AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಜಸ್ಟ್ 12 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಿರಿ

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ನಿಮ್ಮ ಕಣ್ಣು ಹಾಗೂ ಮೆದುಳು ಗ್ರಹಿಸುವುದಕ್ಕಿಂತ ವಿಭಿನ್ನವಾಗಿರುತ್ತದೆ. ಕೆಲವರು ಬಿಡುವು ಸಿಕ್ಕಾಗಲ್ಲೆಲ್ಲಾ ಈ ಆಪ್ಟಿಕಲ್‌ ಇಲ್ಯೂಷನ್‌ ಹಾಗೂ ಬ್ರೈನ್ ಟೀಸರ್ ಚಿತ್ರಗಳನ್ನು ಬಿಡಿಸಲು ಆಸಕ್ತಿ ತೋರಿಸುತ್ತಾರೆ. ಈ ಒಗಟಿನ ಚಿತ್ರಗಳು ನಿಮ್ಮ ಮೆದುಳು ಹಾಗೂ ಕಣ್ಣಿಗೆ ಕೆಲಸ ಕೊಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇದೀಗ ಕಠಿಣ ಸವಾಲಿನ ಫೋಟೋವೊಂದು ವೈರಲ್‌ ಆಗಿದ್ದು ಈ ರೆಡ್ಡಿಟ್ ಪಝಲ್‌ನಲ್ಲಿ ಕಿತ್ತಳೆ ಬಣ್ಣದ ಬೆಕ್ಕು ಅಡಗಿ ಕುಳಿತಿದೆ. ಈ ಬೆಕ್ಕನ್ನು ನೀವು ಹುಡುಕಲು ಸಾಧ್ಯವೇ ಎಂದು ನೋಡಿ.

Optical Illusion: ಜಸ್ಟ್ 12 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಿರಿ
ಆಪ್ಟಿಕಲ್‌ ಇಲ್ಯೂಷನ್‌Image Credit source: Reddit
ಸಾಯಿನಂದಾ
|

Updated on:Oct 15, 2025 | 9:37 AM

Share

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳು ಟ್ರಿಕ್ಕಿ ಒಗಟಿನ ಚಿತ್ರಗಳಾಗಿದ್ದು, ಇವುಗಳನ್ನು ಬಿಡಿಸುವುದು ಕೆಲವರಿಗೆ ಇಷ್ಟ. ಈ ಚಿತ್ರಗಳು ಯೋಚನಾ ಸಾಮರ್ಥ್ಯ, ದೃಷ್ಟಿ ತೀಕ್ಷ್ಣತೆ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಹೀಗಾಗಿ ಹೆಚ್ಚಿನವರು ಈ ರೀತಿಯ ಒಗಟುಗಳನ್ನು ಇಷ್ಟ ಪಡುತ್ತಾರೆ. ಈ ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದೀಗ ಕಠಿಣ ಸವಾಲಿನ ಒಗಟನ್ನು ಬಿಡಿಸಲು ಪ್ರಯತ್ನಿಸಿ. ಈ ಚಿತ್ರದಲ್ಲಿ ಸವಾಲೊಂದನ್ನು ನೀಡಲಾಗಿದ್ದು, ಈ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ನೀವು ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.

ಈ ಭ್ರಮೆಯ ಚಿತ್ರದಲ್ಲಿ ಏನಿದೆ?

ಫೈಂಡ್‌ದಿಸ್ನೈಪರ್ (r/FindTheSniper) ಹೆಸರಿನ ಖಾತೆಯಲ್ಲಿ ಹಂಚಿಕೊಂಡ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಬೆಕ್ಕೊಂದು ಅಡಗಿದೆ. ಈ ಪೋಸ್ಟ್ ಗೆ “ನನ್ನ ಕಿತ್ತಳೆ ಬೆಕ್ಕನ್ನು ಹುಡುಕಿ” ಎಂಬ ಶೀರ್ಷಿಕೆ ನೀಡಲಾಗಿದೆ. ಮೊದಲ ನೋಟದಲ್ಲಿ, ಚಿತ್ರದಲ್ಲಿ ಕೆಲವು ಪೆಟ್ಟಿಗೆಗಳು, ಶೂ, ಕ್ಯಾಬಿನೆಟ್ ಮತ್ತು ನೀರಿನ ಜಗ್ ಹೊಂದಿರುವ ವಿಶಿಷ್ಟ ಪ್ರವೇಶದ್ವಾರವು ನಿಮ್ಮ ಕಣ್ಣಿಗೆ ಬೀಳುತ್ತದೆ. ಆದರೆ ರೂಫಸ್ ಎಂಬ ಹೆಸರಿನ ಬೆಕ್ಕು ಅಡಗಿದ್ದು ಅದನ್ನು ಹುಡುಕುವ ಸವಾಲು ಇಲ್ಲಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ

Find my orange cat byu/hakunamagabi inFindTheSniper

ಇದನ್ನೂ ಓದಿ
Image
ಈ ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಕಂಡುಹಿಡಿಯಿರಿ
Image
ಬುದ್ಧಿವಂತರಿಗೊಂದು ಸವಾಲ್;‌ ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಗುರುತಿಸಿ
Image
ಈ ಚಿತ್ರದಲ್ಲಿ ಅಡಗಿರುವ ಹಾವನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
Image
ಈ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು ಕಂಡು ಹಿಡಿದ್ರೆ ನೀವು ಜಾಣರು ಎಂದರ್ಥ

ಸವಾಲು ಸ್ವೀಕರಿಸಲು ಸಿದ್ಧವಿದ್ದೀರಾ?

ಆಪ್ಟಿಕಲ್‌ ಇಲ್ಯೂಷನ್‌ ನೋಡಿದ ತಕ್ಷಣ ನೀವು ಗೊಂದಲಕ್ಕೆ ಒಳಗಾಗುವುದು ಸಹಜ. ಮೊದಲ ನೋಟಕ್ಕೆ ಈ ಒಗಟು ಬಿಡಿಸಲು ನಿಮಗೆ ಕಷ್ಟಕರ ಎಂದೆನಿಸಬಹುದು. ಆದರೆ ಸರಿಯಾಗಿ ಗಮನಿಸಿದರೆ ಉತ್ತರ ಸುಲಭದಾಯಕವಾಗಿದೆ. ತಾಳ್ಮೆಯಿಂದ ಈ ಚಿತ್ರವನ್ನು ನೋಡಿ, ಇದರಲ್ಲಿ ಅಡಗಿರುವ ಬೆಕ್ಕನ್ನು ನೀವು ಕಂಡು ಹಿಡಿಯಿರಿ. ಈ ಕಠಿಣ ಸವಾಲಿನ ಚಿತ್ರವನ್ನು ಬಿಡಿಸಲು ರೆಡಿ ಇದ್ದೀರಾ ಎಂದು ನಾವು ಅಂದುಕೊಳ್ಳುತ್ತೇವೆ.

ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಗೂಬೆಯನ್ನು 10 ಸೆಕೆಂಡುಗಳಲ್ಲಿ ಹುಡುಕಿ ನೋಡೋಣ

ನಿಮ್ಮ ಕಣ್ಣಿಗೆ ಬೆಕ್ಕು ಕಂಡಿತೇ?

ಸಮಯ ಮಿತಿಯಿಲ್ಲದಿದ್ದರೂ ಈ ಒಗಟಿನ ಚಿತ್ರವನ್ನು ಬಿಡಿಸಲು ನಿಮ್ಮಿಂದ ಸಾಧ್ಯವಾಗಿದ್ದರೆ ನಿಮ್ಮ ದೃಷ್ಟಿ ತೀಕ್ಷ್ಣವಾಗಿದೆ ಎಂದರ್ಥ. ಆದರೆ ನೀವು ರೂಫಸ್ ಅನ್ನು ಹುಡುಕಲಾಗದಿದ್ದರೆ, ಚಿಂತಿಸಬೇಡಿ. ರೂಫಸ್ ಎಂಬ ಬೆಕ್ಕು ಬಲಭಾಗದಲ್ಲಿರುವ ದೊಡ್ಡ ನೀರಿನ ಜಗ್ ಹಿಂದೆ ಅಡಗಿಕೊಂಡಿದೆ. ಅಮೆಜಾನ್ ಪೆಟ್ಟಿಗೆಯೊಳಗಿದ್ದು, ಅದರ ಪಕ್ಕದಲ್ಲಿ ಇರಿಸಲಾದ ಬಟ್ಟೆಯ ದುಂಡಗಿನ ರಂಧ್ರದ ಮೂಲಕ ಇಣುಕುತ್ತಿರುವುದನ್ನು ಕಾಣಬಹುದು. ಪೆಟ್ಟಿಗೆಯ ಮೇಲ್ಭಾಗದಿಂದ ಬೆಕ್ಕಿನ ಮುಖ ಮತ್ತು ಕಣ್ಣುಗಳ ಒಂದು ಸಣ್ಣ ಭಾಗ ಮಾತ್ರ ಗೋಚರಿಸುತ್ತದೆ. ಸರಿಯಾಗಿ ನೋಡಿದರೆ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Tue, 14 October 25

Follow Us
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ಎಕ್ಸಾಂನಲ್ಲಿ ಟೈಮ್ ಮ್ಯಾನೇಜ್​ಮೆಂಟ್ ಮಾಡೋಕೆ ಆಗ್ತಾ ಇಲ್ವಾ?
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ತಡರಾತ್ರಿ ಗ್ರಾಮದಲ್ಲಿ ಓಡಾಡಿದ ಕಾಡಾನೆಗಳ ಹಿಂಡು!
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ಅಶೋಕ್​​ ಸ್ಫೋಟಕ ಆರೋಪ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಉದ್ಯೋಗಾಕಾಂಕ್ಷಿಗಳ ಕಿಚ್ಚು: ಅನುಮತಿ ನಿರಾಕರಣೆ ನಡುವೆಯೂ ಬೃಹತ್​ ಪ್ರತಿಭಟನೆ
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ!
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಮನೆಯಲ್ಲಿ ಅಗ್ನಿ ಅವಘಡ, ಅವಳಿ ಶಿಶುಗಳು ಸೇರಿ ಆರು ಮಂದಿ ಸಜೀವದಹನ
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ