AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸಾವಿರ ಕಥೆ ಹೇಳುತ್ತೆ ಹೊಯ್ಸಳೇಶ್ವರ ದೇವಾಲಯದ ಶಿಲ್ಪಗಳು

900 ವರ್ಷಗಳಷ್ಟು ಹಳೆಯದಾದ ಹೊಯ್ಸಳೇಶ್ವರ ಹಾಗೂ ಚೆನ್ನಕೇಶವ ದೇವಾಲಯದಲ್ಲಿ ಕೆತ್ತಲಾದ ಶಿಲ್ಪಗಳು ಒಂದೊಂದು ಕಥೆಯನ್ನು ಹೇಳುತ್ತವೆ. ಹೌದು, ಹೊಯ್ಸಳ ದೇವಸ್ಥಾನವು ಶೈವ ಸ್ಮಾರಕವಾಗಿದ್ದರೂ ವೈಷ್ಣವ, ಹಿಂದೂ ಧರ್ಮದ ಸಂಪ್ರದಾಯ ಹಾಗೂ ಜೈನ ಧರ್ಮದ ಚಿತ್ರಗಳನ್ನು ಒಳಗೊಂಡಿರುವುದು ವಿಶೇಷ. ಇತಿಹಾಸ ಕೆದಕುತ್ತಾ ಹೋದಂತೆಲ್ಲಾ ನಾವೇ ಆ ಕಾಲಘಟ್ಟದಲ್ಲಿ ಇದ್ದೇವೆ ಎಂದೆನಿಸುವ ವಿಡಿಯೋವೊಂದು ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸಾವಿರ ಕಥೆ ಹೇಳುತ್ತೆ ಹೊಯ್ಸಳೇಶ್ವರ ದೇವಾಲಯದ ಶಿಲ್ಪಗಳು
ಹೊಯ್ಸಳೇಶ್ವರ ದೇವಾಲಯದ ಶಿಲ್ಪಗಳ ವಿಶೇಷತೆImage Credit source: Facebook
ಸಾಯಿನಂದಾ
| Edited By: |

Updated on: Nov 19, 2025 | 2:39 PM

Share

ನಮ್ಮ ದೇಶದಲ್ಲಿ ಪುರಾತನವಾದ ದೇವಾಲಯಗಳು (Historical temple) ಸಾಕಷ್ಟು ಇವೆ. ಆ ಕಾಲದಲ್ಲಿ ನಿರ್ಮಾಣ ಮಾಡುತ್ತಿದ್ದ ಕೋಟೆಗಳು ಸೇರಿದಂತೆ ದೇವಾಲಯಗಳೆಲ್ಲಾ ವಿಶೇಷತೆಯಿಂದ ಕೂಡಿದ್ದವು. ಇದಕ್ಕೆ ಸಾಕ್ಷಿಯೆನ್ನುವಂತಿದೆ ಶಿವನಿಗೆ ಸಮರ್ಪಿತವಾಗಿರುವ ಈ ಹೊಯ್ಸಳೇಶ್ವರ ದೇವಾಲಯ (Hoysaleshwara temple). ಟೂರಿಸ್ಟ್ ಗೈಡ್ ಒಬ್ಬರು ಈ ಐತಿಹಾಸಿಕ ತಾಣಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಇಲ್ಲಿನ ದೇವಾಲಯದಲ್ಲಿನ ಶಿಲ್ಪಗಳು, ಕೆತ್ತನೆಯ ವಿಶೇಷತೆಯನ್ನು ವಿವರಿಸಿದ್ದಾರೆ. ಇಲ್ಲಿನ ಶಿಲ್ಪಗಳು ಅಮೋಘವಾದುದು. ದೇವಾಲಯವನ್ನು ಬಳಪದ ಕಲ್ಲುಗಳ ಬಳಕೆಯಿಂದ ನಿರ್ಮಾಣ ಮಾಡಲಾಗಿದೆ. ಕಲ್ಲಿನ ಈ ವಿಶೇಷ ಗುಣದಿಂದಲೇ ಹೊಯ್ಸಳರ ದೇವಾಲಯಗಳಲ್ಲಿ ಸೂಕ್ಷ್ಮ ಕಸೂರಿ ಕೆತ್ತನೆಯು ಬಹಳ ಆಕರ್ಷಕ ಎಂದಿದ್ದಾರೆ. ಈ ಪುರಾಣದ ಕಥೆಗಳು ಹಾಗೂ ಇತಿಹಾಸವನ್ನು ತೆರೆದಿಡುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Dr. Ayur Harish AL’s Creativity ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಟೂರಿಸ್ಟ್ ಗೈಡ್ ಒಬ್ಬರು, ಹೊಯ್ಸಳೇಶ್ವರ ದೇವಾಲಯದ ಶಿಲ್ಪ ಕಲೆಗಳು ಹಾಗೂ ಕೆತ್ತನೆಯನ್ನು ಬಹಳ ಸೊಗಸಾಗಿ ವಿವರಿಸಲಾಗಿದೆ. ಈ ವಿಡಿಯೋದಲ್ಲಿ ಪ್ರತಿಯೊಂದು ಕೆತ್ತನೆಯ ಹಿಂದಿನ ವಿಶೇಷತೆ, ಸೂಕ್ಷ್ಮವಾದ ಕಸೂರಿಗೆ ಒತ್ತು ನೀಡಲಾದ ರೀತಿ, ಆಭರಣಗಳ ವಿನ್ಯಾಸದಲ್ಲಿ ಕಲಾತ್ಮಕತೆ, ಹಿಂದೂ ಸಂಬಂಧಿತ ದಂತಕಥೆಗಳನ್ನು ಚಿತ್ರಿಸಿರುವುದನ್ನು ಕಾಣಬಹುದು. ರಾಮಾಯಣ, ಮಹಾಭಾರತ ಸೇರಿದಂತೆ ಪುರಾಣ ಪ್ರಸಿದ್ಧ ಕಥೆಗಳನ್ನು ಹೇಳುವ ಶಿಲ್ಪಗಳ ಆಕರ್ಷಕ ಕೆತ್ತನೆಗಳನ್ನು ನೀವಿಲ್ಲಿ ನೋಡಬಹುದಾಗಿದೆ. ದೇವಾಲಯದ ಮುಂದೆ ದೊಡ್ಡ ನಂದಿ ಮೂರ್ತಿಯುಳ್ಳ ನಂದಿಮಂಟಪ ಹಾಗೂ ಅದರ ಅಲಂಕಾರವನ್ನು ಸೂಕ್ಷ್ಮವಾಗಿ ವಿವರಿಸಿರುವುದನ್ನು ನೋಡಬಹುದು.

ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಗ್ರೀಕ್ ಪ್ರತಿಮೆಗಳಲ್ಲಿನ ಸ್ನಾಯುಗಳ ತೋರ್ಪಡಿಕೆ ಭಾರತೀಯ ಶಿಲ್ಪಗಳಲ್ಲಿ ಯಾಕಿಲ್ಲ; ಚರ್ಚೆಗೆ ಕಾರಣವಾಯ್ತು ಪೋಸ್ಟ್

ಈ ವಿಡಿಯೋ ಇದುವರೆಗೆ ಹದಿನೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವಿಗ್ರಹಗಳನ್ನು ಕೆತ್ತಿದ ಶಿಲ್ಪಿಗಳಿಗೆ ನನ್ನದೊಂದು ನಮನಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಗುರುಗಳೇ ನೀವು ಹೇಳುವ ಇತಿಹಾಸ ಕೇಳ್ತಾ ಇದ್ರೆ ನಾವೇ ಆ ಕಾಲಘಟ್ಟದಲ್ಲಿ ಜೀವಿಸ್ತಾ ಇದ್ರಿ ಅನ್ಸುತ್ತೆ ಎಂದು ಹೇಳಿದ್ದಾರೆ. ನಮ್ಮ ಭಾರತೀಯ ಪರಂಪರೆಯ ತರಹ ಪ್ರಪಂಚದ ಯಾವ ಮೂಲೆಯಲ್ಲೂ ಇಲ್ಲ.. ಕಲ್ಲಿನಿಂದ ಕೆತ್ತಲಾದ ಈ ವಿಗ್ರಹಗಳು. ಪ್ರಪಂಚದ ಯಾವ ಭಾಗದಲ್ಲಿ ಈ ರೀತಿ ಕೆತ್ತನೆ ನೋಡೋಕೆ ಸಿಗುತ್ತೆ.. ನಮ್ಮ ಅನಾದಿ ಕಾಲದ ಶಿಲ್ಪಾ ಕಾಲರು ಎಂತ ನಿಪುಣರು ಅನ್ನೋದು ಇದನೆಲ್ಲ ನೋಡಿದಾಗ ಗೊತ್ತಾಗುತ್ತೆ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?