ಬೆಂಗಳೂರಿನಂತೆ ಮೈಸೂರು ಬದಲಾಗುತ್ತಿದೆ: ಹೊಸ ಚರ್ಚೆಗೆ ನಾಂದಿ ಹಾಡಿದ “ಮೈಸೂರು ಹೊರವಲಯ” ಪೋಸ್ಟ್
ಮೈಸೂರು ಬೆಂಗಳೂರಿನಂತೆ ಬದಲಾಗುತ್ತಿದೆಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ನೆಟ್ಟಿಗರು ಮೈಸೂರಿನ ಮೂಲ ಸಂಸ್ಕೃತಿ, ಭಾಷೆ ನಶಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೊರ ರಾಜ್ಯದ ವಲಸಿಗರ ಹೆಚ್ಚಳ ಮತ್ತು ರಿಯಲ್ ಎಸ್ಟೇಟ್ ಹೂಡಿಕೆ ಇದಕ್ಕೆ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ. ಮೈಸೂರು ಹೊರವಲಯವಾಗುವ ಕುರಿತು ತೀವ್ರ ಚರ್ಚೆ ಸೃಷ್ಟಿಸಿದೆ.

ಬೆಂಗಳೂರಿನಂತೆ ಮೈಸೂರು ಕೂಡ ಬದಲಾಗುತ್ತಿದೆ. ಮೈಸೂರು (mysore cultural change) ತನ್ನ ಮೂಲ ವಿಚಾರಗಳನ್ನು ಕಳೆದುಕೊಳ್ಳುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಈಗ “ಮೈಸೂರು ಹೊರವಲಯ” ಆಗುತ್ತಿದೆ ಎಂಬ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ನಗರದಲ್ಲಿ ಹೊರ ರಾಜ್ಯ, ದೇಶದ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಮೂಲ ನಿವಾಸಿಗಳು ಮೈಸೂರಿನಲ್ಲಿ ಇಲ್ಲ. ಹೆಚ್ಚಾಗಿ ಕನ್ನಡ ಮಾತನಾಡುವವರ ಸಂಖ್ಯೆ ಮೈಸೂರಿನಲ್ಲಿ ಕಡಿಮೆಯಾಗಿದೆ. ಮೈಸೂರು ಬೆಂಗಳೂರಿನಂತೆ ಭಾಷೆ, ವಿಚಾರಧಾರೆಗಳಿಂದ ಬದಲಾಗುತ್ತಿದೆ ಎಂದು ಹೇಳಲಾಗಿದೆ.
ಮೈಸೂರು ಬೆಂಗಳೂರಿನಂತೆ ಮಹಾನಗರವಾಗಿ ರೂಪಾಂತರಗೊಳ್ಳುತ್ತಿದೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದು ವೈರಲ್ ಆಗಿದೆ. ಇದೀಗ ಈ ಪೋಸ್ಟ್ ಮೈಸೂರು ಹೊರವಲಯ ಆಗುತ್ತಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಮೈಸೂರು ತನ್ನ ಮೂಲ ವಿಚಾರಗಳನ್ನು, ಭಾಷೆಗಳು, ಸಂಸ್ಕೃತಿಗಳನ್ನು ಬಹಿಷ್ಕಾರ ಮಾಡಿದಂತೆ ಕಾಣುತ್ತಿದೆ. ಬೆಂಗಳೂರಿನ ಸ್ಥಿತಿ ಮೈಸೂರಿಗೂ ಬರುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಬೇರೆ ಬೇರೆ ಭಾಷೆಯ ಜನ, ಅವರ ಸಂಸ್ಕೃತಿಗಳ ಆಚರಣೆ, ಹೀಗೆ ಅನೇಕ ವಿಚಾರಗಳಿಂದ ಬೆಂಗಳೂರು ಬದಲಾಗಿದೆ. ಅದೇ ರೀತಿ ಮೈಸೂರಿನಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಆದರೆ ಬೆಂಗಳೂರು ಬದಲಾವಣೆಯಾಗಲು ಉದ್ಯೋಗ, ವ್ಯಾಪಕ ತಂತ್ರಜ್ಞಾನ ಕಾರಣ, ಇದರ ಜತೆಗೆ ದೊಡ್ಡ ದೊಡ್ಡ ಐಟಿ ಕಂಪನಿಗಳು ಬೆಂಗಳೂರಿನಲ್ಲಿದೆ. ಹಾಗಾಗಿ ಬೇರೆ ಬೇರೆ ದೇಶದ ಹಾಗೂ ರಾಜ್ಯದ ಜನರು ಇಲ್ಲಿಗೆ ಬಂದಿದ್ದಾರೆ. ಆದರೆ ಮೈಸೂರು ಯಾಕೆ ಈ ರೀತಿ ಬದಲಾಗುತ್ತಿದೆ. ಅಲ್ಲಿ ಯಾವುದೇ ದೊಡ್ಡ ದೊಡ್ಡ ಕಂಪನಿಗಳು ಇಲ್ಲ. ಹಾಗಾದರೆ ಮೈಸೂರು ಬದಲಾವಣೆ ಕಾಣಲು ವಲಸೆ ಕಾರಣವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಜಿಡಿಪಿ ಬೆಂಗಳೂರಿನ ರಸ್ತೆಯಲ್ಲಿ, ರೋಲ್ಸ್ ರಾಯ್ಸ್ ಕಾನ್ವೊಯ್ ವಿಡಿಯೋ ವೈರಲ್
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
The pace of “Outsidification” of Mysore is really surprising!😵
The city has moved from being a proper Kannada population based retirement city- to Metropolitan like Bangalore already!
I understand Bangalore provided jobs, but what Mysore is providing for that much migration?🤔
— NEO (@normaly_abnorml) November 17, 2025
ಮೈಸೂರು ಬೆಂಗಳೂರಿನಂತೆ ಬದಲಾವಣೆಯಾಗಲು ಎಕ್ಸ್ನಲ್ಲಿ ನೆಟ್ಟಿಗರು ಕೆಲವೊಂದು ಕಾರಣಗಳನ್ನು ನೀಡಿದ್ದಾರೆ, ಕೆಲವರು, ಮೈಸೂರು ಜಾಗತಿಕವಾಗಿ ತೆರೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಇನ್ನು ಕೆಲವರು, ದೊಡ್ಡ ಪ್ರಮಾಣದ ರಿಯಲ್ ಎಸ್ಟೇಟ್ ಹೂಡಿಕೆ ಹಾಗೂ ಅದರಲ್ಲಿ ಕೆಲಸ ಮಾಡಲು ಉತ್ತರ ಭಾರತೀಯರನ್ನು ಆಕರ್ಷಿಸುತ್ತಿದೆ ಎಂದು ಹೇಳಿದ್ದಾರೆ. ಒಬ್ಬರು ಹೀಗೆ ಕಮೆಂಟ್ ಮಾಡಿದ್ದಾರೆ, ನಗರದ ಸಂಪರ್ಕದತ್ತ ಗಮನಸೆಳೆಯುತ್ತಿದೆ. ಮೈಸೂರಿನಲ್ಲಿ ರೈಲ್ವೆ ಸಂಪರ್ಕ ಚೆನ್ನಾಗಿದೆ. ಈ ಕಾರಣಕ್ಕೆ ಬೇರೆ ಬೇರೆ ರಾಜ್ಯಗಳನ್ನು ಸಂಪರ್ಕ ಮಾಡಲು ಮೈಸೂರು ಸುಲಭ ದಾರಿ ಎಂಬುದು ಅವರಿಗೆ ತಿಳಿದಿದೆ ಎಂದು ಹೇಳಿದ್ದಾರೆ. ಬೆಂಗಳೂರಿನ ಅಶುದ್ಧ ಗಾಳಿ, ಕೆಲಸದ ಒತ್ತಡ, ಮೂಲಸೌಕರ್ಯಗಳ ಕೊರತೆಯಿಂದ ಅದೆಷ್ಟೋ ಉದ್ಯಮಿಗಳು ಮೈಸೂರು ಬೆಸ್ಟ್ ಎಂದು ಹೇಳುತ್ತಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Tue, 18 November 25




