Video: ತಡರಾತ್ರಿ ಮನೆಗೆ ಬಂದ ಮಗನನ್ನು ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಂಡ ತಂದೆ
ಈಗಿನ ಕಾಲದ ಮಕ್ಕಳೇ ಹಾಗೆ ಹೆತ್ತವರ ಮಾತು ಕೇಳಲ್ಲ. ಕೆಲವರು ಸ್ನೇಹಿತರ ಜತೆಗೆ ಹರಡುತ್ತಾ ಕುಳಿತು ತಡರಾತ್ರಿ ಮನೆಗೆ ಬರುತ್ತಾರೆ. ಹೀಗಾದಾಗ ಸಹಜವಾಗಿ ಹೆತ್ತವರು ತಾಳ್ಮೆ ಕಳೆದುಕೊಳ್ಳುತ್ತಾರೆ. ಆದರೆ ಯುವಕನೊಬ್ಬ ತಡವಾಗಿ ಮನೆಗೆ ಬಂದಿದ್ದು, ಮಗನನ್ನು ತಂದೆಯೂ ಸ್ವಾಗತಿಸಿದ ರೀತಿ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಒಬ್ಬರೋ ಇಬ್ಬರೋ ಮಕ್ಕಳಿರುವಾಗ ಕಾರಣ ತಂದೆತಾಯಂದಿರಿಗೆ (Parents) ತಮ್ಮ ಮಕ್ಕಳ ಮೇಲೆ ಮುದ್ದು ಜಾಸ್ತಿ. ತಮ್ಮ ಮಗ ಅಥವಾ ಮಗಳು ಏನು ತಪ್ಪು ಮಾಡಿದ್ರೂ ಗದರುವುದಿಲ್ಲ. ಹೀಗಾಗಿ ಮಕ್ಕಳು ಕೂಡ ಅದನ್ನೇ ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಂತಿದೆ ಈ ವಿಡಿಯೋ. ಹೌದು, ಯುವಕ ತಡವಾಗಿ ಮನೆಗೆ ಬಂದಿದ್ದು, ಆತನ ದಾರಿಯನ್ನೇ ಕಾಯುತ್ತಿದ್ದ ತಂದೆಯೂ ಮಾಡಿದ ಕೆಲಸ ನೋಡಿದ್ರೆ ನೀವು ಬಾಯಿಯ ಮೇಲೆ ಬೆರಳು ಇಡ್ತೀರಾ. ಈ ರೀತಿ ಕೂಡ ವೆಲ್ಕಮ್ ಸಿಗುತ್ತಾ ಎನ್ನುವ ಪ್ರಶ್ನೆಯೊಂದು ನಿಮ್ಮ ತಲೆಯಲ್ಲಿ ಮೂಡುತ್ತದೆ. ಫನ್ನಿ ಎನಿಸುವ ಈ ವಿಡಿಯೋ ಸದ್ಯ ವೈರಲ್ ಆಗಿದೆ.
ತಡವಾಗಿ ಮನೆಗೆ ಬಂದ ಮಗ, ತಂದೆ ಮಾಡಿದ್ದೇನು?
@baxnal ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರಾತ್ರಿಯಾದ್ರು ಮನೆಗೆ ಬಾರದ ಮಗನಿಗಾಗಿ ತಂದೆ ಸೇರಿದಂತೆ ಮನೆಯ ಸದಸ್ಯರು ಕಾಯುವುದನ್ನು ಕಾಣಬಹುದು. ಯುವಕನೊಬ್ಬ ಬಾಗಿಲು ತೆರೆದು ಮೆಲ್ಲನೆ ಒಳಗೆ ಬರುತ್ತಿದ್ದಂತೆ ಆರತಿ ತಟ್ಟೆಯ ಹಿಡಿದು ತಂದೆಯೂ ಮಗನಿಗೆ ಆರತಿ ಮಾಡಿ ಮನೆಯೊಳಗೆ ಸ್ವಾಗತಿಸುವುದನ್ನು ನೀವು ನೋಡಬಹುದು. ತಂದೆಯಿಂದ ಈ ರೀತಿ ಪ್ರತಿಕ್ರಿಯೆ ಬರುತ್ತಿದ್ದಂತೆ ಯುವಕ ಜೋರಾಗಿ ನಕ್ಕಿದ್ದಾನೆ. ಆದರೆ ವ್ಯಕ್ತಿಯೂ ಆರತಿ ತಟ್ಟೆಯಲ್ಲಿದ್ದ ಬೆಲ್ಟ್ ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಇದನ್ನು ನೋಡಿದ ಮನೆಯ ಸದಸ್ಯರೆಲ್ಲರೂ ಜೋರಾಗಿ ನಗುತ್ತಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Father, when son returns home late at night. pic.twitter.com/7dKYYd5gHK
— Baxnal (@baxnal) November 5, 2025
ಇದನ್ನೂ ಓದಿ:ತಂದೆಯ ತ್ಯಾಗಕ್ಕೆ ಮಗನ ಬಹುಮಾನ: ಅಪ್ಪನಿಗೆ ಉಡುಗೊರೆಯಾಗಿ ಟಾಟಾ ಪಂಚ್ ನೀಡಿದ ಮಗ
ನವೆಂಬರ್ 5 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಮ್ಮ ಮನೆಯಲ್ಲಿ ತಂದೆಯ ರಿಯಾಕ್ಷನ್ ಹೀಗೆ ಇರಲ್ಲ, ಮೊದಲು ಕೈ ಸಿಗುವುದೇ ಬೆಲ್ಟ್ ಎಂದಿದ್ದಾರೆ. ಇನ್ನೊಬ್ಬರು ಮೊದಲು ಆರತಿ, ಆಮೇಲೆ ಬೆನ್ನಿಗೆ ಬೆಲ್ಟ್ ನಿಂದ ಬೀಳುತ್ತೆ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಚಿಕಿತತ್ಸೆಗೆ ಸಿದ್ಧವಾದ್ದಂತಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




