AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಚಿತ್ರದಲ್ಲಿ ಮರೆಮಾಡಲಾಗಿರುವ 8 ವಸ್ತುಗಳನ್ನು ಪತ್ತೆ ಹಚ್ಚಿ ನೋಡೋಣ

ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ಮೆದುಳಿಗೆ ಕೆಲಸ ನೀಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ವೈರಲ್‌ ಆಗುತ್ತಿರುತ್ತವೆ. ಆದರೆ ಈ ಒಗಟಿನ ಚಿತ್ರ ಬಿಡಿಸುವುದು ಅಷ್ಟು ಸುಲಭವಲ್ಲ. ಬುದ್ಧಿ ಖರ್ಚು ಮಾಡಬೇಕಾಗುತ್ತದೆ. ಕೆಲವರು ಇಂತಹ ಒಗಟುಗಳನ್ನು ಬಿಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಚಿತ್ರದಲ್ಲಿ ಅಡಗಿರುವ ಎಂಟು ರಹಸ್ಯ ವಸ್ತುಗಳನ್ನು ಕಂಡುಹಿಡಿಯಬೇಕು. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ.

Optical Illusion: ಈ ಚಿತ್ರದಲ್ಲಿ ಮರೆಮಾಡಲಾಗಿರುವ 8 ವಸ್ತುಗಳನ್ನು ಪತ್ತೆ ಹಚ್ಚಿ ನೋಡೋಣ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Reddit
ಸಾಯಿನಂದಾ
|

Updated on: Oct 20, 2025 | 1:41 PM

Share

ಕೆಲವೊಮ್ಮೆ ನೀವು ನಿಮ್ಮನ್ನು ಹಾಗೂ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ಈ ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳು ಬುದ್ಧಿವಂತಿಕೆ ಹಾಗೂ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುತ್ತದೆ. ಈ ಚಿತ್ರಗಳಲ್ಲಿ ಕೆಲವೊಂದು ಹೆಚ್ಚು ಸವಾಲುಗಳಿವೆ. ಈ ಕೆಲವು ಒಗಟು ಸ್ವಲ್ಪ ಟ್ರಿಕ್ಕಿಯಾಗಿ ಕಂಡರೂ ಬಿಡಿಸುವುದರಲ್ಲಿರುವ ಖುಷಿನೇ ಬೇರೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಅಡಗಿರುವ ಎಂಟು ಗುಪ್ತ ವಸ್ತುಗಳನ್ನು ಹುಡುಕಬೇಕು. ಆದರೆ ಈ ಒಗಟು ಬಿಡಿಸಲು ಇರುವ ಕಾಲಾವಕಾಶ ಹದಿನೈದು ಸೆಕೆಂಡುಗಳು ಮಾತ್ರ.

ಈ ಚಿತ್ರದಲ್ಲಿ ಏನಿದೆ?

ಭ್ರಮೆ ಉಂಟು ಮಾಡುವ ಈ ಚಿತ್ರವನ್ನು Ok_Recipe2769 ಹೆಸರಿನರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರವು ಎರಡು ಕಾರ್ಟೂನ್ ಬೆಕ್ಕುಗಳು ಪ್ರಕಾಶಮಾನವಾದ ಕಿತ್ತಳೆ ಮೀನು, ಹಸಿರು ಸಸ್ಯಗಳು, ಹೊಳೆಯುವ ಗುಳ್ಳೆಗಳು ಮತ್ತು ನಿಧಿಗಳಿಂದ ಆವೃತವಾಗಿವೆ. ಈ ವರ್ಣರಂಜಿತ ಚಿತ್ರದೊಳಗೆ ಎಂಟು ರಹಸ್ಯ ವಸ್ತುಗಳು ಅಡಗಿವೆ. ಈ ವಸ್ತುಗಳನ್ನು ಪತ್ತೆ ಹಚ್ಚಲು ಸರಿಸುಮಾರು ಹದಿನೈದು ಸೆಕೆಂಡುಗಳನ್ನು ನೀಡಲಾಗಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

My 5 year old gave up on this ! byu/Ok_Recipe2769 inmildlyinfuriating

ಇದನ್ನೂ ಓದಿ
Image
ಮರದಲ್ಲಿ ಅಡಗಿ ಕುಳಿತಿದೆ ಮುದ್ದಾದ ಬೆಕ್ಕು, 7 ಸೆಕೆಂಡುಗಳಲ್ಲಿ ಗುರುತಿಸಿ
Image
ಮಹಿಳೆಯ ಮುಖದ ನಡುವೆ ಅಡಗಿರುವ ಪುರುಷನನ್ನು ಗುರುತಿಸಿ
Image
ಈ ಸುಂದರವಾದ ಕಾಡಿನಲ್ಲಿ ಅಡಗಿರುವ ಅಳಿಲನ್ನು ಹುಡುಕಿ
Image
ಈ ಚಿತ್ರದಲ್ಲಿ ಅಡಗಿರುವ ಪಾಂಡಗಳನ್ನು ಗುರುತಿಸಿ

ಈ ಚಿತ್ರದಲ್ಲಿರುವ ಸವಾಲು ಏನು?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀಡಲಾದ ಸವಾಲು ಸರಳವಾಗಿದೆ: ಪಝಲ್‌ನ ಬಲಭಾಗವು ಮರೆಮಾಡಲಾದ ವಸ್ತುಗಳ ಪಟ್ಟಿಯನ್ನು ನೀಡಲಾಗಿದೆ. ನಿಮಗೆ ಕೇವಲ 15 ಸೆಕೆಂಡುಗಳಿವೆ. ಮೀನಿನ ಅಸ್ಥಿಪಂಜರ, ಮೂಳೆ, ಕಲ್ಲಂಗಡಿ, ಚೆಂಡು, ಗರಿ, ಡಬ್ಬಿ, ಹಕ್ಕಿ, ಇಲಿ ಈ ಎಲ್ಲಾ ವಸ್ತುಗಳನ್ನು ಕಂಡು ಹಿಡಿಯುವುದು ನಿಮ್ಮ ಕೆಲಸವಾಗಿದೆ. ಈ ಒಗಟು ಬಿಡಿಸಲು ಸಿದ್ಧವಿದ್ದರೆ ನಿಮ್ಮ ಸಮಯ ಆರಂಭವಾಗುತ್ತದೆ.

ಇದನ್ನೂ ಓದಿ:Optical Illusion: ಮರದಲ್ಲಿ ಅಡಗಿ ಕುಳಿತಿದೆ ಮುದ್ದಾದ ಬೆಕ್ಕು, 7 ಸೆಕೆಂಡುಗಳಲ್ಲಿ ಗುರುತಿಸಿ

ಎಂಟು ರಹಸ್ಯ ವಸ್ತುಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತೇ?

Optical Illusion Answer

ಈ ಭ್ರಮೆ ಉಂಟು ಮಾಡುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಅಡಗಿರುವ ಎಂಟು ವಸ್ತುಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ತಲೆ ಕೆಡಿಸಿಕೊಳ್ಳಬೇಡಿ. ಈ ಎಂಟು ವಸ್ತುಗಳು ಎಲ್ಲಿವೆ ಎಂದು ನಾವು ನಿಮಗೆ ಹೇಳುತ್ತೇವೆ. ಮೀನಿನ ಅಸ್ಥಿಪಂಜರವು ಬೆಕ್ಕಿನ ಮುಂಭಾಗದಲ್ಲಿ ಎಡಭಾಗದ ಮೂಲೆಯಲ್ಲಿ ಇರುವುದನ್ನು ಗಮನಿಸಬಹುದು. ಮೂಳೆಯೂ ಹಸಿರು ಬಣ್ಣದಲ್ಲಿದೆ. ಈ ಚಿತ್ರದ ಬಲಭಾಗದಲ್ಲಿರುವ ಸಸ್ಯಗಳ ನಡುವೆ ಕಲ್ಲಂಗಡಿಯನ್ನು ಜಾಣತನದಿಂದ ಮರೆಮಾಡಲಾಗಿದೆ. ಚೆಂಡನ್ನು ಮಧ್ಯದಲ್ಲಿರುವ ಮೀನಿನ ನಡುವೆ ಇದೆ. ಮೀನಿನ ಬಾಲದ ಮೇಲೆ ಗರಿಯನ್ನು ಇಡಲಾಗಿದೆ. ಡಬ್ಬಿಯು ಎಲೆಗಳ ನಡುವೆ ಇದೆ. ಈ ಮೇಲಿನ ಚಿತ್ರದಲ್ಲಿ ಆ ಎಂಟು ವಸ್ತುಗಳನ್ನು ಗುರುತಿಸಲಾಗಿದೆ.

ಇನ್ನಷ್ಟು ವೈರಲ್‌ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ