AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಮಗಳಿಗೆ ಆಕ್ಸಿಡೆಂಟ್ ಆಗಿದೆ ಅಂದ್ರೂ ದುಡಿಮೆ ಮುಖ್ಯ ಎಂದ ಟ್ಯಾಕ್ಸಿ ಡ್ರೈವರ್; ಹೀಗೆನ್ನಲು ಕಾರಣ ಇದೆ ನೋಡಿ

ಬದುಕು ಒಂದೇ ರೀತಿ ಇರಲ್ಲ. ಹೀಗಾಗಿ ಕೆಲವರಿಗೆ ತನ್ನ ಕುಟುಂಬದಿಂದ ದೂರವಿದ್ದು ದುಡಿಯುವುದು ಅನಿವಾರ್ಯವಾಗಿರುತ್ತದೆ. ಇದೀಗ ಇಲ್ಲೊಬ್ಬ ಟ್ಯಾಕ್ಸಿ ಡ್ರೈವರದ್ದು ಇದೇ ರೀತಿಯ ಬದುಕು. ಮಗಳು ಅಪಘಾತಕ್ಕೀಡಾಗಿದ್ದಾಳೆಂದು ಟ್ಯಾಕ್ಸಿ ಡೈವರ್‌ಗೆ ಊರಿನಿಂದ ಕರೆ ಬಂದಿದೆ. ಅದೇ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಈ ಬಗ್ಗೆ ಹೇಳಿಕೊಂಡಿದ್ದು ಆ ಸಂದರ್ಭವನ್ನು ವಿವರಿಸಿದ್ದಾರೆ. ಈ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು,ತಂದೆ ಆಡಿದ ಮಾತು ಬಳಕೆದಾರರ ಕಣ್ಣನ್ನು ಒದ್ದೆಯಾಗಿಸಿದೆ.

Viral: ಮಗಳಿಗೆ ಆಕ್ಸಿಡೆಂಟ್ ಆಗಿದೆ ಅಂದ್ರೂ ದುಡಿಮೆ ಮುಖ್ಯ ಎಂದ ಟ್ಯಾಕ್ಸಿ ಡ್ರೈವರ್; ಹೀಗೆನ್ನಲು ಕಾರಣ ಇದೆ ನೋಡಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on:Oct 31, 2025 | 3:47 PM

Share

ಹೆಚ್ಚಿನವರು ತಮ್ಮ ಹೆಂಡ್ತಿ ಮಕ್ಕಳಿಗಾಗಿ ದೂರದ ಬೆಂಗಳೂರಲ್ಲೋ, ಮುಂಬೈಯಲ್ಲೋ ಸಣ್ಣ ಪುಟ್ಟ ಉದ್ಯೋಗ (Job) ಮಾಡ್ತಾರೆ. ತನ್ನ ದುಡಿಮೆಯ ಹಣದಿಂದ ಹೆಂಡ್ತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆದರೆ ತನ್ನ ಊರಿನಿಂದ ತನ್ನ ಹೆಂಡ್ತಿ ಮಕ್ಕಳಿಗೆ ಸಮಸ್ಯೆಯಾಗಿದೆ ಎಂದು ಕರೆ ಬಂದರೆ ಆ ಸನ್ನಿವೇಶ ಹೇಗಿರಬಹುದು ಒಂದು ಒಮ್ಮೆ ಊಹಿಸಿ. ಮುಂಬೈನಲ್ಲಿ (Mumbai) ಟ್ಯಾಕ್ಸಿ ಓಡಿಸಿ ಜೀವನ ನಡೆಸುತ್ತಿರುವ ವ್ಯಕ್ತಿಗೆ ನಿಮ್ಮ ಮಗಳಿಗೆ ಅಪಘಾತವಾಗಿದೆ ಎನ್ನುವ ಕರೆ ಬಂದಿದೆ. ಈ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ವ್ಯಕ್ತಿಯೂ ತಂದೆಯೊಬ್ಬನ ಆತಂಕ, ಚಡಪಡಿಕೆ ಹೇಗಿತ್ತು ಎಂದು ಹೇಳಿಕೊಂಡಿದ್ದಾರೆ. ಈ ಟ್ಯಾಕ್ಸಿ ಚಾಲಕ ಹೇಳಿದ ಮಾತು ಈ ವ್ಯಕ್ತಿಯ ಮನಸ್ಸನ್ನು ನಾಟಿದೆಯಂತೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಟ್ಯಾಕ್ಸಿ ಡ್ರೈವರ್‌ ಮಾತು ಕೇಳಿ ಶಾಕ್‌ ಆದ ಪ್ರಯಾಣಿಕ

ಮೆಹುಲ್ ಆರ್ ಥಕ್ಕರ್ ಹೆಸರಿನ ಎಕ್ಸ್ ಖಾತೆಯಲ್ಲಿ ದಾದರ್‌ನಲ್ಲಿ ಕಾಳಿ-ಪೀಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅನಿರೀಕ್ಷಿತವಾಗಿ ಸಂಭವಿಸಿದ ಸನ್ನಿವೇಶವನ್ನು ವ್ಯಕ್ತಿಯೊಬ್ಬ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ನಲ್ಲಿ ವ್ಯಕ್ತಿಯೊಬ್ಬರು, ನಾನು ಮುಂಬೈನ ದಾದರ್‌ನಲ್ಲಿ ಕಾಳಿ-ಪೀಲಿ ಟ್ಯಾಕ್ಸಿಯಲ್ಲಿದ್ದೆ.. ದಾರಿ ಮಧ್ಯದಲ್ಲಿ, ಚಾಲಕನಿಗೆ ಅವನ ಊರಿಂದ ಕರೆ ಬಂತು. ಅವನ ಮಗಳು ಅಪಘಾತಕ್ಕೀಡಾಗಿದ್ದಳು. ಭಯವು ತಕ್ಷಣ ಅವನನ್ನು ಆವರಿಸಿಕೊಳ್ಳುವುದನ್ನು ನಾನು ನೋಡಿದೆ. ನಾನು ಅವನನ್ನು ಕ್ಯಾಬ್ ನಿಲ್ಲಿಸಲು ಕೇಳಿದಾಗ, ಅವನ ಕೈಗಳು ನಡುಗುತ್ತಿದ್ದವು, ಅವನ ಧ್ವನಿಯೇ ಬರದಂತೆ ಆಯಿತು. ಅವನು ತಕ್ಷಣ ತನ್ನ ಹೆಂಡತಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿ ಸ್ಥಳಕ್ಕೆ ಹೋಗುವಂತೆ ಹೇಳಿದನು ಎಂದು ಆ ಸಂದರ್ಭವನ್ನು ವಿವರಿಸಿದ್ದಾರೆ.

ಇದನ್ನೂ ಓದಿ
Image
ಲಂಡನ್‌ನಲ್ಲಿ ಬಿಹಾರಿ ವ್ಯಕ್ತಿಯ ಕೈ ಹಿಡಿದ ಸಮೋಸಾ ವ್ಯಾಪಾರ
Image
ಸ್ಟಾರ್ಟ್ಅಪ್‌ನಲ್ಲಿನ ಕಹಿ ಅನುಭವ ಹಂಚಿಕೊಂಡ ಇಂಟರ್ನ್
Image
ನಾಲ್ಕು ನಿಮಿಷ ಮೊದಲೇ ಯಾಕೆ ಲಾಗ್ ಔಟ್ ಆಗಿದ್ದೀರಿ?
Image
ಈ ಟೈಮ್‌ನಲ್ಲಿ ಕೆಲ್ಸದಿಂದ ವಜಾಗೊಳಿಸಿದ್ರೆ ತೊಂದರೆಯೇ ಹೆಚ್ಚು ಎಂದ ವ್ಯಕ್ತಿ

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಆ ಬಳಿಕ ನಾವು ಅವನಿಗೆ ಮಾಹಿತಿ ನೀಡಿದ ವ್ಯಕ್ತಿಯೊಂದಿಗೆ ಮಾತನಾಡಿದೆವು. ಅದೃಷ್ಟವಶಾತ್, ಗಾಯ ಅಷ್ಟೇನು ದೊಡ್ಡದಾಗಿರಲಿಲ್ಲ. ಅವಳು ಗಾಯಗೊಂಡಿದ್ದಳು (ಬಹುಶಃ ಕೈ ಮುರಿದಿರಬಹುದು). ನಾನು ಮಾಡಬಹುದಾದ ಏಕೈಕ ವಿಷಯವೆಂದರೆ ಅವನಿಗೆ ಗಾಬರಿಯಾಗುವ ಬದಲು ನಿಧಾನವಾಗಿ ಉಸಿರಾಡಲು ಹೇಳಿದೆ. ಆದರೆ ಆ ನಂತರದಲ್ಲಿ ಅವನು ನಾನು ಮನೆಗೆ ಹೋಗಬೇಕು. ನನ್ನ ಕುಟುಂಬಕ್ಕೆ ಈಗ ಅಲ್ಲಿ ನನ್ನ ಅಗತ್ಯವಿದೆ. ಆದರೆ ನಾನು ಹೋದರೆ, ನಾನು 10 ದಿನಗಳವರೆಗೆ ಏನು ಆದಾಯವೇ ಇರಲ್ಲ. ಮನೆಗೆ ಹೋದರೆ ಹಣ ಬೇಕಾಗುತ್ತದೆ ಎಂದನು ಈ ಮಾತು ನನ್ನ ಮನಸ್ಸಿಗೆ ತಟ್ಟಿತು ಎಂದು ಹೇಳಿದ್ದಾರೆ.

ನಾವು ಆಗಾಗ್ಗೆ ಕೆಲಸ-ಜೀವನ ಸಮತೋಲನ, ರಜೆಗಳು, ಸಿಎಲ್, ಪಿ ಎಲ್, ಮಾನಸಿಕ ಆರೋಗ್ಯ ದಿನಗಳ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮ ಸುತ್ತಲೂ ಈ ಆಫರ್ ಇಲ್ಲದೇ ದುಡಿಯುವ. ಪಾವತಿಸಿದ ರಜೆಗಳಿಲ್ಲ, ಸುರಕ್ಷತಾ ಜಾಲವಿಲ್ಲ, ಬ್ಯಾಕಪ್ ಯೋಜನೆಯಂತೂ ಇಲ್ಲವೇ ಇಲ್ಲ. ದಿನದಿಂದ ದಿನಕ್ಕೆ ಇವರ ಜೀವನವು ನಿಜವಾಗಿಯೂ ಎಲ್ಲರಿಗೂ ವಿಭಿನ್ನವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಲಂಡನ್‌ನಲ್ಲಿ ಬಿಹಾರಿ ವ್ಯಕ್ತಿಯ ಕೈ ಹಿಡಿದ ಸಮೋಸಾ ವ್ಯಾಪಾರ, ದಿನದ ಗಳಿಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ

ಅಕ್ಟೋಬರ್ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮಗಳಿಗಿಂತ ಕೆಲಸ ಮುಖ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ನೀವು ಆ ಟ್ಯಾಕ್ಸಿ ಡ್ರೈವರ್ ಗೆ ಸಹಾಯ ಮಾಡಬಹುದಿತ್ತು ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಮ ಮಾತು ಮನಸ್ಸು ಮುಟ್ಟುವಂತಿದೆ. ನಿಜಕ್ಕೂ ಬದುಕು ಹೀಗೇನೆ ಅಲ್ವಾ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Fri, 31 October 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ