Optical Illusion: ಮಹಿಳೆಯ ಮುಖದ ನಡುವೆ ಅಡಗಿರುವ ಪುರುಷನನ್ನು ಗುರುತಿಸಿ
ಕಣ್ಣು ಹಾಗೂ ಮೆದುಳಿಗೆ ಕೆಲಸ ನೀಡುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಬಿಡಿಸುವುದೆಂದರೆ ಕೆಲವರಿಗೆ ಇಷ್ಟ. ಹೀಗಾಗಿ ಇಂತಹ ಒಗಟಿನ ಚಿತ್ರದತ್ತ ಕಣ್ಣು ಹಾಯಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೇ ಸಾಕಷ್ಟು ಚಿತ್ರ ವೈರಲ್ ಆಗುತ್ತಿದ್ದು, ಈ ಚಿತ್ರದಲ್ಲಿ ಮಹಿಳೆಯ ಮುಖದ ನಡುವೆ ಪುರುಷನ ಮುಖವೊಂದು ಅಡಗಿದೆ. ತೀಕ್ಷ್ಣ ವೀಕ್ಷಣಾ ಸಾಮರ್ಥ್ಯ ಹೊಂದಿರುವವರು ಮಾತ್ರ ಈ ಒಗಟು ಬಿಡಿಸಲು ಸಾಧ್ಯ.

ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್ ಸೇರಿದಂತೆ ಇತರ ಮೋಜಿನ ಆಟಗಳು ಸಹಜವಾಗಿ ಎಲ್ಲರಿಗೂ ಖುಷಿಕೊಡುತ್ತದೆ. ಅದರ ಜೊತೆಗೆ ಮೆದುಳಿಗೆ ಕೆಲಸ ನೀಡುತ್ತವೆ. ಈ ಒಗಟಿನ ಚಿತ್ರವನ್ನು ಅಷ್ಟು ಸುಲಭವಾಗಿಲ್ಲದಿದ್ದರೂ, ಬುದ್ಧಿವಂತರು ಕಡಿಮೆ ಸಮಯದಲ್ಲಿ ಉತ್ತರ ಕಂಡುಕೊಳ್ಳುತ್ತಾರೆ. ಇನ್ನು ಕೆಲವರಿಗೆ ಎಷ್ಟೇ ಸಮಯ ತೆಗೆದುಕೊಂಡರೂ ಒಗಟು ಬಿಡಿಸುವುದು ಕಷ್ಟವಾಗುತ್ತದೆ. ಇದೀಗ ವೈರಲ್ ಆಗಿರುವ ಡಬಲ್-ಇಮೇಜ್ ಆಪ್ಟಿಕಲ್ ಭ್ರಮೆಯ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಪುರುಷನ ಮುಖವನ್ನು ಪತ್ತೆ ಹಚ್ಚಿ. ಆದರೆ ನೀವು ಏಳು ಸೆಕೆಂಡುಗಳಲ್ಲಿ ಒಗಟು ಬಿಡಿಸಿ ಉತ್ತರವನ್ನು ಹೇಳಬೇಕು.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಏನಿದೆ?
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಪ್ಪು ಕೂದಲಿನ ಮಹಿಳೆ ನೀಲಿ ಉಡುಗೆ ಮತ್ತು ಕಿವಿಯೋಲೆಗಳನ್ನು ಧರಿಸಿ ಪರದೆಯ ಮುಂದೆ ನಿಂತಿದ್ದಾಳೆ. ಆದರೆ ಇದರಲ್ಲಿ ಪುರುಷನ ಮುಖವು ಅಡಗಿದೆ. ನಿಮ್ಮ ಕಣ್ಣಿಗೆ ಪುರುಷನು ಬಿದ್ದರೆ ವೀಕ್ಷಣಾ ಕೌಶಲ್ಯವು ಅತ್ಯುತ್ತಮ ವಾಗಿದೆ ಎಂದರ್ಥ. ಆದರೆ ನೀವು ಈ ಒಗಟನ್ನು ಕೇವಲ ಏಳು ಸೆಕೆಂಡುಗಳ ಒಳಗೆ ಬಿಡಿಸಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ.
ಇದನ್ನೂ ಓದಿ:Optical Illusion: ಜಸ್ಟ್ 10 ಸೆಕೆಂಡುಗಳಲ್ಲಿ ಈ ಸುಂದರವಾದ ಕಾಡಿನಲ್ಲಿ ಅಡಗಿರುವ ಅಳಿಲನ್ನು ಹುಡುಕಿ
ಪುರುಷನ ಮುಖ ಕಂಡು ಹಿಡಿಯಲು ಸಾಧ್ಯವಾಯಿತೇ?

ಕಪ್ಪು ಕೂದಲಿನ ಮಹಿಳೆ ಪರದೆಯ ಮುಂದೆ ನಿಂತಿದ್ದು, ಆಕೆಯ ಕಪ್ಪು ಕೂದಲು ಮತ್ತು ನೆರಳಿನ ಪ್ರದೇಶವು ಆ ಪುರುಷನ ಕಣ್ಣುಗಳು ಮತ್ತು ಕೂದಲಿನ ರೇಖೆಯನ್ನು ಸೃಷ್ಟಿಸುತ್ತದೆ. ನೀವು ಕಣ್ಣು ಬಿಟ್ಟು ಈ ಚಿತ್ರವನ್ನು ನೋಡಿ. ಈ ಸುಳಿವು ನೀಡಿದರೂ ಪುರುಷನನ್ನು ಹುಡುಕಲು ಸಾಧ್ಯವಾಗಿಲ್ಲವೆಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ನಿಮ್ಮ ಮೊಬೈಲ್ ಉಲ್ಟಾ ಮಾಡಿ ಈ ಚಿತ್ರವನ್ನು ನೋಡಿ ನಿಮ್ಮ ಕಣ್ಣಿಗೆ ಪುರುಷನು ಕಾಣಿಸುತ್ತಾನೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Sat, 18 October 25








