Optical Illusion: ಈ ಚಿತ್ರದಲ್ಲಿ ಅಕ್ಟೋಪಸ್‌ಗಳ ನಡುವೆ ಅಡಗಿದೆ ಮೀನು, 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
ಮೆದುಳಿನ ಕಸರತ್ತು ನೀಡುವ ಒಗಟುಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಬಿಡಿಸುವುದೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ತುಂಬಾನೇ ಕಷ್ಟ. ನಿರ್ದಿಷ್ಟ ಸಮಯದೊಳಗೆ ಉತ್ತರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನವರು ಇಂತಹ ಒಗಟಿನತ್ತ ಆಸಕ್ತಿ ತೋರಿಸುವುದಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಚಿತ್ರ ವೈರಲ್ ಆಗಿದ್ದು, ಇಲ್ಲಿ ಅಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಕಂಡುಹಿಡಿಯುವ ಸವಾಲು ನೀಡಲಾಗಿದೆ. ಇದು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ.

ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಇನ್ನಿತರ ಮೋಜಿನ ಆಟಗಳು ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ ಜೊತೆಗೆ ಮೆದುಳಿಗೆ ಖುಷಿ ಕೊಡುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಲೆಕ್ಕವಿಲ್ಲದಷ್ಟು ಒಗಟಿನ ಆಟಗಳು ವೈರಲ್ ಆಗುತ್ತಿರುತ್ತವೆ. ಕಡಿಮೆ ಸಮಯದಲ್ಲಿ ಈ ಒಗಟಿನ ಚಿತ್ರವನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಈ ಒಗಟನ್ನು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ಪ್ರಯತ್ನಿಸಿ ನೋಡಿ. ಕೆಂಪು ಬಣ್ಣದ ಅಕ್ಟೋಪಸ್‌ಗಳ ನಡುವೆ ಮೀನನ್ನು ಜಾಣತನದಿಂದ ಮರೆ ಮಾಡಲಾಗಿದೆ. ತೀಕ್ಷ್ಣ ದೃಷ್ಟಿ ಸಾಮರ್ಥ್ಯವುಳ್ಳವರು ಮಾತ್ರ ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಪತ್ತೆಹಚ್ಚಲು ಸಾಧ್ಯ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಏನಿದೆ?
ನಿಮ್ಮ ಕಣ್ಣುಗಳ ಸಾಮರ್ಥ್ಯವನ್ನು ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಆಪ್ಟಿಕಲ್ ಭ್ರಮೆ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಕೆಂಪು ಬಣ್ಣದ ಅಕ್ಟೋಪಸ್‌ಗಳ ನಡುವೆ ಮೀನೊಂದು ಅಡಗಿ ಕುಳಿತಿದೆ. ಹತ್ತು ಸೆಕೆಂಡುಗಳ ಒಳಗೆ ಈ ಮೀನನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಕೆಂಪು ಬಣ್ಣದ ಅಕ್ಟೋಪಸ್‌ಗಳು ನಿಮ್ಮ ಕಣ್ಣನ್ನು ಮೋಸಗೊಳಿಸಿ ಭ್ರಮೆಯನ್ನುಂಟು ಮಾಡುತ್ತದೆ. ಸುತ್ತಲೂ ಇರುವ ಅಕ್ಟೋಪಸ್‌ಗಳ ನಡುವೆ ಜಾಣತನದಿಂದ ಮರೆಮಾಡಲಾಗಿರುವ ಮೀನನ್ನು ಕಂಡುಹಿಡಿಯುವುದು ನಿಮಗೆ ಕಷ್ಟವಾಗಬಹುದು. ಒಂದು ವೇಳೆ ಈ ಮೀನು ನಿಮ್ಮ ಕಣ್ಣಿಗೆ ಬಿದ್ದರೆ ವೀಕ್ಷಣಾ ಕೌಶಲ್ಯವು ಅತ್ಯುತ್ತಮವಾಗಿದೆ ಎಂದರ್ಥ.
ಇದನ್ನೂ ಓದಿ:ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಹತ್ತು ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ
ಮೀನನ್ನು ಕಂಡು ಹಿಡಿಯಲು ನಿಮಗೆ ಸಾಧ್ಯವಾಯಿತೇ?

ನೀವು ಎಷ್ಟೇ ಪ್ರಯತ್ನಿಸಿದರೂ ಮೀನು ಎಲ್ಲಿದೆ ಎಂದು ಪತ್ತೆ ಹಚ್ಚಲು ನಿಮಗೆ ಸಾಧ್ಯವಾಗಿಲ್ಲವೇ. ನಾವು ಹೇಳುವಂತೆ ನೀವು ಮಾಡಿ, ಈ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸಲು, ಫೋಟೋವನ್ನು ಭಾಗಗಳಾಗಿ ವಿಂಗಡಿಸಿಕೊಳ್ಳಿ. ಪ್ರತಿಯೊಂದು ಭಾಗವನ್ನು ಸಂಪೂರ್ಣವಾಗಿ ಸೂಕ್ಷ್ಮ ದೃಷ್ಟಿಯಿಂದ ಸ್ಕ್ಯಾನ್ ಮಾಡಿ. ಆದರೆ ಕೆಲವೇ ಜನರು ಈ ಒಗಟನ್ನು 10 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ ಅಭಿನಂದನೆಗಳು. ಒಂದು ವೇಳೆ ಈ ಅಕ್ಟೋಪಸ್‌ಗಳ ನಡುವೆ ಅಡಗಿರುವ ಮೀನನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲವೆಂದಾದರೆ ನಾವೇ ನಿಮಗೆ ಉತ್ತರವನ್ನು ಹೇಳುತ್ತೇವೆ. ಈ ಮೇಲಿನ ಚಿತ್ರದಲ್ಲಿ ಅಕ್ಟೋಪಸ್ ಗಳ ನಡುವೆ ಅಡಗಿರುವ ಮೀನನ್ನು ಬಿಳಿ ಬಣ್ಣದಿಂದ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








