AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಅಂಗಡಿಗೆ ನುಗ್ಗಿದ ಕಳ್ಳನ ಮನಸ್ಸನ್ನು ಗೆದ್ದು ತಂದೆಯನ್ನು ಕಾಪಾಡಿದ ಪುಟಾಣಿ

ತಂದೆ ಮಗಳ ಬಾಂಧವ್ಯ ಸಾರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ತಂದೆಗೆ ಕಷ್ಟ ಎಂದರೆ ಜತೆಗೆ ನಿಲ್ಲುವ ಮಗಳು ತನ್ನ ಪಾಲಿಗೆ ಪ್ರಪಂಚವಾಗಿರುತ್ತಾಳೆ. ಇಲ್ಲೊಬ್ಬಳು ಮಗಳು ತನ್ನ ತಂದೆಯನ್ನು ಕಳ್ಳನಿಂದ ಕಾಪಾಡಿದ್ದಾಳೆ. ಅಂಗಡಿಗೆ ಬಂದ ಕಳ್ಳನು ತನ್ನ ತಂದೆಗೆ ಹಿಗ್ಗಾಮುಗ್ಗಾ ಹೊಡೆದು ಹಣ ದೋಚಲು ಮುಂದಾಗಿದ್ದು, ಆದರೆ ಈ ಪುಟಾಣಿಯ ಮುಗ್ಧತೆಯೂ ಕಳ್ಳನ ಮನಸ್ಸನ್ನೇ ಬದಲಾಯಿಸಿದೆ. ಈ ಹೃದಯಸ್ಪರ್ಶಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದಿದೆ.

Video: ಅಂಗಡಿಗೆ ನುಗ್ಗಿದ ಕಳ್ಳನ ಮನಸ್ಸನ್ನು ಗೆದ್ದು ತಂದೆಯನ್ನು ಕಾಪಾಡಿದ ಪುಟಾಣಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Nov 19, 2025 | 11:41 AM

Share

ಪುಟಾಣಿಗಳು (Little kids) ಏನು ಮಾಡಿದ್ರು ಕೂಡ ಚೆಂದನೇ. ಈ ಪುಟಾಣಿಗಳು ಗೊತ್ತಿಲ್ಲದೇ ಮಾಡುವ ಮುಗ್ಧ ಕೆಲಸಗಳನ್ನು ಕಂಡಾಗ ಅಪ್ಪಿ ಮುದ್ದಾಡಬೇಕು ಎನಿಸುತ್ತದೆ. ಅಂಗಡಿ ನುಗ್ಗಿದ ಕಳ್ಳನು (thief) ಕೂಡ ಪುಟಾಣಿಯನ್ನು ಅಪ್ಪಿ ಮುದ್ದಾಡಿದ್ದಾನೆ. ಕಳ್ಳರು ಈ ರೀತಿನೂ ಇರ್ತಾರಾ ಎಂದೆನಿಸಬಹುದು. ಇದಕ್ಕೆ ಕಾರಣವಾಗಿದ್ದು ಈ ಪುಟಾಣಿಯ ಮುಗ್ಧತೆ. ಕಳ್ಳನೊಬ್ಬನು ಅಂಗಡಿಗೆ ನುಗ್ಗುತ್ತಿದ್ದಂತೆ ಪುಟಾಣಿಯೂ ತನ್ನ ತಂದೆಯೊಂದಿಗೆ ಕುಳಿತು ಆತ ಏನು ಮಾಡುತ್ತಿರುವುದನ್ನು ನೋಡಿದ್ದಾಳೆ. ಈ ಪುಟಾಣಿಯ ತಂದೆ  ಅಸಹಾಯಕ ಸ್ಥಿತಿಯಲ್ಲಿದ್ದು ತನ್ನ ಕೈಯಲ್ಲಿದ್ದ ಹಣವೆಲ್ಲವನ್ನೂ ಕಳ್ಳನ ಮುಂದೆ ಇಟ್ಟಿದ್ದಾನೆ. ಇದನ್ನೇ ನೋಡುತ್ತಿದ್ದ ಪುಟಾಣಿ ಮಾಡಿದ ಕೆಲಸದಿಂದ ದೋಚಿದ್ದ ಹಣವನ್ನು ಬಿಟ್ಟು ವಾಪಸ್ಸು ಹೋಗಲು ಮುಂದಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ.

Abbottabad ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತನ್ನ ತಂದೆಯೊಂದಿಗೆ ಅಂಗಡಿಯ ಕುರ್ಚಿಯನ್ನು ಕುಳಿತುಕೊಂಡಿದ್ದಾಳೆ. ಅಂಗಡಿಯೊಳಗೆ ಮಾಸ್ಕ್ ಹಾಕಿಕೊಂಡು ಕಳ್ಳನೊಬ್ಬನು ನುಗ್ಗುತ್ತಾನೆ. ಡ್ರಾಯರ್‌ನಲ್ಲಿದ್ದ ದುಡ್ಡು ಕೊಡುವಂತೆ ಹೊಡೆದು ವ್ಯಕ್ತಿಗೆ ಬೆದರಿಕೆ ಹಾಕುತ್ತಾನೆ. ಈ ವೇಳೆಯಲ್ಲಿ ಅಂಗಡಿ ಮಾಲಿಕ ಡ್ರಾಯರ್‌ನಲ್ಲಿದ್ದ ದುಡ್ಡನ್ನೆಲ್ಲಾ ಕೊಡುತ್ತಾನೆ. ತನ್ನ ತಂದೆಯನ್ನು ಹೊಡೆಯುವುದನ್ನು ಪುಟಾಣಿಯೂ ಗಮನಿಸಿದ್ದಾಳೆ. ಅಪ್ಪನು ಕಳ್ಳನಿಗೆ ಕೊಡುತ್ತಿದ್ದಂತೆ ತಾನು ತನ್ನ ಕೈಯಲ್ಲಿದ್ದ ಲಾಲಿಪಾಪ್ ಕಳ್ಳನಿಗೆ ನೀಡುತ್ತಾಳೆ. ಈ ಪುಟಾಣಿ ಮಾಡಿದ ಕೆಲಸ ನೋಡಿದ ಕಳ್ಳನು ಮನಸ್ಸೇ ಬದಲಾಗಿದೆ. ಅಂಗಡಿ ಮಾಲೀಕನಿಂದ ಕಸಿದುಕೊಂಡ ದುಡ್ಡನ್ನು ಟೇಬಲ್ ಮೇಲಿಟ್ಟು ಈ ಪುಟಾಣಿಗೆ ಮುತ್ತು ಕೊಟ್ಟು ಕಳ್ಳನು ಅಲ್ಲಿಂದ ಹೋಗುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

View this post on Instagram

A post shared by Abbottabad (@abbottabadd)

ಇದನ್ನೂ ಓದಿ:ಈವಾಗ್ಲೇ ಹಿಂಗೇ, ಮುಂದೆ ಹೆಂಗೋ; ನಡು ರಸ್ತೆಯಲ್ಲೇ ಜಗಳಕ್ಕಿಳಿದ ಪುಟಾಣಿಗಳು

ಈ ವಿಡಿಯೋ ಮೂವತ್ತೇಳು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಮಗಳು ಇದ್ದರೆ ತಂದೆಗೆ ಧೈರ್ಯ ಎಂದಿದ್ದಾರೆ. ಇನ್ನೊಬ್ಬರು, ಮಕ್ಕಳ ಮುಗ್ಧತೆ ತುಂಬಿದ ಕೆಲಸವೇ ಹಾಗೆ, ಬೇಗನೆ ಎಲ್ಲರನ್ನು ಸೆಳೆದು ಬಿಡುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಕಳ್ಳನು ಇನ್ನೆಂದು ಕಳ್ಳತನ ಮಾಡಲ್ಲ ಕಾಣಿಸುತ್ತೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?