AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಗ್ರೀಕ್ ಪ್ರತಿಮೆಗಳಲ್ಲಿನ ಸ್ನಾಯುಗಳ ತೋರ್ಪಡಿಕೆ ಭಾರತೀಯ ಶಿಲ್ಪಗಳಲ್ಲಿ ಯಾಕಿಲ್ಲ; ಚರ್ಚೆಗೆ ಕಾರಣವಾಯ್ತು ಪೋಸ್ಟ್

ಭಾರತೀಯ ದೇವಾಲಯಗಳಲ್ಲಿರುವ ಶಿಲ್ಪಗಳು ಮತ್ತು ಪ್ರತಿಮೆಗಳು ಕೇವಲ ಅಲಂಕಾರಿಕವಲ್ಲ. ಆದರೆ ಭಾರತೀಯ ಶಿಲ್ಪಗಳ ಕೆತ್ತನೆಗಳಲ್ಲಿ ಭಿನ್ನತೆಯಿದೆ. ಗ್ರೀಕ್ ಪ್ರತಿಮೆಗಳಲ್ಲಿ ಸ್ನಾಯುಗಳನ್ನು ತೋರಿಸುವಂತೆ ಇಲ್ಲಿ ಯಾಕೆ ತೋರಿಸುವುದಿಲ್ಲ ಎನ್ನುವ ಪೋಸ್ಟ್ ಸದ್ಯ ವೈರಲ್ ಆಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದು, ಈ ಕುರಿತಾದ ಸ್ಟೋರಿ ಇಲ್ಲಿದೆ

Viral: ಗ್ರೀಕ್ ಪ್ರತಿಮೆಗಳಲ್ಲಿನ ಸ್ನಾಯುಗಳ ತೋರ್ಪಡಿಕೆ ಭಾರತೀಯ ಶಿಲ್ಪಗಳಲ್ಲಿ ಯಾಕಿಲ್ಲ; ಚರ್ಚೆಗೆ ಕಾರಣವಾಯ್ತು ಪೋಸ್ಟ್
ಭಾರತೀಯ ಶಿಲ್ಪ ಹಾಗೂ ಗ್ರೀಕ್ ಪ್ರತಿಮೆImage Credit source: Pinterest
ಸಾಯಿನಂದಾ
|

Updated on:Nov 07, 2025 | 11:22 AM

Share

ಭಾರತೀಯ ದೇವಾಲಯಗಳ ಶಿಲ್ಪಗಳು (Sculptures) ಮತ್ತು ಪ್ರತಿಮೆಗಳು ಕೇವಲ ಅಲಂಕಾರಿಕವಲ್ಲ. ಇದು ಪೌರಾಣಿಕ ಕಥೆಗಳು, ಧಾರ್ಮಿಕ ನಿರೂಪಣೆಗಳು ಮತ್ತು ದೈವಿಕ ಹಾಗೂ ಮಾನವ ಸಂಬಂಧವನ್ನು ಪ್ರತಿನಿಧಿಸುತ್ತದೆ. ಆದರೆ ಭಾರತೀಯ ದೇವಾಲಯಗಳ ಶಿಲ್ಪಗಳು, ಪ್ರತಿಮೆಗಳನ್ನು ಗ್ರೀಕ್ ಅಥವಾ ರೋಮನ್ ಪ್ರತಿಮೆಗಳಿಗೆ (Greek- Roman statues) ಹೋಲಿಸಿದರೆ ಪುರುಷ ಆಕೃತಿಗಳಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಅದರಲ್ಲಿ ಮುಖ್ಯವಾಗಿರುವುದು ಭಾರತೀಯ ಪ್ರತಿಮೆಗಳಲ್ಲಿ ದೇಹದ ಸ್ನಾಯುಗಳನ್ನು ತೋರ್ಪಡಿಸದೇ ಇರುವುದು. ಇದಕ್ಕೆ ಸಂಬಂಧಿಸಿದ ರೆಡ್ಡಿಟ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಂಚಲನ ಹುಟ್ಟುಹಾಕಿದೆ.

r/IndianHistory ಹೆಸರಿಗೆ ಖಾತೆಯಲ್ಲಿ ರೆಡ್ಡಿಟ್ ಬಳಕೆದಾರರೊಬ್ಬರು ಭಾರತೀಯ ಪ್ರತಿಮೆ ಹಾಗೂ ಗ್ರೀಕ್ ಪ್ರತಿಮೆಯ ಫೋಟೋ ಹಂಚಿಕೊಂಡಿದ್ದಾರೆ. ಈ ರೆಡ್ಡಿಟ್ ಪೋಸ್ಟ್ ಗೆ ಭಾರತೀಯ ದೇವಾಲಯದ ಶಿಲ್ಪಗಳು, ಪ್ರತಿಮೆಗಳ ಕೆತ್ತನೆಗಳಲ್ಲಿ, ಗ್ರೀಕ್ ಅಥವಾ ರೋಮನ್ ಪ್ರತಿಮೆಗಳಿಗೆ ಹೋಲಿಸಿದರೆ ಪುರುಷ ಆಕೃತಿಗಳು ಕಿಬ್ಬೊಟ್ಟೆಯ ಸ್ನಾಯುವಿನ ವಿವರಗಳನ್ನು ವಿರಳವಾಗಿ ಏಕೆ ಹೊಂದಿರುತ್ತವೆ?. ನಾನು ಗ್ರೀಕ್ ಪ್ರತಿಮೆಗಳನ್ನು ಗಮನಿಸಿದ್ದೇನೆ, ಅವು ಸ್ನಾಯುಗಳ ದೇಹವನ್ನು ತೋರಿಸುತ್ತವೆ, ನೀವು ಈ ಪ್ರತಿಮೆಗಳಲ್ಲಿ ರಕ್ತನಾಳಗಳನ್ನು ಸಹ ನೋಡಬಹುದು. ಆದರೆ ಭಾರತೀಯ ಕೆತ್ತನೆಗಳಲ್ಲಿ ಅದು ಇಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

In Indian temple sculptures and carvings, why do male figures rarely have visible muscular detail like abs, compared to Greek or Roman statues? byu/stihma inIndianHistory

ಇದನ್ನೂ ಓದಿ:ಇದು ಸನಾತನ ಧರ್ಮದ ಸೌಂದರ್ಯ; ಮನೆಯ ಪುಟ್ಟ ಲಕ್ಷ್ಮಿಯ ಪಾದ ತೊಳೆದು ಸಂಭ್ರಮಿಸಿದ ಮನೆ ಮಂದಿ

ಈ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಗ್ರೀಕ್ ಹಾಗೂ ರೋಮನ್ ಕಲೆಗಳು ಆ ಸ್ನಾಯುವಿನ ದೇಹವನ್ನು ಆದರ್ಶವಾಗಿ ಹೊಂದಿದ್ದವು. ಭಾರತೀಯರು ಅದನ್ನು ಆದರ್ಶ ದೃಷ್ಟಿಯಾಗಿ ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬರು ವಿಚಿತ್ರವೆಂದರೆ ಮಹಾಭಾರತದಲ್ಲಿ ಭೀಮನನ್ನು ವೃ ಕೋದರ ಎಂದು ವಿವರಿಸಲಾಗಿದೆ. ಅಂದರೆ ಆತನು ಕೂಡ ತೋಳದಂತೆ ಚಪ್ಪಟೆಯಾದ ಹೊಂದಿರುವುದು ಎಂದು ಕಾಮೆಂಟ್ ಮಾಡಿದ್ದಾರೆ. ಸೌಂದರ್ಯಶಾಸ್ತ್ರ ಬೇರೆಯದೇ ಆಗಿರಬಹುದು. ಗ್ರೀಕ್ ಮತ್ತು ರೋಮನ್ನರು ಸ್ನಾಯುವಿನ ಮೈಕಟ್ಟು ಮತ್ತು ಹರಿಯುವ ನಿಲುವಂಗಿಗಳ ಮೇಲೆ ಹೆಚ್ಚು ಗಮನಹರಿಸಿದರು. ಮತ್ತೊಂದೆಡೆ, ಭಾರತೀಯ ಶಿಲ್ಪಗಳು ಆಭರಣಗಳ ಸಂದರ್ಭದಲ್ಲಿ ವಿಸ್ತಾರವಾದ ಕೆತ್ತನೆಗಳನ್ನು ಹೊಂದಿವೆ ಎಂದು ಮತ್ತೊಬ್ಬರು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:13 am, Fri, 7 November 25