Video: ಈ ಟೈಮ್‌ನಲ್ಲಿ ಕೆಲ್ಸದಿಂದ ವಜಾಗೊಳಿಸಿದ್ರೆ ತೊಂದರೆಯೇ ಹೆಚ್ಚು ಎಂದ ಸಾಫ್ಟ್‌ವೇರ್ ಇಂಜಿನಿಯರ್
ಕೈಯಲ್ಲೊಂದು ಉದ್ಯೋಗ ಇದ್ರೇನೆ ಮರ್ಯಾದೆ. ಆದರೆ ಕಾರ್ಪೋರೇಟ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡೋ ಉದ್ಯೋಗಿಗಳನ್ನು ಯಾವಾಗ ಬೇಕಾದ್ರೂ ವಜಾಗೊಳಿಸಬಹುದು. ಆದರೆ ಇಲ್ಲೊಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಹಬ್ಬದ ಸೇರಿದಂತೆ ಇನ್ನಿತ್ತರ ಸಂದರ್ಭದಲ್ಲಿ ಉದ್ಯೋಗಿಗಳನ್ನು ಕೆಲ್ಸದಿಂದ ವಜಾ ಗೊಳಿಸಿದ್ರೆ ಆ ಸಂದರ್ಭ ಹೇಗಿರಬಹುದು ಎಂದು ಹೇಳಿದ್ದಾರೆ. ಈ ಹೃದಯಸ್ಪರ್ಶಿ ಪೋಸ್ಟ್ ವೈರಲ್ ಆಗಿದೆ.

ಸಂಬಳ ಕಡಿಮೆಯಿರಲಿ, ಹೆಚ್ಚಿರಲಿ ಕೈಯಲ್ಲೊಂದು ಕೆಲಸವಿದ್ದರೆ (job) ಒಂದು ಮರ್ಯಾದೆ. ಆದರೆ ಕೆಲವೊಮ್ಮೆ ಕಂಪನಿಗಳು ಉದ್ಯೋಗಿ ಕೆಲಸದಿಂದ ವಜಾಗೊಳಿಸಲಾಗುತ್ತದೆ. ಈ ವೇಳೆ ಕೆಲಸ ಕಳೆದುಕೊಂಡ ನೋವಿನ ನಡುವೆ ಮುಂದೇನು ಎನ್ನುವ ಪ್ರಶ್ನೆಯೊಂದು ಕಾಡುತ್ತದೆ. ಅದಲ್ಲದೇ ಸಂಬಂಧಿಕರ ಚುಚ್ಚು ಮಾತುಗಳನ್ನು ಸಹಿಸಿಕೊಳ್ಳುವುದು ಕಷ್ಟ. ಸಾಫ್ಟ್‌ವೇರ್ ಇಂಜಿನಿಯರ್ (software engineer) ಒಬ್ಬರು ಹಬ್ಬದ ಋತುವಿನ ವಜಾಗಳು ಜನರ ಭಾವನಾತ್ಮಕವಾಗಿ ಹೇಗೆ ಪರಿಣಾಮ ಬೀರುತ್ತವೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಈ ಪ್ರಮುಖ ಸಂದರ್ಭದಲ್ಲಿ ಕೆಲ್ಸದಿಂದ ವಜಾಗೊಳಿಸುವುದು ಜೀವನದ ಅತ್ಯಂತ ಕ್ರೂರ ಸಮಯ. ಇದು ವ್ಯಕ್ತಿಯ ಮನಸ್ಥಿತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈ ವ್ಯಕ್ತಿಯ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.
ಟೆಕ್ ವೃತ್ತಿಪರರಾದ ಜ್ಯೋತ್ಸನಾ ಗುಪ್ತಾ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಗೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕೆಲಸದಿಂದ ತೆಗೆದುಹಾಕುವುದರಿಂದ ಹೆಚ್ಚು ಹಾನಿಯಾಗುತ್ತದೆ ಶೀರ್ಷಿಕೆಯನ್ನು ನೀಡಲಾಗಿದೆ. ಜೀವನದ ದೊಡ್ಡ ಕ್ಷಣಗಳಿಗೆ ತಯಾರಿ ನಡೆಸುತ್ತಿರುವಾಗ ಜನರು ತಮ್ಮ ಉದ್ಯೋಗ ಕಳೆದುಕೊಳ್ಳುವುದನ್ನು ನೋಡುವುದು ನೋವಿನ ಸಂಗತಿ. ಆದರೆ ಹಬ್ಬವನ್ನು ಜನರು ಯಾವುದಕ್ಕೂ ಚಿಂತಿಸದೇ ಆಚರಿಸಬೇಕು ಮದುವೆಗೆ ಒಂದು ತಿಂಗಳ ಮೊದಲು ಕೆಲಸ ಕಳೆದುಕೊಂಡ ಜನರನ್ನು ನಾನು ಬಲ್ಲೆ. ಹೊಸ ವರ್ಷವನ್ನು ಆಚರಿಸಲು ಸಾಧ್ಯವಾಗದ ಜನರನ್ನು ನಾನು ಬಲ್ಲೆ. ಇದು ಎಲ್ಲಕ್ಕಿಂತ ಕ್ರೂರ ಸಮಯ. ಹಬ್ಬದ ಸಮಯದಲ್ಲಿ ಕೆಲಸದಿಂದ ತೆಗೆದುಹಾಕುವುದರಿಂದ ವೃತ್ತಿಜೀವನಕ್ಕಿಂತ ಹೆಚ್ಚಿನ ತೊಂದರೆ ಉಂಟಾಗುತ್ತದೆ ಎಂದು ಬರೆದುಕೊಳ್ಳಲಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Layoffs in November and December hurt the most. Right before the festive season, when people should be celebrating, not worrying.
I know people who lost their jobs a month before their wedding. I know people who couldn’t celebrate New Year because of it. It’s the cruelest timing…
— Jyotsna Gupta (@imJenal) October 28, 2025
ಇದನ್ನೂ ಓದಿ:ಲವ್ ಬ್ರೇಕಪ್ ಆಗಿದೆ, ಕೆಲ್ಸ ಮಾಡೋಕೆ ನನ್ನಿಂದ ಆಗ್ತಿಲ್ಲ; ವಿಚಿತ್ರ ಕಾರಣ ಹೇಳಿ ರಜೆ ಕೇಳಿದ ಉದ್ಯೋಗಿ
ಈ ವಿಡಿಯೋ ಐವತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮದುವೆಗೆ ಕೆಲವು ದಿನ ಇರುವಾಗಲೇ ಕೆಲಸದಿಂದ ತೆಗೆದುಹಾಕಲ್ಪಟ್ಟ ಒಬ್ಬ ವ್ಯಕ್ತಿಯನ್ನು ನಾನು ಬಲ್ಲೆ ಎಂದಿದ್ದಾರೆ. ಇನ್ನೊಬ್ಬರು, ಈಗಿನ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ವ್ಯಕ್ತಿಗಳಿಗೆ ತಮ್ಮ ಉದ್ಯೋಗದ ಬಗ್ಗೆ ಖತಾರಿ ಇಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಕೆಲಸದಿಂದ ತೆಗೆದು ಹಾಕುವುದು ನೇಮಕದಷ್ಟೇ ಸತ್ಯ. ಕೆಲಸದಲ್ಲಿರುವಾಗ ಕೆಟ್ಟದಕ್ಕೂ ಸಿದ್ಧರಾಗಿರುವುದು ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:12 pm, Wed, 29 October 25








