AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇದು ಸನಾತನ ಧರ್ಮದ ಸೌಂದರ್ಯ; ಮನೆಯ ಪುಟ್ಟ ಲಕ್ಷ್ಮಿಯ ಪಾದ ತೊಳೆದು ಸಂಭ್ರಮಿಸಿದ ಮನೆ ಮಂದಿ

ಹೆಣ್ಣು ಮಗು ಜನಿಸಿದರೆ ಮನೆಗೆ ಲಕ್ಷ್ಮೀ ಬಂದಂತೆ ಎಂದೇಳುತ್ತಾರೆ. ಹೀಗಾಗಿ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಸಂಭ್ರಮಿಸುವ ಕುಟುಂಬವನ್ನು ನೀವು ನೋಡಿರುತ್ತೀರಿ. ಈ ವಿಡಿಯೋದಲ್ಲಿ ಮನೆಯ ಸದಸ್ಯರೆಲ್ಲರೂ ಪುಟ್ಟ ಹುಡುಗಿಯ ಪಾದ ತೊಳೆದು, ಆ ನೀರನ್ನು ಅಮೃತವೆಂಬಂತೆ ಸ್ವೀಕರಿಸಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

Video: ಇದು ಸನಾತನ ಧರ್ಮದ ಸೌಂದರ್ಯ; ಮನೆಯ ಪುಟ್ಟ ಲಕ್ಷ್ಮಿಯ ಪಾದ ತೊಳೆದು ಸಂಭ್ರಮಿಸಿದ ಮನೆ ಮಂದಿ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on: Nov 05, 2025 | 3:04 PM

Share

ಹೆಣ್ಣೆಂದರೆ (female) ಶಕ್ತಿ, ನಮ್ಮ ಸನಾತನ ಧರ್ಮದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. ನಮ್ಮ ಈ ಸಂಸ್ಕೃತಿಯಲ್ಲಿ ಹೆಣ್ಣನ್ನು ಪೂಜಿಸುವುದಲ್ಲದೇ ಸೃಷ್ಟಿ ಹಾಗೂ ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೆಣ್ಣು ಮಗಳನ್ನು ದೇವತೆಯಂತೆ ಪೂಜಿಸುವ ಹೃದಯಸ್ಪರ್ಶಿ ವಿಡಿಯೋ ಇದಾಗಿದೆ. ಮನೆಯ ಸದಸ್ಯರೆಲ್ಲರೂ ಮನೆಯ ಪುಟಾಣಿಯ (little girl) ಪಾದ ತೊಳೆದು, ನೀರನ್ನು ಪ್ರಸಾದವೆಂದು ಸ್ವೀಕರಿಸಿದ್ದಾರೆ. ಈ ವಿಡಿಯೋ ನೋಡಿದ ಬಳಕೆದಾರರು ಹೆಣ್ಣಿಗೆ ನೀಡಲಾದ ಸ್ಥಾನಮಾನವವೇ ಖುಷಿ ತರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಕುಟುಂಬ ಹೆಣ್ಣಿಗೆ ನೀಡುವ ಗೌರವ ನೋಡಿ

@Dharma0292 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪುಟ್ಟ ಹೆಣ್ಣು ಮಗುವೊಂದು ಮನೆಯ ಜಗಲಿಯ ಮೇಲೆ ಕಾಲು ಚಾಚಿ ಕುಳಿತಿಕೊಂಡಿದ್ದಾಳೆ. ಈ ವೇಳೆಯಲ್ಲಿ ಮನೆಯ ಸದಸ್ಯರೆಲ್ಲರೂ ಒಬ್ಬೊಬ್ಬರಾಗಿ ಬಂದು ಮನೆಯ ಹೆಣ್ಣು ಮಗುವಿನ ಪಾದ ತೊಳೆದು, ನೀರನ್ನು ತಲೆಯ ಮೇಲೆ ಹಚ್ಚಿ, ಪ್ರಸಾದವೆಂದು ಸ್ವೀಕರಿಸುತ್ತಿರುವುದನ್ನು ಕಾಣಬಹುದು. ಈ ಪುಟ್ಟ ಹುಡುಗಿಯೂ ಎಲ್ಲರನ್ನು ಕಣ್ಣು ಬಾಯಿ ಬಿಟ್ಟು ನೋಡಿ, ಮುದ್ದಾಗಿ ನಗುತ್ತಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: ಗ್ಲಾಸ್‌ನಲ್ಲಿದ್ದ ನೀರು ಚೆಲ್ಲದೇ ಕಿತ್ತಳೆ ಹಣ್ಣು ಹೊರತೆಗೆದ ಬಾಲಕಿ, ಈಕೆ ಬಳಸಿದ ಟ್ರಿಕ್ಸ್ ನೋಡಿ

ನವೆಂಬರ್ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ಭಾರತದ ನಿಜವಾದ ಗುರುತು, ಮಹಿಳೆಯರಿಗೆ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಹೆಣ್ಣು ಮಕ್ಕಳನ್ನು ಪೂಜಿಸುವ ದೇಶದಲ್ಲಿ ಪ್ರತಿದಿನವು ನವರಾತ್ರಿಯೇ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ ಸನಾತನ ಧರ್ಮ ಸಂಸ್ಕೃತಿಗೆ ಜಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಡೆವಿಲ್’ ಸಿನಿಮಾ ಶೂಟಿಂಗ್ ಹೀಗಿತ್ತು ನೋಡಿ: ವಿಡಿಯೋ ಬಿಡುಗಡೆ
‘ಡೆವಿಲ್’ ಸಿನಿಮಾ ಶೂಟಿಂಗ್ ಹೀಗಿತ್ತು ನೋಡಿ: ವಿಡಿಯೋ ಬಿಡುಗಡೆ
ಹಳೇಬೀಡು ದೇಗುಲದಲ್ಲೂ ಭದ್ರತಾ ಲೋಪ, ಸಿಸಿಟಿವಿ ಕ್ಯಾಮರಾಗಳೂ ನಿಷ್ಕ್ರಿಯ!
ಹಳೇಬೀಡು ದೇಗುಲದಲ್ಲೂ ಭದ್ರತಾ ಲೋಪ, ಸಿಸಿಟಿವಿ ಕ್ಯಾಮರಾಗಳೂ ನಿಷ್ಕ್ರಿಯ!
ಸಂಚಾರ ಪೊಲೀಸರಿಂದ ವಿನೂತನ ಅಭಿಯಾನ: ಒಂದು ದಿನ ಸಂಚಾರ ಪೊಲೀಸ್ ಆಗುವ ಅವಕಾಶ​
ಸಂಚಾರ ಪೊಲೀಸರಿಂದ ವಿನೂತನ ಅಭಿಯಾನ: ಒಂದು ದಿನ ಸಂಚಾರ ಪೊಲೀಸ್ ಆಗುವ ಅವಕಾಶ​
ಮತ್ತೊಂದು ಟಾಸ್ಕ್ ಸೋಲಿಸಿದ ಗಿಲ್ಲಿ: ಇಲ್ಲಿ ಸಮಸ್ಯೆ ಯಾರದ್ದು?
ಮತ್ತೊಂದು ಟಾಸ್ಕ್ ಸೋಲಿಸಿದ ಗಿಲ್ಲಿ: ಇಲ್ಲಿ ಸಮಸ್ಯೆ ಯಾರದ್ದು?
ದೆಹಲಿ ಬ್ಲಾಸ್ಟ್​ನಲ್ಲಿ ರಾಜಕಾರಣದ ವಾಸನೆ ಬರ್ತಿದೆ: ಶಾಸಕ ಚನ್ನಬಸಪ್ಪ
ದೆಹಲಿ ಬ್ಲಾಸ್ಟ್​ನಲ್ಲಿ ರಾಜಕಾರಣದ ವಾಸನೆ ಬರ್ತಿದೆ: ಶಾಸಕ ಚನ್ನಬಸಪ್ಪ
ಜೀ ಕನ್ನಡ: ರಾಧಿಕಾ ಪಂಡಿತ್ ಸಿನಿಮಾ ಟೈಟಲ್​ನಲ್ಲೇ ಬರ್ತಿದೆ ಹೊಸ ಧಾರಾವಾಹಿ
ಜೀ ಕನ್ನಡ: ರಾಧಿಕಾ ಪಂಡಿತ್ ಸಿನಿಮಾ ಟೈಟಲ್​ನಲ್ಲೇ ಬರ್ತಿದೆ ಹೊಸ ಧಾರಾವಾಹಿ
ಸಿಎಂ ಸಿದ್ದರಾಮಯ್ಯ ದೆಹಲಿ ಪ್ರಯಾಣ ರಹಸ್ಯ ಬಿಚ್ಚಿಟ್ಟ ಬಸವರಾಜ ರಾಯರೆಡ್ಡಿ1
ಸಿಎಂ ಸಿದ್ದರಾಮಯ್ಯ ದೆಹಲಿ ಪ್ರಯಾಣ ರಹಸ್ಯ ಬಿಚ್ಚಿಟ್ಟ ಬಸವರಾಜ ರಾಯರೆಡ್ಡಿ1
ವಿದ್ಯಾವಂತರೇ ಟೆರರಿಸ್ಟ್​: ಮಾಜಿ ಸಂಸದ ಪ್ರತಾಪ್​ ಸಿಂಹ ಏನಂದ್ರು?
ವಿದ್ಯಾವಂತರೇ ಟೆರರಿಸ್ಟ್​: ಮಾಜಿ ಸಂಸದ ಪ್ರತಾಪ್​ ಸಿಂಹ ಏನಂದ್ರು?
ಟನ್​ ಕಬ್ಬಿಗೆ 3500ಗೆ ರೈತರ ಪಟ್ಟು: ವಿಜಯಪುರ - ಬೆಳಗಾವಿ ಹೆದ್ದಾರಿ ಬಂದ್
ಟನ್​ ಕಬ್ಬಿಗೆ 3500ಗೆ ರೈತರ ಪಟ್ಟು: ವಿಜಯಪುರ - ಬೆಳಗಾವಿ ಹೆದ್ದಾರಿ ಬಂದ್
ದೆಹಲಿ ನಿಗೂಢ ಸ್ಫೋಟ, ಘಟನೆ ವೇಳೆಯ ವಿಡಿಯೋ ಇಲ್ಲಿದೆ
ದೆಹಲಿ ನಿಗೂಢ ಸ್ಫೋಟ, ಘಟನೆ ವೇಳೆಯ ವಿಡಿಯೋ ಇಲ್ಲಿದೆ