AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನಗೆ ದೆಹಲಿಗಿಂತ ಬೆಂಗಳೂರು ಇಷ್ಟ, ಈ ಕಾರಣಕ್ಕೆ

ದೆಹಲಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡ ವ್ಯಕ್ತಿಯೊಬ್ಬರು ಇಲ್ಲಿನ ಸಂಸ್ಕೃತಿ ಮತ್ತು ಜನರನ್ನು ಹಾಡಿ ಹೊಗಳಿದ್ದಾರೆ. ಅನೇಕ ಉತ್ತರ ಭಾರತೀಯರು ಬೆಂಗಳೂರಿನ ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಇಷ್ಟಪಡುವುದಿಲ್ಲ, ಆದರೆ ಅದನ್ನು ಅಳವಡಿಸಿಕೊಂಡರೆ ಜೀವನ ಸುಲಭ. ಇದೀಗ ಈ ಪೋಸ್ಟ್​ ಬೆಂಗಳೂರು ವರ್ಸಸ್ ದೆಹಲಿ, ಜೀವನ ವೆಚ್ಚ ಮತ್ತು ಭಾಷಾ ಸಮಸ್ಯೆಗಳ ಕುರಿತು ಚರ್ಚೆಗೆ ಕಾರಣವಾಗಿದೆ.

ನನಗೆ ದೆಹಲಿಗಿಂತ ಬೆಂಗಳೂರು ಇಷ್ಟ, ಈ ಕಾರಣಕ್ಕೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 21, 2025 | 3:46 PM

Share

ಬೆಂಗಳೂರು, ಅ.21: ಬೆಂಗಳೂರು ಬಿಡುತ್ತೇವೆ, ಇಲ್ಲಿ ಎಲ್ಲವೂ ದುಬಾರಿ, ಇಲ್ಲಿನ ಟ್ರಾಫಿಕ್ ಯಾರಿಗೆ ಬೇಕು ಎಂದೆಲ್ಲ ಹೇಳುವವರ ಮಧ್ಯೆ, ನನಗೆ ದೆಹಲಿಗಿಂತ ಬೆಂಗಳೂರು ಇಷ್ಟು ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಈ ವ್ಯಕ್ತಿ ವೈರಲ್​ ಆಗಿದ್ದಾರೆ. ಇದೀಗ ಬೆಂಗಳೂರು ವರ್ಸಸ್ ದೆಹಲಿ (Bangalore vs Delhi) ಎಂಬ ಚರ್ಚೆಗೆ ಕಾರಣವಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಶಿಫ್ಟ್​​ ಆಗಿರುವ ಈ ವ್ಯಕ್ತಿಗೆ ಬೆಂಗಳೂರು ಸಕಾರಾತ್ಮಕ ಅನುಭವ ನೀಡಿದೆಯಂತೆ. ಈ ಬಗ್ಗೆ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ದೆಹಲಿಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ವಾಸಿಸಿದ್ದ ಈ ವ್ಯಕ್ತಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ. ನಗರದ ಸಂಸ್ಕೃತಿ, ಇಲ್ಲಿ ಆಚರಣೆ ಹಾಗು ಇಲ್ಲಿನ ಜನ ಸುಂದರವಾಗಿದ್ದಾರೆ. ಇನ್ನು ಇದೊಂದು ಶ್ರೇಷ್ಠ ಪ್ರದೇಶವಾಗಿದೆ ಎಂದು ಹಾಡಿ ಹೊಗಳಿದ್ದಾರೆ.

ಬೆಂಗಳೂರಿಗೆ ವಲಸೆ ಬರುವ ಅನೇಕ ಉತ್ತರ ಭಾರತೀಯರು ಇಲ್ಲಿನ ವಿಚಾರಗಳಿಗೆ ಹೊಂದಿಕೊಳ್ಳುವುದಿಲ್ಲ. ಹಾಗೂ ಹಲವು ಬಾರಿ ಭಾಷೆ ವಿಚಾರವಾಗಿ ಇಲ್ಲಿ ಸಂಘರ್ಷ ನಡೆದದ್ದು ಇದೆ. ಆದರೆ ಈ ವ್ಯಕ್ತಿ ಇಲ್ಲಿನ ಸಂಪ್ರದಾಯಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಇಲ್ಲಿ ಬದಕಲು ತುಂಬಾ ಸುಲಭವಾಗಬಹುದು ಎಂದು ಹೇಳಿದ್ದಾರೆ. ಇದನ್ನು ಎಕ್ಸ್​​​ನಲ್ಲಿ ಅವರು ಹೀಗೆ ಹಂಚಿಕೊಂಡಿದ್ದಾರೆ. ” ನಾನು 10 ವರ್ಷಕ್ಕಿಂತಲ್ಲೂ ದೆಹಲಿಯಲ್ಲಿ ವಾಸವಾಗಿದ್ದೆ ಇತ್ತೀಚೆಗೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೇನೆ. ನನಗೆ ದೆಹಲಿಗಿಂತ ಬೆಂಗಳೂರೇ ಇಷ್ಟ. ಹೆಚ್ಚಿನ ಉತ್ತರ ಭಾರತೀಯರು ಸ್ಥಳೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಇಷ್ಟಪಡುವುದಿಲ್ಲ, ಇದರಿಂದ ಅವರು ಬೆಂಗಳೂರಿನ ವಿಚಾರಗಳಿಗೆ ಹೊಂದಿಕೊಳ್ಳುವುದರಲ್ಲಿ ವಿಫಲವಾಗಿದ್ದಾರೆ. ಬೆಂಗಳೂರು ಮತ್ತು ಅದರ ಸಂಸ್ಕೃತಿ ಸುಂದರವಾಗಿದೆ. ಜನರು ಕೂಡ ಶ್ರೇಷ್ಠರು” ಎಂದು ಹೇಳಿದ್ದಾರೆ. ಈ ಪೋಸ್ಟ್​ನ್ನು @gurudutt_biswal ಎಂಬ ಎಕ್ಸ್​​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​ ಪೋಸ್ಟ್​ ಇಲ್ಲಿದೆ ನೋಡಿ:

ಈ ಪೋಸ್ಟ್​​ಗೆ ಹಲವು ಜನ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವುದು ತುಂಬಾ ಖುಷಿಯೇ, ಇಲ್ಲಿನ ಆಹ್ಲಾದಕರ ಹವಾಮಾನ, ಮಗುವನ್ನು ಉನ್ನತ ಶಾಲೆಗೆ ಸೇರಿಸಿದ್ದಾನೆ. ನಾವು ಇಬ್ಬರೂ ಕೂಡ ಒಳ್ಳೆಯ ಸಂಬಳ ಪಡೆಯುವ ಕೆಲಸದಲ್ಲೂ ಇದ್ದೇವು, ಆದರೆ ಹೊರಗಿನವರು ಎಂಬ ಭಾವನೆಯನ್ನು ನಿರಂತರವಾಗಿ ಇಲ್ಲಿ ಅನುಭವಿಸುತ್ತಿರುವುದರಿಂದ ಮತ್ತೆ ಗುರುಗ್ರಾಮ್‌ ಹಿಂತಿರುಗಬೇಕಾಯಿತು ಎಂದು ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಅನೇಕರು ಕಮೆಂಟ್​ ಮಾಡಿದ್ದಾರೆ. ನಿಮಗೆ ಧನ್ಯವಾದಗಳು, ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡುವ ಜನರ ಮಧ್ಯೆ, ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವುದು ತುಂಬಾ ಇಷ್ಟವಾಯಿತು ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಹೊಸೂರು ಮೆಟ್ರೋ: ಅಂತರರಾಜ್ಯ ಯೋಜನೆ ತಾಂತ್ರಿಕವಾಗಿ ಅಸಾಧ್ಯ ಎಂದ BMRCL

ಕನ್ನಡಿಗರು ಎಲ್ಲರನ್ನೂ ಸ್ವಾಗತಿಸುತ್ತಾರೆ. ಇಲ್ಲಿ ಎಲ್ಲದಕ್ಕೂ ಮುಕ್ತ ಅವಕಾಶ ಇದೆ. ಎಲ್ಲರನ್ನೂ ಬೆಳೆಸುವ ಜಗತ್ತು ಬೆಂಗಳೂರು, ಜತೆಗೆ ಎಲ್ಲವನ್ನು ವೇಗವಾಗಿ ಕಲಿಯಬಹುದು. ಆದರೆ ಇಲ್ಲಿರುವ ಅನೇಕ ಹೊರಗಿನ ಜನರಿಗೆ ಇಲ್ಲಿನ ವಿಚಾರಗಳನ್ನು ತಿಳಿದುಕೊಳ್ಳಲು ಇಷ್ಟವಿಲ್ಲ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ. ಬೆಂಗಳೂರ 10-15 ವರ್ಷಗಳ ಹಿಂದಿನ ನಗರವಲ್ಲ. ಮೊದಲು ಇದು ಮೋಜಿಗೆ ಹೆಸರುವಾಸಿಯಾಗಿತ್ತು, ಆದರೆ ಇಂದು ರಾಜ್ಯ ಸರ್ಕಾರದ ಸೆಸ್ ಮತ್ತು ತೆರಿಗೆಗಳಿಂದಾಗಿ ದೊಡ್ಡ ಸಂಚಾರ ಸಮಸ್ಯೆ ಮತ್ತು ಹೆಚ್ಚಿನ ಜೀವನ ವೆಚ್ಚವನ್ನು ಹಾಕುತ್ತಿದೆ. ಇದರ ಜತೆಗೆ ಭಾಷಾಭಿಮಾನಿಗಳು ಸಹ ಬ್ರಾಂಡ್ ನಗರವನ್ನು ನಾಶಪಡಿಸುತ್ತಿದ್ದಾರೆ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!
ಪ್ರಧಾನಿ ಕರೆಗೆ ಓಗೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸಿದ ವಿಜಯೇಂದ್ರ!