AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಷೇರ್ ಮಾರ್ಕೆಟ್ ಲಾಭ ನಷ್ಟ ತಿಳಿಯಲು ಬೆಡ್ ರೂಮಿನಲ್ಲೇ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡ ಬೆಂಗಳೂರಿಗ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳನ್ನು ನೋಡಿದಾಗ ನಮ್ಮ ಜನರು ಎಷ್ಟು ಬುದ್ಧಿವಂತರು ಎಂದೆನಿಸುತ್ತದೆ. ಹೌದು, ಬೆಂಗಳೂರಿನ ವ್ಯಕ್ತಿಯೊಬ್ಬರು ಷೇರು ಮಾರುಕಟ್ಟೆ ಹೂಡಿಕೆಯ ಸ್ಥಿತಿಗತಿಯನ್ನು ತಿಳಿಯಲು ಬೆಡ್ ರೂಮ್‌ನಲ್ಲಿ ವಿಭಿನ್ನವಾದ ಎಐ ಚಾಲಿತ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Viral: ಷೇರ್ ಮಾರ್ಕೆಟ್ ಲಾಭ ನಷ್ಟ ತಿಳಿಯಲು ಬೆಡ್ ರೂಮಿನಲ್ಲೇ ಲೈಟಿಂಗ್ ವ್ಯವಸ್ಥೆ ಮಾಡಿಕೊಂಡ ಬೆಂಗಳೂರಿಗ
ಎಐ ಚಾಲಿತ ಲೈಟಿಂಗ್ ವ್ಯವಸ್ಥೆImage Credit source: Twitter
ಸಾಯಿನಂದಾ
|

Updated on: Nov 06, 2025 | 5:33 PM

Share

ಬೆಂಗಳೂರು, ನವೆಂಬರ್ 06: ನಾವಿಂದು ತಂತ್ರಜ್ಞಾನ (Technology) ಯುಗದಲ್ಲಿದ್ದೇವೆ, ಹೀಗಾಗಿ ತಮ್ಮ ಪ್ರತಿಯೊಂದು ಕೆಲಸ ಕಾರ್ಯಕ್ಕೂ ತಂತ್ರಜ್ಞಾನವನ್ನು ಆಚ್ಚುಕಟ್ಟಾಗಿ ಬಳಸಿಕೊಳ್ಳುವುದು ತಿಳಿದೇ ಇದೆ. ಇದೀಗ ಬೆಂಗಳೂರಿನ (Bengaluru) ಟೆಕ್ಕಿಯೊಬ್ಬರು ತಮ್ಮ ಷೇರು ಮಾರುಕಟ್ಟೆಯ ಹೂಡಿಕೆಯ ಲಾಭ ಹಾಗೂ ನಷ್ಟವನ್ನು ತಿಳಿಯಲು ವಿಶಿಷ್ಟವಾದ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಬೆಡ್ ರೂಮ್‌ನಲ್ಲಿ ಕುಳಿತು ಕೊಂಡರೆ ಸಾಕು ಷೇರ್ ಮಾರ್ಕೆಟ್ ಹೂಡಿಕೆಯ ಸ್ಥಿತಿಗತಿ ಲೈಟಿಂಗ್ ನಿಂದಲೇ ತಿಳಿಯುತ್ತದೆ. ಅದೇಗೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ಷೇರ್ ಮಾರ್ಕೆಟ್ ಲಾಭ ನಷ್ಟ ತಿಳಿಯಲು ವ್ಯಕ್ತಿ ಮಾಡಿಕೊಂಡ ಪ್ಲ್ಯಾನ್‌ ಇದು

ಪಂಕಜ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ವಿಶಿಷ್ಟ ವಿಧಾನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ “ನನ್ನ ಜೆರೋಧಾ ಸ್ಟಾಕ್ ಪೋರ್ಟ್‌ಫೋಲಿಯೋ ಈಗ ನನ್ನ ಬೆಡ್‌ರೂಂ ಲೈಟ್‌ಗಳನ್ನು ನಿಯಂತ್ರಿಸುತ್ತದೆ. ನಾನು ಹಣ ಕಳೆದುಕೊಂಡಾಗ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ ಎಂದು ಬರೆದುಕೊಂಡಿದ್ದಾರೆ. ಷೇರು ಮಾರ್ಕೆಟ್ ಹೂಡಿಕೆಗಳ ಆಧರಿಸಿ ಲಾಭ ನಷ್ಟವನ್ನು ತಿಳಿಯಲು ಬೆಡ್ ರೂಮಿನಲ್ಲಿ ಎಐ ಚಾಲಿತ ಲೈಟಿಂಗ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಪೋರ್ಟ್‌ಫೋಲಿಯೋ ಲಾಭದಲ್ಲಿದ್ದಾಗ ಲೈಟ್‌ಗಳು ಹಸಿರು ಬಣ್ಣದಲ್ಲಿ ಗೋಚರಿಸುತ್ತವೆ. ಒಂದು ವೇಳೆ ನಷ್ಟದಲ್ಲಿದ್ದರೆ ಲೈಟ್ ಕೆಂಪು ಬಣ್ಣಕ್ಕೆ ತಿರುಗುತ್ತವೆ. ತಮ್ಮ ಹೂಡಿಕೆಯ ಲಾಭ-ನಷ್ಟವನ್ನು ತಿಳಿಯಲು ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿರುವುದನ್ನು ನೀವಿಲ್ಲಿ ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ತಂದೆಯ ತ್ಯಾಗಕ್ಕೆ ಮಗನ ಬಹುಮಾನ: ಅಪ್ಪನಿಗೆ ಉಡುಗೊರೆಯಾಗಿ ಟಾಟಾ ಪಂಚ್ ನೀಡಿದ ಮಗ

ನವೆಂಬರ್ 3 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತಂತ್ರಜ್ಞಾನವನ್ನು ಈ ರೀತಿ ಬಳಸಬಹುದೆಂದು ತಿಳಿದೇ ಇರಲಿಲ್ಲ ಎಂದಿದ್ದಾರೆ. ಇನ್ನೊಬ್ಬರು, ನೀವು ಈ ಎಐ ಚಾಲಿತ ಲೈಟಿಂಗ್ ವ್ಯವಸ್ಥೆಯನ್ನು ಮಾರಾಟ ಮಾಡಬಹುದು, ನಾನೇ ಮೊದಲ ಗ್ರಾಹಕನಾಗುತ್ತೇನೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಮುಂದಿನ ಗುರಿ ಲಾಭ ನಷ್ಟದ ಪ್ರಮಾಣವನ್ನು ಆಧರಿಸಿ ಬೆಳಕಿನ ತೀವ್ರತೆಯನ್ನು ನಿಯಂತ್ರಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ