Viral: ಒಳ್ಳೆಯವರಂತೆ ಕಂಡರೂ ಸಂದರ್ಶನದಲ್ಲಿ ಅಭ್ಯರ್ಥಿಯನ್ನು ರಿಜೆಕ್ಟ್ ಮಾಡಿದ ಹಿಂದಿನ ಕಾರಣ ವಿವರಿಸಿದ ಮಹಿಳೆ
ಶಿಕ್ಷಣ ಪಡೆದುಕೊಂಡಿದ್ರೆ ಸಾಲಲ್ಲ, ಕೌಶಲ್ಯವಿದ್ರೆ ಮಾತ್ರ ಒಳ್ಳೆಯ ಕೆಲಸ ಸಿಗಲು ಸಾಧ್ಯ. ಕೌಶಲ್ಯದ ಕೊರತೆಯಿಂದಾಗಿ ಉದ್ಯೋಗ ಅಭ್ಯರ್ಥಿಯನ್ನು ತಿರಸ್ಕರಿಸಿದ್ದು, ಈ ಬಗ್ಗೆ ಮಹಿಳೆಯೊಬ್ಬರು ಪೋಸ್ಟ್ ಮಾಡಿದ್ದಾರೆ. ಸಂದರ್ಶನದಲ್ಲಿ ಕಂಪನಿಯ ಹುದ್ದೆಗೆ ತಕ್ಕ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ತಮ್ಮ ಪರಿಸ್ಥಿತಿ ಹೇಗಿತ್ತು ಎಂದಿದ್ದಾರೆ. ಈ ಪೋಸ್ಟ್‌ಗೆ ಆನ್ಲೈನ್‌ನಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಈಗಿನ ಕಾಲದಲ್ಲಿ ಕಂಪನಿಗಳಲ್ಲಿ ಒಳ್ಳೆಯ ಸಂಬಳವಿರುವ ಉದ್ಯೋಗವನ್ನು (Job) ಗಿಟ್ಟಿಸಿಕೊಳ್ಳುವುದೇ ಕಷ್ಟದ ಕೆಲಸ. ಒಳ್ಳೆಯ ಪ್ರತಿಭೆ, ಎಜುಕೇಶನ್, ಕೆಲಸ ಮಾಡುವ ಮನಸ್ಸು ಇದ್ರೂ ಸಂದರ್ಶನದ (interview) ಕೊನೆಯಲ್ಲಿ ನೀವು ರಿಜೆಕ್ಟ್ ಆಗಿದ್ದೀರಾ ಎಂದಾಗ ಆಗೋ ನೋವು ಅಷ್ಟಿಷ್ಟಲ್ಲ. ಆದರೆ ಹೀಗಾದಾಗ ಅಭ್ಯರ್ಥಿಗಳು ತಮ್ಮ ದೃಷ್ಟಿಕೋನದಲ್ಲಿ ಮಾತ್ರ ಯೋಚನೆ ಮಾಡ್ತಾರೆ. ಆದರೆ ಸಂದರ್ಶಕಿಯೊಬ್ಬರು ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂದರ್ಭದ ಎದುರಾದಾಗ ತಾನು ಅನುಭವಿಸಿದ ಇಕ್ಕಟ್ಟಿನ ಪರಿಸ್ಥಿತಿ ಹೇಗಿತ್ತು. ಆ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಕಠಿಣವಾಗಿತ್ತು ಎನ್ನುವುದನ್ನು ಕೂಡ ಹೇಳಿಕೊಂಡಿದ್ದಾರೆ. ಈ ಕುರಿತಾದ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈ ಮಹಿಳೆಯ ಒಳ್ಳೆಯ ಮನಸ್ಸನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಜಿಐಎಸ್ ವೃತ್ತಿಪರರೊಬ್ಬರಾದ ಪ್ರಿಯಾಂಕ ಜೋಶಿಯವರು (Priyanka Joshi), ಅರ್ಹರಾಗಿರುವ ಉದ್ಯೋಗ ಅಭ್ಯರ್ಥಿಯನ್ನು ತಿರಸ್ಕರಿಸಿದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಇಂದು, ನಾನು ಉದ್ಯೋಗ ಸಂದರ್ಶನದಲ್ಲಿ ಅಭ್ಯರ್ಥಿಯನ್ನು ತಿರಸ್ಕರಿಸಬೇಕಾಯಿತು. ಅವರು ನಿಜವಾಗಿಯೂ ಒಳ್ಳೆಯ ವ್ಯಕ್ತಿಯಂತೆ ಕಾಣುತ್ತಿದ್ದರು, ಆದರೆ ಅವರು ಆ ಹುದ್ದೆಗೆ ಅಗತ್ಯವಾದ ಕೌಶಲ್ಯಗಳನ್ನು ಹೊಂದಿರಲಿಲ್ಲ. ರಿಜೆಕ್ಟ್ ಮಾಡಿದಾಗ ಅವರಿಗೆ ಹತಾಶೆಯಾಯ್ತು, ಅದನ್ನು ನಾನು ಗ್ರಹಿಸಬಲ್ಲೆ. ಬಹುಶಃ ಅವರಿಗೆ ಬೆಂಬಲ ನೀಡಲು ಕುಟುಂಬವಿರಬಹುದು. ಬಹುಶಃ ಇಎಂಐಗಳು ಅವರ ಮೇಲೆ ಒತ್ತಡ ಹಾಕಬಹುದು, ನನ್ನ ವೃತ್ತಿಪರ ತೀರ್ಪನ್ನು ಸಹಾನುಭೂತಿಯಿಂದ ಮರೆಮಾಡಲು ನಾನು ಬಿಡಲಿಲ್ಲ. ಅದು ಕಠಿಣ ನಿರ್ಧಾರವಾಗಿತ್ತು, ಆದರೆ ಅಗತ್ಯವಾದ ನಿರ್ಧಾರವಾಗಿತ್ತು ಎಂದಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Today, I had to reject a candidate for a job interview. He seemed like a genuinely good person, but he simply didn’t possess the skills required for the role. I could sense his desperation… perhaps he had a family to support, maybe EMIs weighing on him ….yet, I couldn’t let…
— Saucy bandit (Priyanka Joshi)🇮🇳 (@jopriyu) October 23, 2025
ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು ‘ನಿಷ್ಕಾಮ ಕರ್ಮ’ ತತ್ವವನ್ನು ಪದೇ ಪದೇ ಒತ್ತಿಹೇಳುತ್ತಾನೆ – ಫಲಿತಾಂಶಕ್ಕೆ ಅಂಟಿಕೊಳ್ಳದೆ ಕರ್ತವ್ಯವನ್ನು ನಿರ್ವಹಿಸುವುದು. ಈ ಸಂದರ್ಭದಲ್ಲಿ, ಕರ್ಮವು ಶಿಕ್ಷೆ ಅಥವಾ ಪ್ರತಿಫಲದ ಬಗ್ಗೆ ಯೋಚಿಸುವುದಲ್ಲ. ಅಪರಾಧ ಅಥವಾ ಭಾವನೆಯಿಂದ ಪ್ರಭಾವಿತರಾಗದೆ, ನಿಮ್ಮ ಪಾತ್ರ ಹಾಗೂ ಜವಾಬ್ದಾರಿಗೆ ಅನುಗುಣವಾಗಿ ವರ್ತಿಸುವುದು. ನಾನು ನನ್ನ ಕರ್ಮವನ್ನು ಮಾಡಿದೆ. ಉಳಿದವುಗಳು ಕಾಲಕ್ಕೆ ಬಿಟ್ಟದ್ದು ಎಂದು ಬರೆದಕೊಂಡಿದ್ದಾರೆ.
ಇದನ್ನೂ ಓದಿ:ಪರ್ಮಿಷನ್ ಕೇಳದೇ ವರ್ಕ್ ಫ್ರಮ್ ಹೋಮ್ ಮಾಡಿದ ಉದ್ಯೋಗಿಗೆ ಖಡಕ್ ವಾರ್ನಿಂಗ್ ನೀಡಿದ ಸಿಇಒ
ಅಕ್ಟೋಬರ್ 23 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಅರವತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಎಂದಿಗೂ ಭಾವುಕನಾಗಬೇಡಿ ಮೇಡಂ. ನೀವು ಮಾಡಿದ್ದು ಸಂಪೂರ್ಣವಾಗಿ ಸರಿ. ಅವನ ಇಎಂಐ ನಿಮ್ಮ ಜವಾಬ್ದಾರಿಯಲ್ಲ. ಪ್ರಾಜೆಕ್ಟ್ ವಿಫಲವಾದರೆ ಅವನು ನಿಮಗೆ ಪರಿಹಾರ ನೀಡುತ್ತಾನೆಯೇ? ಇಲ್ಲ, ಇನ್ನೂ ಅವನ ಸಂಬಳವನ್ನು ಬೇಡುತ್ತಾನೆಯೇ? ಹೌದು. ಇಲ್ಲಿ ಕರ್ಮದಂತಹದ್ದೇನೂ ಇಲ್ಲ. ನೀವು ಅದ್ಭುತವಾಗಿ ಹೇಳಿದ್ದೀರಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ನಿಮ್ಮ ಕೆಲಸವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಅಭ್ಯರ್ಥಿಗೆ ಸ್ಪಷ್ಟ ಪ್ರತಿಕ್ರಿಯೆ ನೀಡುವುದು ಒಳ್ಳೆಯ ಕರ್ಮ. ನೀವು ಮಾಡಿದ್ದು ಸರಿಯೇ ಇದೆ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








