AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ನಿಮಿಷ ಮೊದಲೇ ಯಾಕೆ ಲಾಗ್ ಔಟ್ ಆಗಿದ್ದೀರಿ? ಎಚ್​ಆರ್​​ ಪ್ರಶ್ನೆಗೆ ಉದ್ಯೋಗಿ ತಬ್ಬಿಬ್ಬು

ಕೆಲಸದ ಸಮಯ ಮುಗಿಯುವ ಮುನ್ನವೇ ಲಾಗ್‌ಔಟ್ ಆದ ಉದ್ಯೋಗಿಯನ್ನು ಎಚ್​​ಆರ್ ಪ್ರಶ್ನಿಸಿದ ಪೋಸ್ಟ್ ವೈರಲ್ ಆಗಿದೆ. ಕೆಲಸ ಮುಗಿದರೂ ನಿಗದಿತ ಸಮಯದವರೆಗೂ ಇರಬೇಕೆಂಬ ನೀತಿಗೆ ಉದ್ಯೋಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕಾರ್ಪೊರೇಟ್ ನೀತಿ-ನಿಯಮಗಳು, ಉದ್ಯೋಗಿಗಳ ಸ್ವಾತಂತ್ರ್ಯ ಮತ್ತು ಕೆಲಸದ ಸಮಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ನಾಲ್ಕು ನಿಮಿಷ ಮೊದಲೇ ಯಾಕೆ ಲಾಗ್ ಔಟ್ ಆಗಿದ್ದೀರಿ? ಎಚ್​ಆರ್​​ ಪ್ರಶ್ನೆಗೆ ಉದ್ಯೋಗಿ ತಬ್ಬಿಬ್ಬು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 30, 2025 | 11:06 AM

Share

HR (Human resources) ಕಂಪನಿಯಲ್ಲಿ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಲು ಇರುವವರು, ಒಂದು ವೇಳೆ ಕಂಪನಿಯ ರೂಲ್ಸ್​​​ಗಳನ್ನು ಫಾಲೋ ಮಾಡದ್ದಿದ್ದರೆ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಅಂತಹದೇ ಒಂದು ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಮೆರಿಕ ಮೂಲದ ಕಂಪನಿಯ ಭಾರತೀಯ ಎಚ್​ಆರ್ ತನ್ನ ಉದ್ಯೋಗಿಗೆ ಕಂಪನಿಯ ನೀತಿ-ನಿಯಮದ ಬಗ್ಗೆ ಪಾಠ ಮಾಡಿರುವ ಪೋಸ್ಟ್​ವೊಂದು ವೈರಲ್​ ಆಗಿದೆ. ಪೋಸ್ಟ್​​ನಲ್ಲಿ ಉದ್ಯೋಗಿಯೊಬ್ಬರು ಕೆಲಸದ ಸಮಯ ಮುಗಿಯುವ ಮೊದಲೇ ಲಾಗ್ಔಟ್​​ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಈ ಪೋಸ್ಟ್​​ ಬಗ್ಗೆ ಸೋಶಿಯಲ್​​ ಮೀಡಿಯದಲ್ಲಿ ಚರ್ಚೆಗಳು ನಡೆಯುತ್ತಿದೆ.

ವೈರಲ್​​​ ಆಗಿರುವ ಪೋಸ್ಟ್​​ನಲ್ಲಿ ಹೀಗಿವೆ, ” ಇಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, 6:30 ಕ್ಕಿಂತ ಮೊದಲು ಯಾಕೆ ಲಾಗ್ ಔಟ್ ಆಗಿದ್ದೀರಿ? ಎಂದು ನನ್ನ ಎಚ್​​ಆರ್​​ ಕೇಳಿದ್ದಾರೆ. ಇದಕ್ಕೆ ನಾನು, ಸರ್​​ ನನ್ನ ಕೆಲಸ 4 ನಿಮಿಷಕ್ಕೆ ಮುಗಿದ್ದಿದೆ, ಲಾಗಿನ್ ಸಮಯ ಬೆಳಿಗ್ಗೆ 9:18ಕ್ಕೆ ಎಂದು ಹೇಳಿದೆ, ಆದರೆ ಎಚ್​ಆರ್​ ಇಲ್ಲ ಇದನ್ನು ಕೇಳಲು ನಾನು ತಯಾರಿಲ್ಲ, ನೀವು ನಿಮ್ಮ ಇಚ್ಛೆಯಂತೆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ನಿಮ್ಮ ಶಿಫ್ಟ್ 6:30 ಕ್ಕೆ ಕೊನೆಗೊಳ್ಳುತ್ತದೆ, ಅದ್ರೂ ಯಾಕೆ ಬೇಗ ಲಾಗ್​​​ಔಟ್​​ ಆಗಿದ್ದೀರಾ? ಎಂದು ಕೇಳಿದ್ದಾರೆ. ಎಚ್​ಆರ್ ಅವರ​ ಈ ಪ್ರಶ್ನೆ ನನಗೆ ಸ್ವಲ್ಪ ಕೋಪ ಬಂತು, ಸರ್​ ಇತರರು ಸಹ ಬೇಗನೆ ಕೆಲಸ ಮುಗಿಸುತ್ತಾರೆ. ಆದ್ರೂ ಎಲ್ಲರೂ 6:30 ಕ್ಕೆ ಲಾಗ್​​ಔಟ್​​​ ಆಗುತ್ತಾರೆ ಎಂದು ಉತ್ತರಿಸಿದೆ. ಆದ್ರೂ ನಮ್ಮ ಎಚ್​ಆರ್​​ ಈ ಯಾವುದನ್ನೂ ಕೂಡ ಕಿವಿಗೆ ಹಾಕಿಕೊಳ್ಳದೇ, ಇತರರಂತೆ ನಿಮ್ಮ ಶಿಫ್ಟ್​​​ ಸಮಯದಲ್ಲೇ ಬನ್ನಿ ಎಂದು ಎಚ್​ಆರ್​​ ಹೇಳಿದ್ದಾರೆ. ಆದರೆ ನಾನು 9 ಗಂಟೆ ಕೆಲಸ ಮಾಡಿಯೇ ಮಾಡುತ್ತೇನೆ. ಯಾವ ಟೈಮ್​​ ಆದ್ರೆ ಏನು? ಎಂದು ಪೋಸ್ಟ್​​ನಲ್ಲಿ ಉದ್ಯೋಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಈ ಟೈಮ್‌ನಲ್ಲಿ ಕೆಲ್ಸದಿಂದ ವಜಾಗೊಳಿಸಿದ್ರೆ ತೊಂದರೆಯೇ ಹೆಚ್ಚು ಎಂದ ಸಾಫ್ಟ್‌ವೇರ್‌ ಇಂಜಿನಿಯರ್

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

Untitled Design

ಉದ್ಯೋಗಿ ನಾನು ಈಗಲೇ ರಾಜೀನಾಮೆಯನ್ನು ನೀಡುತ್ತೇನೆ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಪೋಸ್ಟ್​​ಗೆ ಸೋಶಿಯಲ್​ ಮೀಡಿಯಾದಲ್ಲಿ ವಿಭಿನ್ನ ರೀತಿಯಲ್ಲಿ ಬಳಕೆದಾರರು ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರ ಇದು ಎಚ್​ಆರ್​ ಅವರ ಅನಗತ್ಯ ನಿರ್ವಹಣೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನನ್ನ ಮೊದಲ ಕಂಪನಿಯಲ್ಲಿ ಈ ನಿಯಮವಿತ್ತು ಮತ್ತು ಬಹುತೇಕ ಎಲ್ಲರೂ ಅದನ್ನು ಅನುಸರಿಸಿದರು ಎಂದು ಹೇಳಿದ್ದಾರೆ. ನನ್ನ ಕಂಪನಿ ಈ ರೀತಿ ಸಮಯವನ್ನು ಟ್ರ್ಯಾಕ್ ಮಾಡಿದ್ರೆ, ನಾನು ಜೈಲಿನಲ್ಲಿರುತ್ತೇನೆ. ದಯವಿಟ್ಟು ರಾಜೀನಾಮೆ ನೀಡಿ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್​ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

​​​​​

ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ಕಾರುಣ್ಯ ಮುಖ ನೋಡಿ ಸಾಲ ಕೊಡಿ ಎಂದಿದ್ದರು, ಈಗ ಧಮ್ಕಿ ಹಾಕ್ತಾರೆ: ಪ್ರಜ್ವಲ್
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ನಮ್ಮ ಮೆಟ್ರೋ ಯೆಲ್ಲೋ ಲೈನ್‌ನಲ್ಲಿ 7ನೇ ರೈಲಿನ ಸಂಚಾರ ಶುರು
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ಲೈಟ್​ನಲ್ಲಿ ಕಾಣಿಸಿಕೊಂಡ ಹೊಗೆ, ಪತ್ರಿಕಾಗೋಷ್ಠಿ ಮೊಟಕುಗೊಳಿಸಿದ ಮಾಯಾವತಿ
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​
ನಗರಸಭೆ ಪೌರಾಯುಕ್ತೆಗೆ ನಿಂದನೆ​​: ರಾಜೀವ್​ ಗೌಡ ಪರ ಮುನಿಯಪ್ಪ ಬ್ಯಾಟಿಂಗ್​​