ಪಣತ್ತೂರು ರಸ್ತೆ ‘ಡರ್ಟ್ ಬೈಕ್’: ಬೆಂಗಳೂರಿನ ರಸ್ತೆ ಸ್ಥಿತಿ ಹೇಗಿದೆ ನೋಡಿ
ಬೆಂಗಳೂರಿನ ಪಣತ್ತೂರು ರಸ್ತೆಯ ಕಂದಕಗಳಲ್ಲಿ ಬೈಕ್ ಸವಾರರು ಸಂಚರಿಸಿದ ವಿಡಿಯೋ ವೈರಲ್ ಆಗಿದೆ. ವೈಟ್-ಟಾಪಿಂಗ್ ಕಾಮಗಾರಿ ಮತ್ತು ಸಂಚಾರ ದಟ್ಟಣೆಯಿಂದಾಗಿ ಚರಂಡಿಗಳಲ್ಲಿ ಬೈಕ್‌ಗಳು ಸಾಗಿದ್ದು, ಇದನ್ನು 'ಡರ್ಟ್ ಬೈಕ್' ಸವಾರಿ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಇದು ಬೆಂಗಳೂರಿನ ಮೂಲಸೌಕರ್ಯದ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಬೆಂಗಳೂರು, ನ.7: ಬೆಂಗಳೂರಿನ ಪಣತ್ತೂರುನಲ್ಲಿ (Bengaluru’s Panathur) ‘ಡರ್ಟ್ ಬೈಕ್’ ರೈಡ್ ಸಾಹಸ ಶುರುವಾಗಿದೆ. ಇದರ ವಿಡಿಯೋ ಎಕ್ಸ್ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಬೆಂಗಳೂರಿನ ರಸ್ತೆಗಳ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ ಎಂದು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ರಸ್ತೆಗಳ ಬಗೆಗಿನ ವಿಡಿಯೋ ಟ್ರೋಲ್ ಆಗುತ್ತ ಇರುತ್ತದೆ. ಆದರೆ ಈ ವಿಡಿಯೋ ಮಾತ್ರ ತುಂಬಾ ತಮಾಷೆಯಾಗಿದೆ. ಕಾಡುಬೀಸನಹಳ್ಳಿ-ಪಣತ್ತೂರು ಮುಖ್ಯ ಮಾರ್ಗದಲ್ಲಿ ವೈಟ್-ಟಾಪಿಂಗ್ ಕೆಲಸಕ್ಕಾಗಿ ರಸ್ತೆ ಮುಚ್ಚಲಾಗಿದೆ. ಇದರಿಂದ ವಾಹನ ದಟ್ಟಣೆ ಉಂಟಾಗಿದ್ದು, ಬೈಕ್ ಸವಾರರು ರಸ್ತೆ ಬದಿಯಲ್ಲಿರುವ ತೆರೆದ ಚರಂಡಿ, ಕಂದಕದಲ್ಲಿ ಸಂಚರಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಬೆಂಗಳೂರಿನ ‘ಡರ್ಟ್ ಬೈಕ್’ ರೈಡ್ ಎಂದು ನೆಟ್ಟಿಗರು ಕರೆದಿದ್ದಾರೆ.
ಈ ವಿಡಿಯೋ ಬೆಂಗಳೂರಿನಲ್ಲಿ ಮೂಲಸೌಕರ್ಯದ ಕೊರತೆ ಎಷ್ಟಿದೆ ಎಂದು ತೋರಿಸುತ್ತಿದೆ. ಅಕ್ಟೋಬರ್ 10ರಂದು ಕಾಡುಬೀಸನಹಳ್ಳಿ-ಪಣತ್ತೂರು ಮುಖ್ಯ ಮಾರ್ಗದಲ್ಲಿ ವೈಟ್-ಟಾಪಿಂಗ್ ಕೆಲಸ ಪ್ರಾರಂಭವಾಗಿದ್ದು, ತಿಂಗಳ ಒಳಗೆ ಇದರ ಕೆಲಸ ಮುಗಿಯಬೇಕಿತ್ತು. ಆದರೆ ಕೆಲಸ ಪೂರ್ಣಗೊಳ್ಳುವ ಮೊದಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಿದೆ. ಇದರಿಂದ ಈ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ದ್ವಿಚಕ್ರ ಸವಾರರು ಚರಂಡಿ, ಕಂದಕದ ಸಂದಿಗಳಲ್ಲಿ ಸಾಗಿದ್ದಾರೆ.
ಇದನ್ನೂ ಓದಿ: ಮೊಟ್ಟ ಮೊದಲ ಬಾರಿಗೆ ಮನುಷ್ಯರ ಬಳಿಯೇ ಸಲಹೆ ಕೇಳಿದ ಎಐ ಇನ್ಫ್ಲುಯೆನ್ಸರ್ ನೈನಾ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
This is how techies are traveling in Bengaluru! 🏍️💻 Riding through narrow, broken alleys! If you give such physical hardship to coders, the code will surely be sharp! 😅 Thank you @siddaramaiah @DKShivakumar @MALimbavali, at this rate, Bengaluru will move from 6th to 1st place… pic.twitter.com/7Z3g8TxvdA
— Civic Opposition of India (@CivicOp_india) November 6, 2025
ನೆಟ್ಟಿಗರು ಈ ವಿಡಿಯೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ಇದು ಬೆಂಗಳೂರಿನ ಡರ್ಟ್ ಬೈಕಿಂಗ್ ಈವೆಂಟ್ ಎಂದು ಹೇಳಿದ್ದಾರೆ. ಇನ್ನೂ ಕೆಲವರು, ಬೆಂಗಳೂರು ಮೂಲಸೌಕರ್ಯಕ್ಕಿಂತ, ಇಂತಹ ವಿಚಾರಗಳಲ್ಲಿ ಮುಂದಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಸರ್ಕಾರ ಇತ್ತಿಚೇಗೆ ಸಾರ್ವಜನಿಕರಿಗೆ ಇಂಥಹ ಅನುಭವವನ್ನು ನೀಡುತ್ತಿದೆ. ಅದರಲ್ಲಿ ಇದು ಒಂದು ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Fri, 7 November 25




