AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಾಗವಲ್ಲಿ ವೇಷದಲ್ಲಿ ಕಚೇರಿಗೆ ಬಂದ ಮಹಿಳೆ, ಇದು ಪರಕಾಯ ಪ್ರವೇಶ ಎಂದ ನೆಟ್ಟಿಗರು

ಹ್ಯಾಲೋವೀನ್ ಆಚರಣೆಯಂದು ಸುಶ್ಮಿತಾ ಎಂಬ ಮಹಿಳೆಯೊಬ್ಬರು ಕಚೇರಿಗೆ ನಾಗವಲ್ಲಿ ವೇಷದಲ್ಲಿ ಬಂದ ವಿಡಿಯೋ ವೈರಲ್ ಆಗಿದೆ. ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡ ಈ ವಿಡಿಯೋ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿದ್ದು, ನೆಟ್ಟಿಗರು ಮಹಿಳೆಯ ನಟನೆ ಮತ್ತು ವೇಷಭೂಷಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಈ ವರ್ಷದ ಅತ್ಯುತ್ತಮ ಹ್ಯಾಲೋವೀನ್ ವೇಷ ಎಂದು ಕಮೆಂಟ್‌ ಮಾಡಿದ್ದಾರೆ.

Video: ನಾಗವಲ್ಲಿ ವೇಷದಲ್ಲಿ ಕಚೇರಿಗೆ ಬಂದ ಮಹಿಳೆ, ಇದು ಪರಕಾಯ ಪ್ರವೇಶ ಎಂದ ನೆಟ್ಟಿಗರು
ವಿಡಿಯೋ Image Credit source: social Media
ಅಕ್ಷಯ್​ ಪಲ್ಲಮಜಲು​​
|

Updated on: Nov 07, 2025 | 6:10 PM

Share

ಬ್ರಿಟಿಷರು ಅಕ್ಟೋಬರ್​​ 31ರಂದು ಹ್ಯಾಲೋವೀನ್ ಆಚರಣೆಯನ್ನು (halloween costume viral) ಮಾಡುತ್ತಾರೆ. ಈ ಆಚರಣೆಯ ದಿನದಂದು ಭೂತಗಳ ವೇಷ ಹಾಕಿಕೊಂಡು ತಿರುಗಾಡುತ್ತಾರೆ. ಭಾರತದ ಕೆಲವು ಕಡೆ ಈ ಆಚರಣೆಯನ್ನು ಮಾಡುತ್ತಾರೆ. ಈ ವರ್ಷ ಹ್ಯಾಲೋವೀನ್ ಆಚರಣೆ ಪ್ರಯುಕ್ತ ಸುಶ್ಮಿತಾ ಎಂಬುವವರು ತಮ್ಮ ಕಚೇರಿಗೆ ನಾಗವಲ್ಲಿ ವೇಷ ಹಾಕಿಕೊಂಡು ಬಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಸುಶ್ಮಿತಾ ಅವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಮಿಲಿಯನ್‌ಗಟ್ಟಲೆ​​​​​ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ನೋಡಿ ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ತಮಾಷೆಯಾಗಿ ಕಮೆಂಟ್​ ಮಾಡಿದ್ದಾರೆ. ಸುಶ್ಮಿತಾ ಅವರು “ಇದು ಹ್ಯಾಲೋವೀನ್‌ ಪ್ರಯುಕ್ತ ನಾನು ಭಾರತದ ಭೂತ ನಾಗವಲ್ಲಿ ವೇಷದಲ್ಲಿ ಆಫೀಸ್​​​ಗೆ ಹೋಗಿದ್ದೆ” ಎಂದು ಶೀರ್ಷಿಕೆಯನ್ನು ಕೂಡ ಬರೆದುಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಸುಶ್ಮಿತಾ ಅವರು ನಾಗವಲ್ಲಿ ವೇಷದಲ್ಲಿ ಕಚೇರಿಗೆ ಬರುವುದನ್ನು ನೋಡಬಹುದು, ನಡಿಗೆ, ನಟನೆ ಎಲ್ಲವೂ ಕೂಡ ನಾಗವಲ್ಲಿಯಂತೆ ಇದೆ. ಅವರ ನಟನೆಗೆ ಅಲ್ಲಿದ್ದ ಸಹೋದ್ಯೋಗಿಗಳು ಚಪ್ಪಾಳೆ, ಶಿಳ್ಳೆಯನ್ನು ಹಾಕುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಜತೆಗೆ ಅಲ್ಲಿದ್ದ ಇತರ ಉದ್ಯೋಗಿಗಳು ಕೂಡ ಹ್ಯಾಲೋವೀನ್ ವೇಷಭೂಷಣಗಳನ್ನು ಧರಿಸಿದ್ದರು. ಇನ್ನುಸುಶ್ಮಿತಾ ಅವರು ನಾಗವಲ್ಲಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ. ಈ ಪಾತ್ರಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ಕೂಡ ಬಂದಿದೆ.

ಇದನ್ನೂ ಓದಿ: ತಡರಾತ್ರಿ ಮನೆಗೆ ಬಂದ ಮಗನನ್ನು ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಂಡ ತಂದೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Sushmitha (@the_sushmithaa)

ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ:

ಮಹಿಳೆ ನಾಗವಲ್ಲಿ ಪಾತ್ರಕ್ಕೆ ಸೋಶಿಯಲ್​​​ ಮೀಡಿಯಾದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ನಾನು ನೋಡಿದ ನಿಜವಾದ ನಾಗವಲ್ಲಿ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಹ್ಯಾಲೋವೀನ್ ಆಚರಣೆಗೆ ಸರಿಯಾದ ಭೂತ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ. ಒಂದು ವೇಳೆ ಆ ಮಹಿಳೆ ನನ್ನ ಮುಂದೆ ಬಂದಿದ್ದಾರೆ ನಾನು ಅಲ್ಲಿಂದ ಓಡುತ್ತಿದ್ದೆ ಎಂದು ಕಮೆಂಟ್​ ಮಾಡಿದ್ದಾರೆ. ಇದೊಂದು ಈ ವರ್ಷದ ಅತ್ಯುತ್ತಮ ಹ್ಯಾಲೋವೀನ್ ವೇಷಭೂಷಣ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ