Video: ಲವ್ ಬ್ರೇಕಪ್ ಆಗಿದೆ, ಕೆಲ್ಸ ಮಾಡೋಕೆ ನನ್ನಿಂದ ಆಗ್ತಿಲ್ಲ; ವಿಚಿತ್ರ ಕಾರಣ ಹೇಳಿ ರಜೆ ಕೇಳಿದ ಉದ್ಯೋಗಿ
ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ತಮ್ಮ ಬಾಸ್ ಬಳಿ ರಜೆ ಕೇಳುವುದೇ ತಲೆ ನೋವಿನ ವಿಚಾರ. ಸುಳ್ಳು ಕಾರಣಗಳನ್ನು ಹೇಳಿ ರಜೆ ಕೇಳುತ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ ರಜೆಯ ಸಲುವಾಗಿ ಹೇಳಿದ ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಹೌದು, ಉದ್ಯೋಗಿಯೊಬ್ಬರು ರಜೆಗಾಗಿ ಲವ್ ಬ್ರೇಕಪ್ ಕಾರಣವನ್ನು ನೀಡಿದ್ದು ಈ ಪೋಸ್ಟ್ ಸದ್ಯ ವೈರಲ್ ಆಗಿದೆ.

ಉದ್ಯೋಗದಲ್ಲಿರುವವರಿಗೆ (Job) ರಜೆ ಕೇಳುವುದೇ ದೊಡ್ಡ ಸವಾಲಿನ ಕೆಲಸ. ಹುಷಾರಿಲ್ಲ ಅಂದ್ರೂ ರಜೆ ಸಿಗಲ್ಲ, ಮನೆಯಲ್ಲಿ ಫಂಕ್ಷನ್ ಅಂದ್ರೂ ರಜೆ ಸಿಗೋದೇ ಇಲ್ಲ. ರಜೆ ಕೊಟ್ಟರೂ, ಆ ದಿನ ಕೆಲಸವನ್ನು ಹಿಂದಿನ ದಿನ ಮುಗಿಸಿಕೊಟ್ಟು ಹೋಗ್ಬೇಕಾಗುತ್ತದೆ. ಕೆಲವೊಮ್ಮೆ ಉದ್ಯೋಗಿಗಳು ಉಪಾಯದಿಂದಲೇ ಕೆಲ ಕಾರಣಗಳನ್ನು ಹೇಳಿ ರಜೆ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಿ ಹಿಂದೆ ಮುಂದೆ ನೋಡದೇ ಕಾರಣ ಹೇಳಿ ರಜೆ ಕೋರಿದ್ದಾನೆ. ಹೌದು, ಲವ್ ಬ್ರೇಕಪ್ (Love breakup) ಆಗಿದ್ದು, ಕೆಲಸ ಮಾಡಲು ಆಗ್ತಿಲ್ಲ ಎಂದು ಕಾರಣ ಕೇಳಿ ಬಾಸ್ ಬಳಿ ರಜೆ ಕೇಳಿದ್ದಾನೆ.
ʼನಾಟ್ ಡೇಟಿಂಗ್ʼ ಎಂಬ ಸಂಸ್ಥೆಯ ಸಿಇಒ ಜಸ್ವೀರ್ ಸಿಂಗ್ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬ ರಜೆ ಬಗ್ಗೆ ಉಲ್ಲೇಖಿಸಿ ಕಳುಹಿಸಿರುವ ಇಮೇಲ್‌ನ್ನು ಶೇರ್ ಮಾಡಿಕೊಂಡಿದ್ದಾರೆ. ಜಸ್ವೀರ್ ಸಿಂಗ್ (Jasveer singh) ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್‌ಗೆ ಅತ್ಯಂತ ಪ್ರಾಮಾಣಿಕ ರಜೆ ಕೋರಿಕೆ, ಜೆನ್‌ಝೀಗಳಿಗೆ ಯಾವುದೇ ಮುಚ್ಚುಮರೆ ಇಲ್ಲ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Got the most honest leave application yesterday. Gen Z doesn’t do filters! pic.twitter.com/H0J27L5EsE
— Jasveer Singh (@jasveer10) October 28, 2025
ಈ ಇಮೇಲ್‌ನಲ್ಲಿ ಉದ್ಯೋಗಿಯೂ ಅಕ್ಟೋಬರ್ 28ರಿಂದ ನವೆಂಬರ್ 8ರ ತನಕ ರಜೆ ಬೇಕು. ನನಗೆ ಇತ್ತೀಚೆಗಷ್ಟೆ ಲವ್ ಬ್ರೇಕಪ್ ಆಗಿದೆ. ಹೀಗಾಗಿ, ಕೆಲಸದ ಮೇಲೆ ಗಮನಹರಿಸಲು ಆಗುತ್ತಿಲ್ಲ. ನನಗೆ ಸಣ್ಣದೊಂದು ಬ್ರೇಕ್ ಬೇಕಿದೆ. ಇಂದು ನಾನು ಕೆಲಸ ಮಾಡಲಿದ್ದೇನೆ. ಆದರೆ 28ರಿಂದ 8ರವರೆಗೆ ರಜೆ ಬೇಕಿದೆ ಎಂದು ಬರೆದಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ:ಅಪ್ಪ ನನಗೆ ಅಮೆಜಾನ್‌ನಲ್ಲಿ ಕೆಲಸ ಸಿಕ್ತು; ಈ ಸಿಹಿ ಸುದ್ದಿ ಕೇಳಿ ತಂದೆ ಕೊಟ್ಟ ರಿಪ್ಲೈ ಹೇಗಿತ್ತು ನೋಡಿ
ಅಕ್ಟೋಬರ್ 28 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಇದುವರೆಗೆ 4.7 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುಖ್ಯ ಪ್ರಶ್ನೆ ಎಂದರೆ ನೀವು ರಜೆ ಮಂಜೂರು ಮಾಡಿದ್ದೀರಾ ಎಂದು ಕೇಳಿದ್ದಾರೆ. ಇನ್ನೊಬ್ಬರು, ಎರಡನೇ ಯೋಚನೇ ಇಲ್ಲದೇ ರಜೆ ಗ್ಯಾರಂಟಿ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ ನೀವು ಅವನಿಗೆ ಹೇಗೆ ಸಹಾಯ ಮಾಡಿದಿರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








