Optical Illusion: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಗುರುತಿಸಿ ನೋಡೋಣ
ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುವಂತಹ ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್ ಸೇರಿದಂತೆ ಇನ್ನಿತರ ಒಗಟಿನ ಆಟಗಳು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇಂತಹ ಒಗಟುಗಳನ್ನು ಬಿಡಿಸುವುದು ಕಷ್ಟವಾದರೂ ಉತ್ತರ ಕಂಡುಕೊಂಡ ಮೇಲೆ ಖುಷಿಯಾಗುತ್ತದೆ. ಇದೀಗ ಕಷ್ಟಕರವಾದ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಈ ಕಾಡಿನಲ್ಲಿ ಅಡಗಿರುವ ಮುದ್ದಾದ ಜಿಂಕೆಯನ್ನು ಪತ್ತೆಹಚ್ಚಬೇಕು. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಬಹುದು.

ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಈ ಒಗಟಿನ ಚಿತ್ರಗಳು ಭ್ರಮೆಯನ್ನು ಉಂಟು ಮಾಡಿ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ.ಹೀಗಾಗಿ ಈ ಒಗಟನ್ನು ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹತ್ತರಲ್ಲಿ ಇಬ್ಬರೂ ಮಾತ್ರ ಈ ಒಗಟಿನ ಚಿತ್ರಗಳನ್ನು ಬಿಡಿಸಲು ಸಾಧ್ಯ. ಈ ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಸುಲಭವಾಗಿ ತಿಳಿದುಕೊಳ್ಳಲು ಸಹಾಯಕವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಸರಳವಾಗಿ ಕಂಡರೂ ಟ್ರಿಕ್ಕಿಯಾಗಿದೆ. ಈ ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು (deer) ಕಂಡುಹಿಡಿಯುವ ಸವಾಲು ನೀಡಲಾಗಿದೆ. ಹದಿನೈದು ಸೆಕೆಂಡುಗಳೊಳಗೆ ಈ ಪ್ರಾಣಿಯನ್ನು ಪತ್ತೆ ಹಚ್ಚಲು ಸಾಧ್ಯವೇ ಎಂದು ನೋಡಿ.
ಕಣ್ಣು ಬಿಟ್ಟು ಈ ಚಿತ್ರವನ್ನು ನೋಡಿ
ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಾಡಿನ ಪ್ರದೇಶಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ದಟ್ಟವಾದ ಮರಗಳು ಹಾಗೂ ನೆಲದ ಮೇಲೆ ಒಣ ಎಲೆಗಳು ಬಿದ್ದಿವೆ. ಆದರೆ ಈ ಕಾಡಿನಲ್ಲಿ ಜಿಂಕೆ ಅಡಗಿಕೊಂಡಿದೆ. ಈ ಫೋಟೋದಲ್ಲಿರುವ ಸವಾಲು ಜಿಂಕೆ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. 15 ಸೆಕೆಂಡುಗಳ ಒಳಗೆ ನೀವು ಆ ಜಿಂಕೆಯನ್ನು ಹುಡುಕಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಟ್ಸ್ ಆಫ್ ಹೇಳಲೇಬೇಕು. ಆದರೆ ಸಾಧ್ಯವಾದಷ್ಟು ಈ ಒಗಟನ್ನು ಬಿಡಿಸಲು ಪ್ರಯತ್ನಿಸಿ.
ಇದನ್ನೂ ಓದಿ:ನೀವು ಜಾಣರೇ, ಈ ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ಕಂಡು ಹಿಡಿಯಿರಿ
ಕಾಡಿನಲ್ಲಿ ಮರೆಮಾಡಿರುವ ಜಿಂಕೆ ನಿಮಗೆ ಕಾಣಿಸಿತೇ?

ಕಾಡಿನಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು ಕಂಡುಹಿಡಿಯುವುದು ಸುಲಭವೆಂದು ನೀವು ಭಾವಿಸಿರಬಹುದು. ಆದರೆ ಈ ಒಗಟು ಬಿಡಿಸಲು ಎಲ್ಲರಿಗೂ ಸಾಧ್ಯವಾಗಿಲ್ಲ ಎಂಬುದು ಗೊತ್ತಿದೆ. ಕೆಲವೇ ಜನರಿಗೆ ಮಾತ್ರ ಈ ಒಗಟನ್ನು 15 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವಾಯಿತು. ನೀವು ಆ ಸಾಲಿಗೆ ಸೇರಿದ್ದೀರಾ ಅಂತಾದ್ರೆ ನಿಮಗೆ ಅಭಿನಂದನೆಗಳು.. ಆದರೆ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಎನ್ನುವವರಿಗೆ ಜಿಂಕೆ ಎಲ್ಲಿದೆ ಎಂದು ನಾವು ಹೇಳುತ್ತೇವೆ. ಈ ಮೇಲಿನ ಫೋಟೋವನ್ನು ನೋಡಿ ಆ ಕಾಡಿನಲ್ಲಿ ಜಿಂಕೆ ಎಲ್ಲಿದೆ ಎಂದು ಗುರುತಿಸಿದ್ದೇವೆ. ಮರದ ಹಿಂಬದಿಯಲ್ಲಿ ಇಣುಕುತ್ತಿರುವ ಜಿಂಕೆಯೂ ನಿಮ್ಮ ಕಣ್ಣಿಗೆ ಬಿದ್ದಿತು ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








