AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮಗನ ಯೂಟ್ಯೂಬ್ ಚಾನೆಲ್‌ ಪ್ರಚಾರಕ್ಕೆ ತನ್ನ ಟ್ಯಾಕ್ಸಿಯಲ್ಲಿ ಕ್ಯೂ ಆರ್ ಕೋಡ್ ಅಳವಡಿಸಿಕೊಂಡ ತಂದೆ

ಹೆತ್ತವರಿಗೆ ಮಕ್ಕಳೇ ಪ್ರಪಂಚ. ಹೀಗಾಗಿ ಮಕ್ಕಳ ಸಂತೋಷಕ್ಕಾಗಿ ತಂದೆ ತಾಯಿ ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾರೆ. ಮುಂಬೈನಲ್ಲಿ ಟ್ಯಾಕ್ಸಿ ಓಡಿಸಿ ಜೀವನ ನಡೆಸುತ್ತಿರುವ ವ್ಯಕ್ತಿಯೊಬ್ಬರು ತನ್ನ ಮಗನ ಯೂಟ್ಯೂಬ್ ಚಾನೆಲ್‌ಗೆ ವಿಭಿನ್ನವಾಗಿ ಬೆಂಬಲ ನೀಡಿದ್ದಾರೆ. ಮಗನ ವೃತ್ತಿಜೀವನಕ್ಕೆ ಸದಾ ಬೆಂಬಲ ನೀಡುವ ಈ ತಂದೆಯ ನವೀನ ವಿಧಾನವು ಎಲ್ಲರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಮಗನ ಯೂಟ್ಯೂಬ್ ಚಾನೆಲ್‌ ಪ್ರಚಾರಕ್ಕೆ ತನ್ನ ಟ್ಯಾಕ್ಸಿಯಲ್ಲಿ ಕ್ಯೂ ಆರ್ ಕೋಡ್ ಅಳವಡಿಸಿಕೊಂಡ ತಂದೆ
ಮುಂಬೈ ಟ್ಯಾಕ್ಸಿ ಡ್ರೈವರ್‌Image Credit source: Twitter
ಸಾಯಿನಂದಾ
|

Updated on:Nov 05, 2025 | 11:35 AM

Share

ನಾವಿಂದು ಡಿಜಿಟಲ್ (Digital) ಯುಗದಲ್ಲಿದ್ದೇವೆ. ಹೀಗಾಗಿ ಎಲ್ಲಿ ನೋಡಿದರಲ್ಲಿ ಡಿಜಿಟಲ್ ಪಾವತಿಗಳು. ಸಾಮಾನ್ಯವಾಗಿ ನೀವು ಆಟೋ, ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವಾಗ ಚಾಲಕನ ಸೀಟಿನ ಹಿಂಭಾಗದಲ್ಲಿ ಕ್ಯೂ ಆರ್ ಕೋಡ್ ಹಾಕಿರುವುದನ್ನು ಗಮನಿಸಿದ್ದೀರಬಹುದು. ಈ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡುತ್ತೇವೆ. ಆದ್ರೆ ಮುಂಬೈ ಟ್ಯಾಕ್ಸಿ ಡ್ರೈವರ್ (Mumbai taxi driver) ಈ ಕ್ಯೂ ಆರ್ ಕೋಡ್‌ನ್ನು ಮಗನ ವೃತ್ತಿಜೀವನದ ಬೆಂಬಲಕ್ಕಾಗಿ ಬಳಸಿದ್ದಾರೆ. ಸೀಮಿತ ಸಂಪನ್ಮೂಲಗಳ ನಡುವೆ ಉದ್ಯಮಶೀಲಾ ಮನೋಭಾವದ ಪ್ರಬಲ ಉದಾಹರಣೆಯಾಗಿ ಈ ವ್ಯಕ್ತಿ ನಿಂತಿದ್ದಾರೆ. ಅದೇಗೆ ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಬಹುದು, ಉತ್ತರ ಇಲ್ಲಿದೆ.

ಟ್ಯಾಕ್ಸಿ ಡ್ರೈವರ್‌ ಬುದ್ಧಿವಂತಿಕೆ ಮೆಚ್ಚಿಕೊಂಡ ನೆಟ್ಟಿಗರು

ಮಾರ್ಕೆಟಿಂಗ್ ವೃತ್ತಿಯಲ್ಲಿರುವ ದಿವ್ಯೂಶಿ ಎಂಬ ವ್ಯಕ್ತಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಮುಂಬೈ ಟ್ಯಾಕ್ಸಿ ಡ್ರೈವರ್ ಒಬ್ಬರು ಮಗನ ಯೂಟ್ಯೂಬ್ ಚಾನೆಲ್ ಟ್ರಾಫಿಕ್ ಮತ್ತು ವ್ಯೂಗಳನ್ನು ತರುವಲ್ಲಿ ಹೇಗೆ ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಟ್ಯಾಕ್ಸಿ ಡ್ರೈವರ್ ಕುಳಿತಿರುವ ಸೀಟಿನ ಹಿಂಭಾಗದಲ್ಲಿರುವ ಕ್ಯೂ ಆರ್ ಕೋಡ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ ಇದೇ ಗ್ರೈಂಡ್ ಸಂಸ್ಕೃತಿ ಅಂತ ನನಗೆ ತುಂಬಾ ಹೆಮ್ಮೆ ಆಗ್ತಿದೆ. ಸ್ಥಳೀಯ ಕಪ್ಪು ಮತ್ತು ಹಳದಿ ಬಣ್ಣದ ಕ್ಯಾಬ್‌ನ ಹಿಂಭಾಗದಲ್ಲಿ ಹತ್ತಿದೆ. ಮುಂಭಾಗದ ಸೀಟಿನಲ್ಲಿ ಕ್ಯೂಆರ್ ಕೋಡ್ ನೇತಾಡುತ್ತಿರುವುದನ್ನು ನಾನು ನೋಡಿದೆ. ಅದು ಪಾವತಿ ಕೋಡ್ ಎಂದು ನಾನು ಭಾವಿಸಿದ್ದು, ಈ ಬಗ್ಗೆ ನಾನು ಚಾಲಕನನ್ನು ಕೇಳಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಈ ಕೋಡ್ ನನ್ನ ಮಗನೇ ನಿರ್ಮಿಸಿರುವ ರ‍್ಯಾಪ್ ಸಂಗೀತವನ್ನು ಪ್ರದರ್ಶಿಸುವ ಯೂಟ್ಯೂಬ್ ಚಾನೆಲ್‌ಗೆ ನೇರ ಲಿಂಕ್ ಆಗಿದೆ ಎಂದರು. ಆ ವ್ಯಕ್ತಿಯನ್ನು ನೋಡುವಾಗ ಸವಲತ್ತುಗಳಿಂದ ಬಂದವನಲ್ಲ, ಬಹುಶಃ ವಿದ್ಯಾವಂತನಲ್ಲ. ಬುದ್ಧಿವಂತ ಯೋಜನೆಯನ್ನು ಬಳಸಿಕೊಂಡು ಮಗನ ಯೂಟ್ಯೂಬ್ ಚಾನಲ್ ಪ್ರಚಾರ ಮಾಡುತಿದ್ದಾರೆ. ಈ ಕ್ಯಾಬ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರೇ ಇವರ ಮಗನ ಯೂಟ್ಯೂಬ್ ಚಾನಲ್‌ನ ನೇರ ಪ್ರೇಕ್ಷಕರಾಗಿದ್ದು, ಪ್ರತಿಯೊಬ್ಬ ಶುಲ್ಕ ಪಾವತಿಸುವ ಪ್ರಯಾಣಿಕನು ಚಾನಲ್‌ಗೆ ವೀಕ್ಷಕರಾಗಿ ಟ್ರಾಫಿಕ್ ಹಾಗೂ ವೀಕ್ಷಣೆಗಳನ್ನು ತಂದುಕೊಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಮಗಳಿಗೆ ಆಕ್ಸಿಡೆಂಟ್ ಆಗಿದೆ ಅಂದ್ರೂ ದುಡಿಮೆ ಮುಖ್ಯ ಎಂದ ಟ್ಯಾಕ್ಸಿ ಡ್ರೈವರ್; ಹೀಗೆನ್ನಲು ಕಾರಣ ಇದೆ ನೋಡಿ

ಅಕ್ಟೋಬರ್ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.9 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇಂತಹ ವಿಚಾರ ಮುಂಬೈನಲ್ಲಿ ಮಾತ್ರ ಎಂದಿದ್ದಾರೆ. ಇನ್ನೊಬ್ಬರು, ತಮ್ಮ ಮಗನ ಕೆಲಸವನ್ನು ಪ್ರಚಾರ ಮಾಡಲು ಸೃಜನಶೀಲ ಮಾರ್ಗ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮುಂಬೈ ನಿಮ್ಮನ್ನು ವಿನಮ್ರಗೊಳಿಸುವ ಹಾಗೂ ನಿಮ್ಮನ್ನು ಪ್ರೇರೇಪಿಸುವ ಒಂದು ಮಾರ್ಗವನ್ನು ಹೊಂದಿದೆ. ಜನರು ತಮ್ಮಲ್ಲಿರುವುದರಿಂದ ಅದ್ಭುತ ಕೆಲಸಗಳನ್ನು ಮಾಡುವುದನ್ನು ನೀವು ನೋಡುತ್ತೀರಿ. ಇದು ನಿಮ್ಮನ್ನು ಸ್ವಲ್ಪ ಹೆಚ್ಚು ಪ್ರೇರಣೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಮಗನ ಕೆಲಸಕ್ಕೆ ತಂದೆಯ ಬೆಂಬಲ ತುಂಬಾನೇ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:34 am, Wed, 5 November 25