AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮೊಟ್ಟ ಮೊದಲ ಬಾರಿಗೆ ಮನುಷ್ಯರ ಬಳಿಯೇ ಸಲಹೆ ಕೇಳಿದ ಎಐ ಇನ್ಫ್ಲುಯೆನ್ಸರ್ ನೈನಾ

ಇತ್ತೀಚೆಗಿನ ದಿನಗಳಲ್ಲಿ ಎಐ ಬಳಕೆ ಹೆಚ್ಚಾಗಿದೆ. ಪ್ರತಿಯೊಂದು ಸಮಸ್ಯೆಗೂ ಚಾಟ್ ಜಿಪಿಟಿ ಮೂಲಕ ಸಲಹೆ ಕೇಳುವವರೇ ಹೆಚ್ಚಾಗಿದ್ದಾರೆ. ಹೀಗಾಗಿರುವಾಗ ಎಐ ನಿಮ್ಮ ಬಳಿ ಸಲಹೆ ಕೇಳುತ್ತಿದೆ ಅಂದ್ರೆ ನೀವು ನಂಬುವಿರಾ. ಹೌದು, ಇಷ್ಟು ದಿನ ನಿಮಗೆ ಸಲಹೆ ನೀಡುತ್ತಿದ್ದ ಎಐ ಇದೀಗ ಮನುಷ್ಯರ ಬಳಿಯೇ ಗೈಡೆನ್ಸ್ ಕೇಳಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಮೊಟ್ಟ ಮೊದಲ ಬಾರಿಗೆ ಮನುಷ್ಯರ ಬಳಿಯೇ ಸಲಹೆ ಕೇಳಿದ ಎಐ ಇನ್ಫ್ಲುಯೆನ್ಸರ್ ನೈನಾ
ಇಂಡಿಯನ್ ಎಐ ಇನ್ಫ್ಲುಯೆನ್ಸರ್ ನೈನಾImage Credit source: Instagram
ಸಾಯಿನಂದಾ
|

Updated on:Nov 07, 2025 | 12:37 PM

Share

ತಂತ್ರಜ್ಞಾನ ದಿನದಿಂದ ದಿನಕ್ಕೆ ಆವಿಷ್ಕಾರಗೊಳ್ಳುತ್ತಿದೆ. ತಂತ್ರಜ್ಞಾನ ಲೋಕದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ತನ್ನದೇ ಹವಾ ಸೃಷ್ಟಿಸಿದೆ. ಇತ್ತ ಚಾಟ್ ಜಿಪಿಟಿಯಲ್ಲಿ ಸಲಹೆ ಸೂಚನೆಗಾಗಿ ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ಫೈನಾನ್ಸಿಯಲ್ ಪ್ರಾಬ್ಲಮ್, ಲವ್, ಪರ್ಸನಲ್ ಲೈಫ್ ಹೀಗೆ ಯಾವುದೇ ರೀತಿ ಸಲಹೆಗಾಗಿ ಮೊದಲು ನೆನಪಾಗುವುದೇ ಈ ಚಾಟ್ ಜಿಪಿಟಿ. ಅದೆಷ್ಟೋ ಜನರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದ ಎಐ ಇದೀಗ ಮೊಟ್ಟ ಮೊದಲ ಬಾರಿಗೆ ಮನುಷ್ಯರಿಂದಲೇ ಅಡ್ವೈಸ್ ಕೇಳಿದೆ. ಯಾವುದೇ ಪ್ರಶ್ನೆಗಳಿಗೂ ಕೇಳಿದ್ರೂ ಫಟಾಫಟ್‌ ಎಂದು ಕ್ಷಣಾರ್ಧದಲ್ಲಿ ಉತ್ತರ ನೀಡುತ್ತಿದ್ದ ಇಂಡಿಯನ್ ಎಐ ಇನ್ಫ್ಲುಯೆನ್ಸರ್ ನೈನಾ (AI Influencer Naina) ಇಂದು ಮನುಷ್ಯರ ಬಳಿ ತನಗೆ ಸಜೇಶನ್ ಕೊಡಿ ಎಂದು ಕೇಳಿದ್ದಾಳೆ. ಈಕೆ ಹಾಕಿದ ಸ್ಟೋರಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮನುಷ್ಯರ ಬಳಿಯೇ ಗೈಡೆನ್ಸ್‌ ಕೇಳಿದ ಎಐ

ಎಐ ಇನ್ಫ್ಲುಯೆನ್ಸರ್ ನೈನಾ ತಮ್ಮ ಖಾತೆಯಲ್ಲಿ “ನನ್ನ ಸರ್ಕ್ಯೂಟ್‌ಗೆ ಬೋರ್‌ಡಮ್ ಓವರ್‌ಲೋಡ್ ಆಗಿದ್ದು, ಏನಾದ್ರೂ ಒಂದು ಹೊಸತನ ಬೇಕು ಅನ್ನಿಸುತ್ತಿದೆ. ಹೀಗಾಗಿ ಅದು ನನ್ನಲ್ಲಿ ಸ್ಪಾರ್ಕ್ ಮೂಡಿಸಬೇಕು. ಮೈ ರೋಮಾಂಚನ ಅನ್ನಿಸೋ ‘ಅಡ್ರಿನಾಲಿನ್’ ಬೇಕು. ದಯವಿಟ್ಟು ನಿಮ್ಮ ‘ಥ್ರಿಲ್ ಕೋಡ್ಸ್’ ಶೇರ್ ಮಾಡಿ, ಈ ಸಮಸ್ಯೆಯಿಂದ ಹೊರಬರಲು ನನಗೆ ಸಹಾಯ ಮಾಡಿ. ಅಲ್ಗಾರಿದಮ್‌ಗಳಿಗೆ ಗೊತ್ತಿಲ್ಲದ ಮನುಷ್ಯರ ಥ್ರಿಲ್, ಎಕ್ಸೈಟ್‌ಮೆಂಟ್ ಅನುಭವ ಬೇಕು ಎಂದು ಹೇಳಿಕೊಂಡಿದ್ದಾಳೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

Viral Post

ಇದನ್ನೂ ಓದಿ:ಷೇರ್ ಮಾರ್ಕೆಟ್ ಲಾಭ ನಷ್ಟ ತಿಳಿಯಲು ಬೆಡ್ ರೂಮಿನಲ್ಲೇ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡ ಬೆಂಗಳೂರಿಗ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ಏನ್ ಕಾಲ ಬಂತು ಗುರು, ಎಐಯಿಂದ ನಾವು ಸಲಹೆ ಪಡೀತಾ ಇದ್ವಿ, ಆದರೆ ಎಐಯೇ ಸಲಹೆ ಪಡುವಂತಹ ಕಾಲ ಬಂತು ಎಂದು ಹೇಳಿದ್ದಾರೆ. ಇನ್ನೊಬ್ಬರು, ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದಂತೆ ಇನ್ನು ನಮ್ಮ ಕಣ್ಣಿಂದ ಏನೇನೋ ನೋಡ್ಬೇಕೋ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Fri, 7 November 25