ಪ್ರೋಟೀನ್ ಶೇಕ್ಗಳನ್ನು ಕುಡಿಯುತ್ತಾರೆ. ಆದರೆ ಇಲ್ಲೊಬ್ಬ ಯುವಕ ಸಿಕ್ಸ್ ಪ್ಯಾಕ್ ಅಲ್ಲ ಎಂಟು ಪ್ಯಾಕ್ ಮಾಡಿಕೊಳ್ಳಲು ಕೋಟಿ ಕೋಟಿ ಖರ್ಚು ಮಾಡಿದ್ದಾನೆ. ತಕ್ಷಣವೇ 8 ಪ್ಯಾಕ್ ಬೆಳೆಸಿಕೊಳ್ಳಲು 5 ಕೋಟಿ ರೂ. ಖರ್ಚು ಮಾಡಿ ಆಸಿಡ್ ಇಂಜೆಕ್ಷನ್ ಪಡೆದುಕೊಂಡಿದ್ದಾನೆ. ವೈದ್ಯಯೊಬ್ಬರ ಸಹಾಯ ಪಡೆದು 8 ಪ್ಯಾಕ್‌ಗಳನ್ನು ಬೆಳೆಸಿಕೊಳ್ಳುವ ಹೈಲುರಾನಿಕ್ ಆಮ್ಲ ಇಂಜೆಕ್ಷನ್ಗಾಗಿ ಚೀನಾದ ಯುವಕನೊಬ್ಬ 5 ಕೋಟಿ ರೂ. ಖರ್ಚು ಮಾಡಿದ್ದಾನೆ ಎಂದು ಹೇಳಲಾಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಈ ಹೈಲುರಾನಿಕ್ ಆಮ್ಲವು ದೇಹದ ಚರ್ಮ ಮತ್ತು ಕೀಲುಗಳನ್ನು ನೈಸರ್ಗಿಕವಾಗಿ ಕಾಣುವಂತೆ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಕಾಸ್ಮೆಟಿಕ್ ಫಿಲ್ಲರ್‌ಗಳಲ್ಲಿ ಬಳಸಲಾಗುತ್ತದೆ. ಅಂದರೆ ಮುಖದ ಸೌಂದರ್ಯ ಹೆಚ್ಚಿಸಲು ಇದು ಬಳಕೆ ಆಗುತ್ತದೆ. ಆದರೆ ಈ ಯುವಕ ಅದನ್ನು ದೇಹದಲ್ಲಿ ಬಲಾಢ್ಯ ಸ್ನಾಯುಗಳು ಎದ್ದು ಕಾಣಲು ಬಳಸಿದ್ದಾನೆ. ಪ್ರತಿ ಇಂಜೆಕ್ಷನ್‌ಗೆ ಕೇವಲ 1-2 ಮಿಲಿ ಆಮ್ಲ ಬೇಕಾಗುತ್ತದೆ. ಇದು ದೇಹದ ಒಂದು ಅಂಗಾಂಶ ಬೆಳೆಸಿಕೊಳ್ಳಲು ಅಥವಾ ಊದಿಕೊಳ್ಳಲು ಹಾಗೂ ಕೃತಕ ಸ್ನಾಯು ಬೆಳೆಯಲು ಸಹಕಾರಿಯಾಗಿದೆ. ಇದಕ್ಕೆ ಜಿಮ್, ವ್ಯಾಯಾಮ ಬೇಕಾಗಿಲ್ಲ. ಕೇವಲ ಒಂದು ಇಂಜೆಕ್ಷನ್ನಲ್ಲಿ ದೇಹ ಫಿಟ್ ಆಗಿರುತ್ತದೆ. ಈ ಹಿಂದೆ ಇಂತಹದೇ ಒಂದು ಸುದ್ದಿ ಭಾರೀ ವೈರಲ್ ಆಗಿತ್ತು. ಭುಜಗಳು, ಕಾಲರ್‌ಬೋನ್‌ಗಳು, ಎದೆ ಮತ್ತು ಹೊಟ್ಟೆಗಾಗಿ 40ಕ್ಕೂ ಹೆಚ್ಚು ಹೈಲುರಾನಿಕ್ ಆಮ್ಲದ ಚುಚ್ಚುಮದ್ದಗಳನ್ನು ಪಡೆದುಕೊಳ್ಳಲಾಗುತ್ತದೆ. ಇದರಿಂದ ದೇಹವು ಶೇಕಡಾ 20 ರಷ್ಟು ಆಮ್ಲದಿಂದ ತುಂಬಿದೆ.
8 ಪ್ಯಾಕ್ ಮಾಡಿಕೊಳ್ಳುವುದು ಈ ಯುವಕನ ಗುರಿ:
ಈ ಯುವಕನಿಗೆ ಹೇಗಾದರೂ 8 ಪ್ಯಾಕ್ ಮಾಡಿಕೊಳ್ಳಬೇಕು ಎಂಬ ಗುರಿ ಇತ್ತು. ಒಟ್ಟು 10,000 ಡೋಸ್‌ಗಳನ್ನು ಪಡೆದುಕೊಳ್ಳುತ್ತಿದ್ದ, ಈಗಾಗಲೇ 40 ಪ್ರತಿಶತದಷ್ಟು ಕೆಲಸ ಮುಗಿದಿದೆ ಎಂದು ಹೇಳಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಶರ್ಟ್ ತೆಗೆದು, ತನ್ನ ಎಂಟು ಪ್ಯಾಕ್‌ಗಳನ್ನು ಪ್ರದರ್ಶಿಸಿದ್ದಾನೆ. ಇದರ ಜತೆಗೆ ನನ್ನ ಡೋಸ್ ಪರಿಪೂರ್ಣವಾಗಿದೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಂತೆ ಮೈಸೂರು ಬದಲಾಗುತ್ತಿದೆ: ಹೊಸ ಚರ್ಚೆಗೆ ನಾಂದಿ ಹಾಡಿದ “ಮೈಸೂರು ಹೊರವಲಯ” ಪೋಸ್ಟ್
ಇದು ದೇಹದ ಆರೋಗ್ಯಕ್ಕೆ ಅಪಾಯಕಾರಿ:
ವೈದ್ಯರು ಹೇಳಿರುವ ಪ್ರಕಾರ ಇದು ಅಪಾಯಕಾರಿ, ದೇಹದ ಸಾಮಾರ್ಥ್ಯಕ್ಕೆ ಹೊಂದಿಕೊಳ್ಳುವಂತೆ ಇದನ್ನು ಮಾಡಿಕೊಳ್ಳಬೇಕು. ಒಂದು ವೇಳೆ ಇದು ಅತಿಯಾದರೆ ಜೀವಕ್ಕೆ ಅಪಾಯ ಎಂದು ಹೇಳಿದ್ದಾರೆ. ಇದು ಸೋಂಕುಗಳು, ರಕ್ತ ಹೆಪ್ಪುಗಟ್ಟುವಿಕೆ ಕಾರಣವಾಗಬಹುದು. ಇದನ್ನು ತುಂಬಾ ಎಚ್ಚರಿಕೆಯಿಂದ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Wed, 19 November 25




